ಚಂಡೀಗಢ: ಪಂಜಾಬ್ ಸಚಿವೆ ರಜಿಯಾ ಸುಲ್ತಾನಾ (Razia Sultana)ಮಂಗಳವಾರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು. ನವಜೋತ್ ಸಿಂಗ್ ಸಿಧು (Navjot Singh Sidhu) ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ರಜಿಯಾ ಸುಲ್ತಾನಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ “ನವಜೋತ್ ಸಿಂಗ್ ಸಿಧುಗೆ ಬೆಂಬಲ ಸೂಚಿಸಿ” ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ನೇತೃತ್ವದ ಪಂಜಾಬ್ ಕ್ಯಾಬಿನೆಟ್‌ನಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ, ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮುದ್ರಣ ಮತ್ತು ಸ್ಟೇಷನರಿ ವಿಭಾಗಗಳ ಹೊಣೆಯನ್ನು ರಜಿಯಾ ಅವರಿಗೆ ನೀಡಲಾಗಿತ್ತು.
Razia Sultana, who took as a Cabinet Minister of Punjab two days ago, resigns “in solidarity with Navjot Singh Sidhu”, who stepped down as Punjab Congress president earlier today
She says, “Sidhu Sahab is a man of principles. He is fighting for Punjab and Punjabiyat.” pic.twitter.com/XyL1fY4Ysq
— ANI (@ANI) September 28, 2021
ರಾಜೀನಾಮೆ ಸಲ್ಲಿಸಿದ ನಂತರ ಮಾಧ್ಯಮದವರಲ್ಲಿ ಮಾತನಾಡಿದ ರಜಿಯಾ ಸಿಧು ಸಾಹಬ್ ಸಿದ್ಧಾಂತಗಳ ವ್ಯಕ್ತಿ. ಅವರು ಪಂಜಾಬ್ ಮತ್ತು ಪಂಜಾಬಿಯತ್ಗಾಗಿ ಹೋರಾಡುತ್ತಿದ್ದಾರೆ ಎಂದಿದ್ದಾರೆ.
55 ವರ್ಷದ ರಜಿಯಾ ಸುಲ್ತಾನಾ ಅವರು 2002 ರಲ್ಲಿ ಮೊದಲ ಬಾರಿಗೆ ಪಂಜಾಬ್ ವಿಧಾನ ಸಭೆಗೆ ಆಯ್ಕೆಯಾದರು ನಂತರ 2007 ರಲ್ಲಿ ಮತ್ತು 2017 ರಲ್ಲಿ ಮತ್ತೆ ಆಯ್ಕೆಯಾಗಿದ್ದರು.
SO PROUD OF MY WIFE RAZIA SULTANA FOR HER PRINCIPLED DECISION TO RESIGN IN THE BEST INTEREST OF CONG AND ITS LEADERSHIP, ON PARTICULAR RAHUL GANDHI, OUR BENEFACTOR pic.twitter.com/XuNZtFyuG5
— MOHD MUSTAFA, FORMER IPS (@MohdMustafaips) September 28, 2021
ರಜಿಯಾ ಅವರ ರಾಜೀನಾಮೆ ನಿರ್ಧಾರವನ್ನು ಅವರ ಪತಿ ಮೊಹಮ್ಮದ್ ಮುಸ್ತಫಾ ಶ್ಲಾಘಿಸಿದ್ದಾರೆ. ಕಾಂಗ್ರೆಸ್ ಮತ್ತು ನಾಯಕತ್ವದ ಹಿತಾಸಕ್ತಿಗಾಗಿ ನನ್ನ ಪತ್ನಿ ರಜಿಯಾ ಸುಲ್ತಾನಾ ತೆಗೆದುಕೊಂಡ ಸೂಕ್ತ ನಿರ್ಧಾರವನ್ನು ನಾನು ಶ್ಲಾಘಿಸುತ್ತೇನೆ ಎಂದು ಮುಸ್ತಫಾ ಟ್ವೀಟ್ ಮಾಡಿದ್ದಾರೆ. ಸಿಧು ಅವರ ಸಲಹೆಗಾರರಾಗಿದ್ದಾರೆ ಮುಸ್ತಫಾ.
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ರಾಜೀನಾಮೆಗೆ ಕಾರಣವೇನು?: ಪಂಜಾಬ್ ರಾಜಕೀಯದಲ್ಲಿನ ಪ್ರಮುಖ ಬೆಳವಣಿಗೆಗಳು ಇಲ್ಲಿವೆ
ಇದನ್ನೂ ಓದಿ: Navjot Singh Sidhu ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ
(Solidarity with Navjot Singh Sidhu Punjab Minister Razia Sultana resigned from the Cabinet)
Published On - 6:59 pm, Tue, 28 September 21