Jair Bolsonaro: 10 ದಿನಗಳಿಂದಲೂ ನಿಲ್ಲದ ಬಿಕ್ಕಳಿಕೆ; ಆಸ್ಪತ್ರೆಗೆ ದಾಖಲಾದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ
2018ರಲ್ಲಿ ಚುನಾವಣಾ ಪ್ರಚಾರದ ವೇಳೆ ಜೈರ್ ಬೋಲ್ಸೋನಾರೋ ಚೂರಿ ಇರಿತಕ್ಕೆ ಒಳಗಾಗಿದ್ದರು. ಅದು ಕರುಳಿಗೂ ತಗುಲಿತ್ತು. ಅಂದಿನಿಂದಲೂ ಜೈರ್ ಆರೋಗ್ಯದ ಬಗ್ಗೆ ಸಹಜವಾಗಿಯೇ ಕಳವಳ ಇದೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ (66) ಅವರು ತುರ್ತಾಗಿ ಸರ್ಜರಿಗೆ ಒಳಗಾಗಿರಬೇಕಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೈರ್ ಅವರಿಗೆ ಕಳೆದ 10 ದಿನಗಳಿಂದಲೂ ಒಂದೇ ಸಮ ಬಿಕ್ಕಳಿಕೆ ಬರುತ್ತಿದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆಗಳನ್ನು ಮಾಡಲಾಗಿದ್ದು, ಕರುಳಿಗೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ವರದಿ ಬಂದಿದೆ. ಕೂಡಲೇ ಸರ್ಜರಿ ಆಗಬೇಕಿದೆ.
ಇನ್ನು ಟ್ವೀಟ್ ಮಾಡಿರುವ ಜೈರ್ ಬೋಲ್ಸೋನಾರೋ, ನಾನು ಆದಷ್ಟು ಶೀಘ್ರವೇ ಹಿಂತಿರುಗುತ್ತೇನೆ ಎಂಬ ನಂಬಿಕೆಯಿದೆ. ಎಲ್ಲವೂ ದೇವರ ಇಚ್ಛೆ ಎಂದು ಹೇಳಿದ್ದಾರೆ. 2018ರಲ್ಲಿ ಚುನಾವಣಾ ಪ್ರಚಾರದ ವೇಳೆ ಜೈರ್ ಬೋಲ್ಸೋನಾರೋ ಚೂರಿ ಇರಿತಕ್ಕೆ ಒಳಗಾಗಿದ್ದರು. ಅದು ಕರುಳಿಗೂ ತಗುಲಿತ್ತು. ಅಂದಿನಿಂದಲೂ ಜೈರ್ ಆರೋಗ್ಯದ ಬಗ್ಗೆ ಸಹಜವಾಗಿಯೇ ಕಳವಳ ಇದೆ. ಅಂದು ಜೈರ್ ಬೋಲ್ಸೋನಾರೋ ತುಂಬ ಗಂಭೀರವಾಗಿ ಗಾಯಗೊಂಡಿದ್ದರು ಮತ್ತು ಅವರ ದೇಹದ ಶೇ.40ರಷ್ಟು ರಕ್ತವನ್ನು ಕಳೆದುಕೊಂಡಿದ್ದರು.
ಅಂದು ಚೂರಿ ಇರಿತಕ್ಕೆ ಒಳಗಾದಾಗಿನಿಂದಲೂ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನಿನ್ನೆ ಬುಧವಾರ ಬ್ರೆಸಿಲಿಯಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ತೆರಳಿದ್ದರು. 48 ಗಂಟೆಗಳ ಕಾಲ ಅಬ್ಸರ್ವೇಶನ್ನಲ್ಲಿರುವಂತೆ ವೈದ್ಯರು ಸೂಚಿಸಿದ್ದರು. ನಂತರ 2018ರಲ್ಲಿ ಜೈರ್ ಅವರಿಗೆ ಸರ್ಜರಿ ಮಾಡಿದ ವೈದ್ಯರ ಸೂಚನೆ ಮೇರೆಗೆ ಸಾ ಪೌಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾ ಅಲೆ ಶುರುವಾದ ಮೇಲೆ ಜೈರ್ ಬೋಲ್ಸೋನಾರೋ ಒಟ್ಟು ಮೂರು ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿ, ಯಶಸ್ವಿಯಾಗಿ ಸೋಂಕನ್ನು ಮಣಿಸಿದ್ದರು.
Brazil’s President Jair Bolsonaro in hospital Due to chronic hiccups
Published On - 6:01 pm, Thu, 15 July 21