Coronavirus cases in India: ದೇಶದಲ್ಲಿ 35,342 ಹೊಸ ಕೊವಿಡ್ ಪ್ರಕರಣ ಪತ್ತೆ, 483 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Jul 23, 2021 | 10:39 AM

Covid 19: ಕೊವಿಡ್ -19  ಸಕ್ರಿಯ ಪ್ರಕರಣಗಳು3,881 ರಷ್ಟು ಕುಸಿತ ಕಂಡು ಬಂದು  4,05,513ಗೆ ತಲುಪಿದೆ.ಇದು ಒಟ್ಟು ಒಟ್ಟು ಪ್ರಕರಣಗಳ ಶೇ 1.3 ನಷ್ಟಿದೆ. ಕಳೆದ 24 ಗಂಟೆಗಳಲ್ಲಿ 38,740 ಚೇತರಿಕೆಗಳು ಕಂಡುಬಂದಿದ್ದು, ಇದುವರೆಗೆ  3,04,68,079 ಮಂದಿ ಚೇತರಿಸಿಕೊಂಡಿದ್ದಾರೆ.

Coronavirus cases in India: ದೇಶದಲ್ಲಿ 35,342 ಹೊಸ ಕೊವಿಡ್ ಪ್ರಕರಣ ಪತ್ತೆ, 483 ಮಂದಿ ಸಾವು
ಸೋನಿತ್​​ಪುರ್​​ನಲ್ಲಿ ಲಸಿಕೆ ಪಡೆಯಲು ನಿಂತಿರುವ ಜನರು
Follow us on

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 35,342 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು ಶುಕ್ರವಾರ ಈ ಪ್ರಕರಣಗಳಲ್ಲಿ ಸ್ವಲ್ಪ ಕುಸಿತ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. 483 ಸಾವುಗಳು ವರದಿ ಆಗಿದ್ದು ಸಾವಿನ ಸಂಖ್ಯೆ 419,470 ಕ್ಕೆ ತಲುಪಿದೆ.

ಕೊವಿಡ್ -19  ಸಕ್ರಿಯ ಪ್ರಕರಣಗಳು3,881 ರಷ್ಟು ಕುಸಿತ ಕಂಡು ಬಂದು  4,05,513ಗೆ ತಲುಪಿದೆ.ಇದು ಒಟ್ಟು ಒಟ್ಟು ಪ್ರಕರಣಗಳ ಶೇ 1.3 ನಷ್ಟಿದೆ. ಕಳೆದ 24 ಗಂಟೆಗಳಲ್ಲಿ 38,740 ಚೇತರಿಕೆಗಳು ಕಂಡುಬಂದಿದ್ದು, ಇದುವರೆಗೆ  3,04,68,079 ಮಂದಿ ಚೇತರಿಸಿಕೊಂಡಿದ್ದಾರೆ.  42,34,17,030  ಮಂದಿ ಲಸಿಕೆ ಪಡೆದಿದ್ದಾರೆ.

ಕೊರೊನಾವೈರಸ್ ಸೋಂಕನ್ನು ಪತ್ತೆಹಚ್ಚಲು 16,68,561 ಪರೀಕ್ಷೆಗಳನ್ನು ಗುರುವಾರ ನಡೆಸಲಾಗಿದ್ದು, ದೇಶದಲ್ಲಿ ಈವರೆಗೆ ನಡೆಸಿದ ಒಟ್ಟು ಪರೀಕ್ಷೆಗಳ ಸಂಖ್ಯೆಯನ್ನು 45,29,39,545 ಕ್ಕೆ ತಲುಪಿದೆ. ದೈನಂದಿನ ಸಕಾರಾತ್ಮಕತೆಯ ಪ್ರಮಾಣವು ಶೇಕಡಾ 2.12 ರಷ್ಟಿದೆ. ಸತತ 32 ದಿನಗಳಿಂದ ಇದು ಶೇಕಡಾ ಮೂರು ಕ್ಕಿಂತ ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸಾಪ್ತಾಹಿಕ ಸಕಾರಾತ್ಮಕ ದರವು ಶೇಕಡಾ 2.14 ರಷ್ಟಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,04,68,079 ಕ್ಕೆ ಏರಿದೆ. ಇದು ಪ್ರಕರಣದ ಸಾವಿನ ಪ್ರಮಾಣ ಶೇಕಡಾ 1.34 ರಷ್ಟಿದೆ ಎಂದು ಡೇಟಾ ತಿಳಿಸಿದೆ.

ದೇಶದಲ್ಲಿ ಇಲ್ಲಿಯವರೆಗೆ ನೀಡಲಾದ ಕೊವಿಡ್ ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ 42.34 ಕೋಟಿ ತಲುಪಿದೆ. ಭಾರತದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಕಳೆದ ವರ್ಷ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ಗಡಿ ದಾಟಿದೆ. ಇದು ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿದೆ. ಕಳೆದ ವರ್ಷ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ದಾಟಿದೆ. ಭಾರತ ಈ ವರ್ಷ ಮೇ 4 ರಂದು ಎರಡು ಕೋಟಿ ಕೊವಿಡ್ ಪ್ರಕರಣಗಳ ಮತ್ತು ಜೂನ್ 23 ರಂದು ಮೂರು ಕೋಟಿ ದಾಟಿತ್ತು.

ರಾಜಸ್ಥಾನದಲ್ಲಿ ಕೊವಿಡ್ ಲಸಿಕೆ ಕೊರತೆಯಿಂದಾಗಿ 30 ಲಕ್ಷ ಮಂದಿಗೆ ಎರಡನೇ ಡೋಸ್ ಸಿಕ್ಕಿಲ್ಲ
ಕೊವಿಶೀಲ್ಡ್ ಲಸಿಕೆಗಾಗಿ ಕಡ್ಡಾಯವಾಗಿ 12-16 ವಾರಗಳ ಕಾಯುವಿಕೆ ಮತ್ತು ಕೊವಾಕ್ಸಿನ್‌ಗೆ 4-6 ವಾರಗಳ ಕಾಯುವಿಕೆ ಪೂರ್ಣಗೊಳಿಸಿದರೂ, ಲಸಿಕೆ ಕೊರತೆಯಿಂದಾಗಿ ರಾಜಸ್ಥಾನದಲ್ಲಿ ಸುಮಾರು 30 ಲಕ್ಷ ಜನರು ತಮ್ಮ ಎರಡನೇ ಕೊವಿಡ್ ಡೋಸ್‌ ವಂಚಿತರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 8,94,565 ಜನರು ತಮ್ಮ ಎರಡನೇ ಡೋಸ್ ಕೊವಾಕ್ಸಿನ್ ಕಾಯುತ್ತಿದ್ದಾರೆ ಮತ್ತು 20,97,150 ಜನರು ಕೊವಿಶೀಲ್ಡ್ ಗಾಗಿ ಕಾಯುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ 20 ಲಕ್ಷ ಜನರು ತಮ್ಮ ಎರಡನೇ ಡೋಸ್‌ ಪಡೆಯುವವರಿದ್ದಾರೆ.

ಆರೋಗ್ಯ ಕಾರ್ಯದರ್ಶಿ ಸಿದ್ಧಾರ್ಥ್ ಮಹಾಜನ್ ಮಾತನಾಡಿ, ರಾಜ್ಯವು ಈಗಿನಂತೆ ಶೇಕಡಾ 70 ರಷ್ಟು ಲಸಿಕೆಗಳನ್ನು ಎರಡನೇ ಪ್ರಮಾಣಕ್ಕೆ ಮತ್ತು ಉಳಿದವುಗಳನ್ನು ಮೊದಲ ಪ್ರಮಾಣಕ್ಕೆ ಮೀಸಲಿಟ್ಟಿದೆ.
ಜುಲೈನಲ್ಲಿ ರಾಜಸ್ಥಾನಕ್ಕೆ 65 ಲಕ್ಷ ಡೋಸ್ ಹಂಚಿಕೆ ಮಾಡಲಾಗಿದ್ದು, ಅದರಲ್ಲಿ 42 ಲಕ್ಷಗಳನ್ನು ಸ್ವೀಕರಿಸಲಾಗಿದೆ ಎಂದು ರಾಜ್ಯ ರೋಗನಿರೋಧಕ ಯೋಜನಾ ನಿರ್ದೇಶಕ ರಘುರಾಜ್ ಸಿಂಗ್ ಹೇಳಿದ್ದಾರೆ. ರಾಜ್ಯದ ಲಸಿಕೆ ದಾಸ್ತಾನು ಖಾಲಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Tokyo Olympics: ಕೊವಿಡ್ ಸುರಕ್ಷತೆ ಹಿನ್ನೆಲೆಯಲ್ಲಿ ಪ್ರತಿ ದೇಶದ ಕೆಲವು ಅಥ್ಲೀಟ್​ಗಳಿಗೆ ಮಾತ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ

(Slight dip in the cases of Coronavirus disease India reports 35,342 new cases 483 fatalities)

 

Published On - 10:28 am, Fri, 23 July 21