Watch: ಅಯೋಧ್ಯೆ ರಾಮಮಂದಿರ ಹೇಗಿದೆ?; ಇಲ್ಲಿದೆ ರಾಮನ ಭವ್ಯ ದೇಗುಲದ ಒಂದು ನೋಟ

|

Updated on: Jan 20, 2024 | 1:07 PM

ಭವ್ಯವಾದ ರಾಮ ಮಂದಿರದ ಒಳಗೆ ವಿಶೇಷವಾದ ಮೊದಲ ನೋಟ ! ಕರಕುಶಲತೆಯು ವಿಸ್ಮಯಕಾರಿಯಾಗಿದೆ, ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ" ಎಂದು ಡಿಡಿ ನ್ಯೂಸ್ ಈ ವಿಡಿಯೊಗೆ ಶೀರ್ಷಿಕೆ ನೀಡಿದೆ. ಜನವರಿ 22 ರಂದು ಮಧ್ಯಾಹ್ನ 12.30 ಕ್ಕೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಪ್ರಾರಂಭವಾಗಲಿ

Watch: ಅಯೋಧ್ಯೆ ರಾಮಮಂದಿರ ಹೇಗಿದೆ?; ಇಲ್ಲಿದೆ ರಾಮನ ಭವ್ಯ ದೇಗುಲದ ಒಂದು ನೋಟ
ಅಯೋಧ್ಯೆ ರಾಮ ಮಂದಿರ
Follow us on

ದೆಹಲಿ ಜನವರಿ 20 : ಅಯೋಧ್ಯೆಯ (Ayodhya) ರಾಮ ಮಂದಿರದ (Ram mandir) ಉದ್ಘಾಟನೆಗ ಇನ್ನೆರಡು ದಿನಗಳು ಬಾಕಿ ಉಳಿದಿದ್ದು, ಭಗವಾನ್ ರಾಮಲಲ್ಲಾ (Ram lalla) ಅವರ ಭವ್ಯವಾದ ದೇಗುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಸಜ್ಜಾಗುತ್ತಿದೆ. ಡಿಡಿ ನ್ಯೂಸ್‌ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಭವ್ಯವಾದ ದೇವಾಲಯದ ಒಳಗಿನ ನೋಟವನ್ನು ಕಾಣಬಹುದು, ಅದರ ಕಂಬಗಳು ಮತ್ತು ಕಾಲಮ್‌ಗಳನ್ನು ಹೂವಿನ ಬೊಕೆಗಳಿಂದ ಅಲಂಕರಿಸಲಾಗಿರುವುದರಿಂದ ಭವ್ಯವಾದ ಅಮೃತಶಿಲೆಯ ರಚನೆ ಬೆಳಕಿನಿಂದಾಗಿ ಹೊಳೆಯುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ದೇವಾಲಯದ ಒಳಗೆ, ಏಣಿ ಮೇಲೆ ನಿಂತು ಕೆಲಸಗಾರರು ಸೀಲಿಂಗ್‌ನಿಂದ ಬಹುವರ್ಣದ ಹೂವಿನ ಹಾರಗಳನ್ನು ನೇತುಹಾಕುತ್ತಿರುವುದನ್ನು ಕಾಣಬಹುದು.

“ಭವ್ಯವಾದ ರಾಮ ಮಂದಿರದ ಒಳಗೆ ವಿಶೇಷವಾದ ಮೊದಲ ನೋಟ ! ಕರಕುಶಲತೆಯು ವಿಸ್ಮಯಕಾರಿಯಾಗಿದೆ, ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ” ಎಂದು ಡಿಡಿ ನ್ಯೂಸ್ ಈ ವಿಡಿಯೊಗೆ ಶೀರ್ಷಿಕೆ ನೀಡಿದೆ. ಜನವರಿ 22 ರಂದು ಮಧ್ಯಾಹ್ನ 12.30 ಕ್ಕೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಪ್ರಾಣ ಪ್ರತಿಷ್ಠೆಗೆ ಪೂರ್ವಭಾವಿಯಾಗಿ ಒಂದು ವಾರದಿಂದ ಧಾರ್ಮಿಕ ವಿಧಿ ವಿಧಾನಗಳು ನಡೆದು ಬರುತ್ತಿವೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡ ಸಮಾರಂಭದ ಪ್ರಮುಖ ವಿಧಿವಿಧಾನಗಳನ್ನು ನೆರವೇರಿಸಲಿದೆ.

ಭಗವಾನ್ ರಾಮ್ ಲಲ್ಲಾ ವಿಗ್ರಹವನ್ನು ಗರ್ಭಗುಡಿಯಲ್ಲಿರಿಸಲಾಗುವುದು. ಇದು 51 ಇಂಚಿನ ವಿಗ್ರಹವಾಗಿದೆ, ಇದು ಐದು ವರ್ಷಗಳ ವಯಸ್ಸಿನಲ್ಲಿ ಭಗವಾನ್ ರಾಮನ ಚಿತ್ರಣವಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಿಂದ ವಿಗ್ರಹವನ್ನು ಕೆತ್ತಿದ್ದಾರೆ.
ಈ ಭವ್ಯ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹತ್ತಾರು ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ ಆಹ್ವಾನಿಸಲಾದ 8,000 ಅತಿಥಿಗಳಲ್ಲಿ ಉದ್ಯಮಿ ಮುಖೇಶ್ ಅಂಬಾನಿ, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ಸೇರಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಪ್ರತಿ ದಿನ ಮುಂಜಾನೆ 1 ಗಂಟೆ ವಿಶೇಷ ಮಂತ್ರ ಪಠಿಸುವ ಪ್ರಧಾನಿ ಮೋದಿ

ವೈರಲ್ ಆಗುತ್ತಿರುವ ರಾಮ ಲಲ್ಲಾ ಮೂರ್ತಿ ನಿಜವಾದುದಲ್ಲ

ಹಲವಾರು ರಾಜ್ಯಗಳಲ್ಲಿ ಸರ್ಕಾರಿ ಕಚೇರಿಗಳು, ಮಂಡಳಿಗಳು ಮತ್ತು ನಿಗಮಗಳು ಜನವರಿ 22 ರಂದು ಅರ್ಧ ದಿನ ಅಥವಾ ರಜೆ ಘೋಷಿಸಿವೆ.
ಅಯೋಧ್ಯೆಯ ರಾಮ ಮಂದಿರದಗರ್ಭಗುಡಿಯಲ್ಲಿ ಸ್ಥಾಪಿಸಿರುವ ಬಾಲ ರಾಮ ಅಥವಾ ರಾಮ ಲಲ್ಲಾನ ಮೂರ್ತಿಯದ್ದು ಎನ್ನಲಾದ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೊ ನಿಜವಾದುದಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್  ಹೇಳಿದರು. ರಾಮ ಲಲ್ಲಾ ಮೂರ್ತಿಯದ್ದು ಎನ್ನಲಾದ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ ಅವರು ಈ ಸ್ಪಷ್ಟೀಕರಣ ನೀಡಿದರು. ರಾಮ ಲಲ್ಲಾ ಮೂರ್ತಿಯ ಚಿತ್ರ ಹೇಗೆ ಸೋರಿಕೆಯಾಯಿತು ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Sat, 20 January 24