2019ರ ಚುನಾವಣೆ ವೇಳೆ ​ನನ್ನ ಮೇಲೆ ಗುಂಡಿನ ದಾಳಿಗೆ ಯತ್ನಿಸಿತ್ತು ಕಾಂಗ್ರೆಸ್: ಸ್ಮೃತಿ ಇರಾನಿ

ಕಳೆದ ಚುನಾವಣೆ ವೇಳೆ ಕಾಂಗ್ರೆಸ್​ ನನ್ನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲು ಯೋಜಿಸಿದ್ದರು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಇದು ನಾನು ಕಾಂಗ್ರೆಸ್​ ಮೇಲೆ ಮಾಡುತ್ತಿರುವ ಆರೋಪ ಎಂದು ಭಾವಿಸಬೇಡಿ, ಪತ್ರಕರ್ತರಿಗೂ ಈ ವಿಷಯ ತಿಳಿದಿದೆ, ಗಾಂಧಿ ಕುಟುಂಬದ ಭಯ ಮತದಾರರಿಗೆ ಮಾತ್ರವಲ್ಲ ಪತ್ರಕರ್ತರಿಗೂ ಇತ್ತು ಎಂದರು.

2019ರ ಚುನಾವಣೆ ವೇಳೆ ​ನನ್ನ ಮೇಲೆ ಗುಂಡಿನ ದಾಳಿಗೆ ಯತ್ನಿಸಿತ್ತು ಕಾಂಗ್ರೆಸ್: ಸ್ಮೃತಿ ಇರಾನಿ
ಸ್ಮೃತಿ ಇರಾನಿ

Updated on: May 17, 2024 | 2:15 PM

2019ರ ಲೋಕಸಭಾ ಚುನಾವಣೆ(Lok Sabha Election) ವೇಳೆ ಕಾಂಗ್ರೆಸ್​ ನನ್ನ ಕಾರಿನ ಮೇಲೆ ಗುಂಡಿನ ದಾಳಿಗೆ ಯತ್ನಿಸಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ(Smriti Irani) ಹೇಳಿದ್ದಾರೆ. ಇದು ನಾನು ಕಾಂಗ್ರೆಸ್​ ಮೇಲೆ ಮಾಡುತ್ತಿರುವ ಆರೋಪ ಎಂದು ಭಾವಿಸಬೇಡಿ, ಪತ್ರಕರ್ತರಿಗೂ ಈ ವಿಷಯ ತಿಳಿದಿದೆ, ಗಾಂಧಿ ಕುಟುಂಬದ ಭಯ ಮತದಾರರಿಗೆ ಮಾತ್ರವಲ್ಲ ಪತ್ರಕರ್ತರಿಗೂ ಇತ್ತು ಎಂದರು.

ಈ ಹಿಂದೆ ಅಮೇಥಿಯಲ್ಲಿ ಬೂತ್ ವಶಪಡಿಸಿಕೊಳ್ಳುವಿಕೆ ಹಾಗೂ ರಾಜಕೀಯ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಈ ಘಟನೆಗಳು ವರದಿಯಾಗದಂತೆ ಗಾಂಧಿ ಕುಟುಂಬ ನೋಡಿಕೊಂಡಿದೆ. ಬಿಜೆಪಿ ಸಂಸದೆ ಮೇನಕಾ ಗಾಂಧಿ ಮೇಲೂ ಕಾಂಗ್ರೆಸ್​ ಗೂಂಡಾಗಳು ಹಲ್ಲೆ ನಡೆಸಿದ್ದರು.

ರಾಜೀವ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸುಲಭವಾಗಿರಲಿಲ್ಲ, ಕಾಂಗ್ರೆಸ್​ನಿಂದ ಹಲ್ಲೆಗೊಳಗಾಗಿದ್ದರು.

ಗ್ಲಾಮರ್ ಪ್ರಪಂಚದಿಂದ ರಾಜಕೀಯಕ್ಕೆ ಪ್ರವೇಶಿಸಲು ತಾನು ನಡೆಸಿದ ಹೋರಾಟದ ಬಗ್ಗೆ ಮಾತನಾಡುತ್ತಾ, ರಾಹುಲ್​ ಗಾಂಧಿ ರೀತಿಯ ಹಿನ್ನೆಲೆ ಹೊಂದಿಲ್ಲ ಎಂದರು.

ಮತ್ತಷ್ಟು ಓದಿ: ಬಸ್​ನಲ್ಲಿ ಕರ್ಚೀಫ್​ ಹಾಕಿ ಸೀಟು ಹಿಡಿದಂತಲ್ಲ ರಾಜಕಾರಣ: ಸ್ಮೃತಿ ಇರಾನಿ

ಮುಲಾಯಂ ಸಿಂಗ್ ಯಾದವ್ ಅವರ ನೆರವಿನಿಂದ 2014ರಲ್ಲೂ ರಾಹುಲ್ ಕೇವಲ 1.07 ಲಕ್ಷ ಮತಗಳಿಂದ ಗೆದ್ದಿದ್ದರು ಎಂದು ಹೇಳಿದರು.

ಸ್ಮೃತಿ ಇರಾನಿ ವಿಡಿಯೋ

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಭದ್ರಕೋಟೆಯಾದ ಅಮೇಥಿಯನ್ನು ಭೇದಿಸಿದ ಇರಾನಿ, ರಾಹುಲ್​ ಗಾಂಧಿಯನ್ನು ಹೀನಾಯವಾಗಿ ಸೋಲಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us