World Youth Skill Day 2021: ಯುವಜನರ ಕೌಶಲಾಭಿವೃದ್ಧಿ ರಾಷ್ಟ್ರೀಯ ಅಗತ್ಯತೆ: ಪ್ರಧಾನಿ ಮೋದಿ

ದೈನಂದಿನ ಅಗತ್ಯಗಳಿಗೆ ಕೌಶಲ ಅದೆಷ್ಟು ಮುಖ್ಯ ಎಂಬುದನ್ನು ವಿವರಿಸಿದ ಪ್ರಧಾನಿ ಮೋದಿ, ಗಳಿಕೆಯೊಂದಿಗೆ ಕಲಿಕೆ ನಿಲ್ಲಬಾರದು. ಕೌಶಲಗಳನ್ನು ರೂಢಿಸಿಕೊಂಡು, ನುರಿತಿರುವ ವ್ಯಕ್ತಿ ಅದ್ಭುತವಾಗಿ ಬೆಳೆಯುತ್ತಾನೆ ಎಂದು ಹೇಳಿದ್ದಾರೆ.

World Youth Skill Day 2021: ಯುವಜನರ ಕೌಶಲಾಭಿವೃದ್ಧಿ ರಾಷ್ಟ್ರೀಯ ಅಗತ್ಯತೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on: Jul 15, 2021 | 6:17 PM

ಈಗಿನ ಹೊಸ ಪೀಳಿಗೆಯ ಯುವಜನರ ಕೌಶಲಾಭಿವೃದ್ಧಿ ಮಾಡುವುದು ರಾಷ್ಟ್ರೀಯ ಅಗತ್ಯಗಳಲ್ಲಿ ಒಂದು. ನಮ್ಮ ನೂತನ ಯೋಜನೆ ಆತ್ಮನಿರ್ಭರ ಭಾರತಕ್ಕೆ ಬಹುದೊಡ್ಡ ಅಡಿಪಾಯವೂ ಹೌದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿದರು. ಇಂದು ವಿಶ್ವ ಯುವ ಕೌಶಲಾಭಿವೃದ್ಧಿ ದಿನದ ನಿಮಿತ್ತ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕೊರೊನಾ ಸಾಂಕ್ರಾಮಿಕ ಕಾರಣದ ಮಧ್ಯೆ ಇಂದು ಎರಡನೇ ಬಾರಿಗೆ ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುತ್ತಿದ್ದೇವೆ. ಈ ಜಾಗತಿಕ ಸಾಂಕ್ರಾಮಿಕ ರೋಗ ವಿಶ್ವ ಯುವ ಕೌಶಲ್ಯ ದಿನದ ಮಹತ್ವವನ್ನು ಹೆಚ್ಚಿಸಿದೆ ಎಂದರು.

ನಮ್ಮ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಸುಮಾರು 1.25 ಕೋಟಿ ಯುವಕರು ತರಬೇತಿ ಪಡೆಯುತ್ತಿದ್ದಾರೆ. ಇದು ತುಂಬ ಸಂತೋಷದ ವಿಷಯ ಎಂದು ಹೇಳಿದ ಪ್ರಧಾನಿ ಮೋದಿ, ಕೌಶಲ, ಮರು ಕೌಶಲ ಮತ್ತು ಕೌಶಲ ವೃದ್ಧಿಯ ಬಗ್ಗೆ ಮರು ಉಚ್ಚರಿಸಿದರು. ಈ ದೇಶದ ಯುವಕರಲ್ಲಿ ಕೌಶಲಾಭಿವೃದ್ಧಿ ಮಾಡುವ ಅಗತ್ಯತೆ ಎಷ್ಟಿದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.  ಯುವಜನರನ್ನು ಕೌಶಲ, ಮರುಕೌಶಲ, ಕೌಶಲ ವೃದ್ಧಿಗೆ ತೆರೆದುಕೊಳ್ಳುವಂತೆ ಮಾಡುವ ಯೋಜನೆ ಅವಿರತವಾಗಿ ಸಾಗಬೇಕು. ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವುದರಿಂದ ಕೌಶಲಾಭಿವೃದ್ಧಿ ಕಾರ್ಯ ತ್ವರಿತವಾಗಿ, ಆದ್ಯತೆ ಮೇರೆಗೆ ನಡೆಯಬೇಕು ಎಂದೂ ತಿಳಿಸಿದರು.

ದೈನಂದಿನ ಅಗತ್ಯಗಳಿಗೆ ಕೌಶಲ ಅದೆಷ್ಟು ಮುಖ್ಯ ಎಂಬುದನ್ನು ವಿವರಿಸಿದ ಪ್ರಧಾನಿ ಮೋದಿ, ಗಳಿಕೆಯೊಂದಿಗೆ ಕಲಿಕೆ ನಿಲ್ಲಬಾರದು. ಕೌಶಲಗಳನ್ನು ರೂಢಿಸಿಕೊಂಡು, ನುರಿತಿರುವ ವ್ಯಕ್ತಿ ಅದ್ಭುತವಾಗಿ ಬೆಳೆಯುತ್ತಾನೆ. ಕೌಶಲಯುತ ಮತ್ತು ಸ್ಮಾರ್ಟ್ ಆಗಿರುವ ಮಾನವ ಶಕ್ತಿಯನ್ನು ಜಗತ್ತಿಗೆ ನೀಡುವ ಭಾರತದ ಪರಿಕಲ್ಪನೆ ಸಾಕಾರವಾಗಲು ಯುವಜನರಲ್ಲಿ ಸ್ಕಿಲ್ ಡೆವಲಪ್ಮೆಂಟ್ ತುಂಬ ಮುಖ್ಯ ಎಂದು ನರೇಂದ್ರ ಮೋದಿ ಹೇಳಿದರು. ಹಾಗೇ, ದುರ್ಬಲ ವರ್ಗದವರಲ್ಲಿ ಕೌಶಲ ಬೆಳೆಸಲು ಒತ್ತುಕೊಟ್ಟ ಬಾಬಾ ಸಾಹೇಬ್​ ಅಂಬೇಡ್ಕರ್​ ಅವರನ್ನೂ ಉಲ್ಲೇಖಿಸಿದರು.

ಇದನ್ನೂ ಓದಿ: Jair Bolsonaro: 10 ದಿನಗಳಿಂದಲೂ ನಿಲ್ಲದ ಬಿಕ್ಕಳಿಕೆ; ಆಸ್ಪತ್ರೆಗೆ ದಾಖಲಾದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ