
ಯೋಗಿ ಆದಿತ್ಯನಾಥ್ ಸರ್ಕಾರ ಅಯೋಧ್ಯೆಯನ್ನು ಮಾದರಿ ಸೌರ ನಗರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಭಾರತದಲ್ಲಿ ಪ್ರಥಮ ಬಾರಿಗೆ ಸೋಲಾರ್ ಬೋಟ್(Solar Boat) ಮೂಲಕ ಸರಯು ಯಾತ್ರೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಸರಯೂ ನದಿ(Saryu River)ಯಲ್ಲಿ ಸೌರ ಶಕ್ತಿಯ ಇ-ಬೋಟ್ ಅನ್ನು ಪ್ರಾರಂಭಿಸಲಾಗಿದೆ. ಉತ್ತರ ಪ್ರದೇಶ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಂಸ್ಥೆ (UPNEDA) ಅಯೋಧ್ಯೆಯ ಸರಯೂ ನದಿಯಲ್ಲಿ ಬೋಟ್ ಸೇವೆಯ ನಿಯಮಿತ ಕಾರ್ಯಾಚರಣೆಗೆ ರೂಪುರೇಷೆ ಸಿದ್ಧಪಡಿಸಿದೆ.
ಸರಯೂ ಘಾಟ್‌ನ ದಡದಲ್ಲಿ ದೋಣಿಯನ್ನು ಜೋಡಿಸಲು, ಪ್ರತಿ ಮೂಲೆಯಿಂದ ಬಿಡಿ ಭಾಗಗಳು ಮತ್ತು ಇತರ ಉಪಕರಣಗಳನ್ನು ತರಲಾಗಿದೆ. ಪ್ರಸ್ತುತ, ಒಂದು ಬೋಟ್ ಮುಗಿದ ನಂತರ, ಪರೀಕ್ಷಾ ಹಂತದ ಪ್ರಕ್ರಿಯೆ ನಡೆಯುತ್ತಿದೆ.
ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಲಾರ್ ಬೋಟ್ ಉದ್ಘಾಟಿಸಬಹುದು ಎಂದು ಹೇಳಲಾಗುತ್ತಿದೆ.
ವಿದ್ಯುತ್ಶಕ್ತಿ ಮೂಲಕವೂ ಕಾರ್ಯನಿರ್ವಹಿಸಬಹುದು
ಮುಂದಿನ ದಿನಗಳಲ್ಲಿ ನಿಯಮಿತವಾಗಿ ಬೋಟ್ ಕಾರ್ಯಾಚರಣೆ ನಡೆಸಲಾಗುತ್ತದೆ. ಡ್ಯುಯಲ್ ಮೋಡ್ ಆಪರೇಟಿಂಗ್ ಬೋಟ್ ಆಗಿದ್ದು 100 ಪ್ರತಿಶತ ಸೌರ ವಿದ್ಯುತ್ ಬೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಸೌರಶಕ್ತಿಯಿಂದ ಚಾರ್ಜ್ ಮಾಡುವುದರ ಹೊರತಾಗಿ, ಇದನ್ನು ವಿದ್ಯುತ್ ಶಕ್ತಿಯ ಮೂಲಕವೂ ನಿರ್ವಹಿಸಬಹುದು.
ಅತ್ಯಂತ ಮುಖ್ಯವಾದ ವಿಷಯವೆಂದರೆ ಬೋಟ್ಕ್ಯಾಟಮರನ್ ವರ್ಗಕ್ಕೆ ಸೇರಿದೆ. ಫೈಬರ್ಗ್ಲಾಸ್ ಬೋಡಿಡ್ ಬೋಟ್ ಕಡಿಮೆ ತೂಕ ಮತ್ತು ಭಾರೀ ಕಾರ್ಯಾಚರಣೆಯ ಬಾಳಿಕೆ ಬರುವ ವಸ್ತುಗಳಿಂದ ಮಾಡಲ್ಪಡಲಿದೆ.
ಮತ್ತಷ್ಟು ಓದಿ: Ram Mandir Inauguration: ರಾಮಮಂದಿರ ನಿರ್ಮಾಣವೇ ಕನಸು, ಒಂದು ರೂಪಾಯಿಯನ್ನೂ ಪಡೆಯದೆ ಹೋರಾಡಿದ ವಕೀಲರ ಕುಟುಂಬ
ಶಬ್ದವೂ ಇಲ್ಲ, ಪರಿಸರ ಮಾಲಿನ್ಯವೂ ಇಲ್ಲ
ದೋಣಿಯ ಕಾರ್ಯಾಚರಣೆಯಲ್ಲಿ ಯಾವುದೇ ಶಬ್ದ ಅಥವಾ ಪರಿಸರ ಮಾಲಿನ್ಯವಿರುವುದಿಲ್ಲ. ಇದರಲ್ಲಿ ಏಕಕಾಲಕ್ಕೆ 30 ಮಂದಿ ಪ್ರಯಾಣಿಸಬಹುದಾಗಿದೆ. ಭಕ್ತರು ಸರಯೂ ನದಿಯ ದಡದಲ್ಲಿರುವ ವಿವಿಧ ಐತಿಹಾಸಿಕ ದೇವಾಲಯಗಳು ಮತ್ತು ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ದೋಣಿಯ ಕಾರ್ಯಾಚರಣೆಯ ಸಾಮರ್ಥ್ಯವು ಸಾಕಷ್ಟು ಹೆಚ್ಚಾಗುತ್ತದೆ. ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ, 5 ರಿಂದ 6 ಗಂಟೆಗಳ ಕಾಲ ಪ್ರೊಪಲ್ಷನ್ ಟೈಮ್‌ಫ್ರೇಮ್ ಅನ್ನು ನಿರ್ವಹಿಸಬಹುದು.
ಈ ಸಂಸ್ಥೆಗೆ ಬೋಟ್ ತಯಾರಿಕೆಯ ಜವಾಬ್ದಾರಿ
ಪುಣೆಯ ಸನ್ನಿ ಬೋಟ್ಸ್ ಪ್ರೈವೇಟ್ ಲಿಮಿಟೆಡ್ ಈ ಜವಾಬ್ದಾರಿ ಹೊತ್ತಿದೆ. ಚೆನ್ನೈನ ರಾ ಸೋರ್ಸ್ ಪ್ರೈವೇಟ್ ಲಿಮಿಟೆಡ್ ದೋಣಿಯಲ್ಲಿ ಸೋಲಾರ್ ಮತ್ತು ಪ್ರೊಪಲ್ಷನ್ ಪಾಲುದಾರನ ಪಾತ್ರವನ್ನು ನಿರ್ವಹಿಸುತ್ತಿದೆ.
UPNEDA ಪ್ರಾಜೆಕ್ಟ್ ಮ್ಯಾನೇಜರ್ ಪ್ರವೀಣ್ ನಾಥ್ ಪಾಂಡೆ ಮಾತನಾಡಿ, ಬೋಟ್ 12 ಕಿಲೋವ್ಯಾಟ್ ಎಲೆಕ್ಟ್ರಿಕ್ ಔಟ್‌ಬೋರ್ಡ್ ಟ್ವಿನ್ ಮೋಟರ್ ಅನ್ನು ಹೊಂದಿರುತ್ತದೆ. ಬೋಟ್ನಲ್ಲಿ 46 kWh ಸಾಮರ್ಥ್ಯದ ವಿದ್ಯುತ್ ಬ್ಯಾಟರಿಯನ್ನು ಅಳವಡಿಸಲಾಗಿರುತ್ತದೆ ಮತ್ತು 30 ಪ್ರಯಾಣಿಕರಿಗೆ ಮತ್ತು 2 ಸಿಬ್ಬಂದಿ ಪ್ರಯಾಣಿಸಬಹುದು.
17 ಮತ್ತು 18ರ ನಡುವೆ ವಿವಿಧ ಪರೀಕ್ಷಾ ಕಾರ್ಯವಿಧಾನಗಳಿಗೆ ಒಳಗಾಗುತ್ತದೆ. ಜ.22ರಂದು ನಡೆಯುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೂ ಮುನ್ನ ಬೋಟ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Wed, 17 January 24