5 ತಿಂಗಳ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದೆ ಜಮ್ಮು-ಕಾಶ್ಮೀರ

ದೆಹಲಿ: ಜಮ್ಮು-ಕಾಶ್ಮೀರ. ಒಂದು ಕಾಲದಲ್ಲಿ ಕಲ್ಲು ತೂರಾಟ, ಪ್ರತಿಭಟನೆ, ಸಂಘರ್ಷಗಳಿಂದಲೇ ಸುದ್ದಿಯಾಗ್ತಿದ್ದ ಕಣಿವೆ ಈಗ ಶಾಂತವಾಗಿದೆ. ಪ್ರತ್ಯೇಕತಾವಾದಿಗಳ ಬಾಲ ಕಟ್ ಆಗಿದೆ. ಕಿಡಿಗೇಡಿಗಳ ಕಾಟ ಕಮ್ಮಿ ಆಗಿದೆ. ಇದಕ್ಕೆಲ್ಲಾ ಕಾರಣ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿದ್ದು. ಸಹಜ ಸ್ಥಿತಿಯತ್ತ ಮರಳುತ್ತಿದೆ ಜಮ್ಮು-ಕಾಶ್ಮೀರ: ಯೆಸ್, ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಾಜಿ ಸಿಎಂಗಳು ಸೇರಿ ಹಲವು ರಾಜಕೀಯ ಮುಖಂಡರನ್ನ ಗೃಹಬಂಧನದಲ್ಲಿ ಇಡಲಾಗಿತ್ತು. […]

5 ತಿಂಗಳ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದೆ ಜಮ್ಮು-ಕಾಶ್ಮೀರ
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​

Updated on: Jan 02, 2020 | 7:11 AM

ದೆಹಲಿ: ಜಮ್ಮು-ಕಾಶ್ಮೀರ. ಒಂದು ಕಾಲದಲ್ಲಿ ಕಲ್ಲು ತೂರಾಟ, ಪ್ರತಿಭಟನೆ, ಸಂಘರ್ಷಗಳಿಂದಲೇ ಸುದ್ದಿಯಾಗ್ತಿದ್ದ ಕಣಿವೆ ಈಗ ಶಾಂತವಾಗಿದೆ. ಪ್ರತ್ಯೇಕತಾವಾದಿಗಳ ಬಾಲ ಕಟ್ ಆಗಿದೆ. ಕಿಡಿಗೇಡಿಗಳ ಕಾಟ ಕಮ್ಮಿ ಆಗಿದೆ. ಇದಕ್ಕೆಲ್ಲಾ ಕಾರಣ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿದ್ದು.

ಸಹಜ ಸ್ಥಿತಿಯತ್ತ ಮರಳುತ್ತಿದೆ ಜಮ್ಮು-ಕಾಶ್ಮೀರ:
ಯೆಸ್, ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮಾಜಿ ಸಿಎಂಗಳು ಸೇರಿ ಹಲವು ರಾಜಕೀಯ ಮುಖಂಡರನ್ನ ಗೃಹಬಂಧನದಲ್ಲಿ ಇಡಲಾಗಿತ್ತು. ಇಂಟರ್​ನೆಟ್​, ಎಸ್​ಎಂಎಸ್​ ಸೇವೆಗಳು ಸ್ಥಗಿತಗೊಂಡಿದ್ದವು.

ಇದೆಲ್ಲಾ ಆಗಿ ಬರೋಬ್ಬರಿ 5 ತಿಂಗಳ ಬಳಿಕ ಕಣಿವೆಯಲ್ಲೀಗ ಒಂದೊಂದೇ ಸೇವೆಗಳು ಪುನಾರಂಭಗೊಳ್ತಿವೆ. ಹೊಸ ವರ್ಷದ ಮೊದಲ ದಿನವಾದ ನಿನ್ನೆ ಎಸ್​ಎಂಎಸ್​ ಮತ್ತು ಇಂಟರ್​​ನೆಟ್ ಸರ್ವಿಸ್ ಮತ್ತೆ ಆರಂಭವಾಗಿದೆ. ಹೌಸ್ ಅರೆಸ್ಟ್​ನಲ್ಲಿದ್ದ ಕೆಲ ಮುಖಂಡರನ್ನ ಬಿಡುಗಡೆ ಮಾಡಲಾಗಿದೆ. ಆದ್ರೆ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಒಮರ್​ ಅಬ್ದುಲ್ಲಾಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸಧ್ಯದಲ್ಲೇ ಇವರೂ ಕೂಡ ಗೃಹಬಂಧನದಿಂದ ಮುಕ್ತವಾಗುವ ಸಾಧ್ಯತೆ ಇದೆ.

ಇನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್​ನ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇದ್ದ 33 ನಾನ್​ ಗೆಜೆಟೆಡ್​ ಹುದ್ದೆಗಳನ್ನ ಇಡೀ ಭಾರತೀಯರಿಗೆ ಮುಕ್ತಗೊಳಿಸಿ ಹೊರಡಿಸಿದ್ದ ನೇಮಕಾತಿ ಆದೇಶವನ್ನ ಹೈಕೋರ್ಟ್​ ಹಿಂಪಡೆದಿದೆ. ಡಿಸೆಂಬರ್ 26ರಂದು ಜಮ್ಮು-ಕಾಶ್ಮೀರ ಹೈಕೋರ್ಟ್ ಈ ಜಾಹೀರಾತು ಪ್ರಕಟಿಸಿತ್ತು. ಹೈಕೋರ್ಟ್ ನಡೆಗೆ ದೇಶದ ಜನ ಪ್ರಶಂಸೆ ವ್ಯಕ್ತಪಡಿಸಿದ್ರು. ಆದ್ರೀಗ ಇದ್ದಕ್ಕಿದ್ದಂತೆ ಅದನ್ನ ಹಿಂಪಡೆದುಕೊಂಡಿದೆ. ಒಟ್ನಲ್ಲಿ, ಅದೇನೇ ಇದ್ರೂ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಒಂದ್​ ರೀತಿ ಬಂಧನದಲ್ಲಿದ್ದ ಕಣಿವೆ ನಿಧಾನವಾಗಿ ಮುಕ್ತವಾಗ್ತಿದೆ. ಸ್ಥಗಿತಕೊಂಡಿದ್ದ ವಿವಿಧ ಸೇವೆಗಳು ಒಂದೊಂದಾಗಿ ಪುನಾರಂಭಗೊಳ್ಳುತ್ತಿವೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us