ಸಿಧು ರಾಜೀನಾಮೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ: ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ
ಸಿಧು ರಾಜೀನಾಮೆ ಬಗ್ಗೆ ಕೇಳಿದಾಗ ಈ ವಿಷಯದ ಬಗ್ಗೆ "ಯಾವುದೇ ಮಾಹಿತಿ ಇಲ್ಲ" ಎಂದು ಅವರು ಹೇಳಿದರು. ಪಂಜಾಬ್‌ನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಸಿಧು ಅಸಮಾಧಾನ ಹೊಂದಿದ್ದರೇ ಎಂದು ಕೇಳಿದಾಗ "ಅವರು ಅಸಮಾಧಾನಗೊಂಡರೆ ಅದು ಬಗೆಹರಿಯುತ್ತದೆ. ಅವರು ನನ್ನೊಂದಿಗೆ ಅಸಮಾಧಾನ ಹೊಂದಿಲ್ಲ" ಎಂದಿದ್ದಾರೆ ಚನ್ನಿ.
ಚಂಡೀಗಢ: ಕೆಲವು ಗಂಟೆಗಳ ಹಿಂದೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ನವಜೋತ್ ಸಿಂಗ್ ಸಿಧು (Navjot Singh Sidhu) ಅವರ ಮೇಲೆ ಸಂಪೂರ್ಣ ವಿಶ್ವಾಸ ಮತ್ತು ನಂಬಿಕೆ ಇದೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ (Charanjit Singh Channi) ಮಂಗಳವಾರ ಹೇಳಿದ್ದಾರೆ. “ನಾನು (ನವಜೋತ್ ಸಿಂಗ್) ಸಿಧು ಸಾಹಬ್ ಮೇಲೆ ಸಂಪೂರ್ಣ ವಿಶ್ವಾಸ ಮತ್ತು ನಂಬಿಕೆಯನ್ನು ಹೊಂದಿದ್ದೇನೆ” ಎಂದು ಚನ್ನಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರದಲ್ಲಿ ಸಿಧು, “ರಾಜಿ ಮೂಲೆಯಿಂದ ಮನುಷ್ಯನ ಸ್ವಭಾವದ ಕುಸಿತ ಉಂಟಾಗುತ್ತದೆ, ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ, ನಾನು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ ಎಂದಿದ್ದರು.
ಏತನ್ಮಧ್ಯೆ, ಸಿಧು ರಾಜೀನಾಮೆ ಬಗ್ಗೆ ಕೇಳಿದಾಗ ಈ ವಿಷಯದ ಬಗ್ಗೆ “ಯಾವುದೇ ಮಾಹಿತಿ ಇಲ್ಲ” ಎಂದು ಅವರು ಹೇಳಿದರು. ಪಂಜಾಬ್‌ನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಸಿಧು ಅಸಮಾಧಾನ ಹೊಂದಿದ್ದರೇ ಎಂದು ಕೇಳಿದಾಗ “ಅವರು ಅಸಮಾಧಾನಗೊಂಡರೆ ಅದು ಬಗೆಹರಿಯುತ್ತದೆ. ಅವರು ನನ್ನೊಂದಿಗೆ ಅಸಮಾಧಾನ ಹೊಂದಿಲ್ಲ” ಎಂದಿದ್ದಾರೆ ಚನ್ನಿ.
#WATCH | This (protest against three farm laws) is a serious issue, the Central govt should take it seriously. Punjab is a border state and should not be made another Jammu and Kashmir: Punjab Chief Minister Charanjit Singh Channi pic.twitter.com/6exddmc3xf
— ANI (@ANI) September 28, 2021
ರಾಜ್ಯ ಕಾಂಗ್ರೆಸ್ ಘಟಕದಲ್ಲಿ ತಿಂಗಳುಗಳ ಗೊಂದಲದ ನಂತರ ಸಿಧು ಅವರನ್ನು ಜುಲೈ 23 ರಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ (PPCC) ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸೆಪ್ಟೆಂಬರ್ 18 ರಂದು ರಾಜೀನಾಮೆ ನೀಡದ್ದು ಮಂಗಳವಾರ ರಾಷ್ಟ್ರ ರಾಜಧಾನಿಗೆ ಭೇಟಿ ನೀಡುವ ಮುನ್ನ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಮರಿಂದರ್ ಸಿಂಗ್ ಅವರ ದೆಹಲಿ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಚನ್ನಿ ಹೇಳಿದರು: “ಕೋಯಿ ಗಲ್ ನಹೀ,” ಕ್ಯಾಪ್ಟನ್ ಸಾಹಬ್ ನಮ್ಮ ಮುಖ್ಯಮಂತ್ರಿಯಾಗಿದ್ದರು, ಸಮಸ್ಯೆ ಇಲ್ಲ .ಅವರು ಪಂಜಾಬ್ ಸಮಸ್ಯೆಗಳನ್ನು ಚರ್ಚಿಸಲು ಅಲ್ಲಿಗೆ (ದೆಹಲಿ) ಹೋಗಿರಬೇಕು ಎಂದಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು ಇದು (ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ) ಗಂಭೀರ ಸಮಸ್ಯೆಯಾಗಿದೆ, ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಂಜಾಬ್ ಒಂದು ಗಡಿ ರಾಜ್ಯವಾಗಿದ್ದು ಅದನ್ನು ಇನ್ನೊಂದು ಜಮ್ಮು ಮತ್ತು ಕಾಶ್ಮೀರವನ್ನಾಗಿ ಮಾಡಬಾರದು ಎಂದಿದ್ದಾರೆ.
ಪಂಜಾಬ್ ಕಾಂಗ್ರೆಸ್ ಖಜಾಂಚಿ ಹುದ್ದೆಯಿಂದ ಕೆಳಗಿಳಿದ ಗುಲ್ಜಾರ್ ಇಂದರ್ ಚಹಲ್ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ ನಂತರ ಗುಲ್ಜಾರ್ ಇಂದರ್ ಚಹಲ್ ಪಂಜಾಬ್ ಕಾಂಗ್ರೆಸ್ ಖಜಾಂಚಿ ಸ್ಥಾನದಿಂದ ಕೆಳಗಿಳಿದಿದ್ದಾರೆ
ದೆಹಲಿ ತಲುಪಿದ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಈ ಮನುಷ್ಯ (ನವಜೋತ್ ಸಿಂಗ್ ಸಿಧು) ಅಸ್ಥಿರ … ನಾನು ನವದೆಹಲಿಯ ಪಂಜಾಬ್ ಸಿಎಂ ನಿವಾಸವಾದ ಕಪುರ್ತಲಾ ಹೌಸ್ ಅನ್ನು ಖಾಲಿ ಮಾಡಲು ಬಂದಿದ್ದೇನೆ. ನಾನು ಇಲ್ಲಿ ಯಾವುದೇ ರಾಜಕಾರಣಿಗಳನ್ನು ಭೇಟಿ ಮಾಡಲು ಹೋಗುವುದಿಲ್ಲಎಂದು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ರಾಜೀನಾಮೆಗೆ ಕಾರಣವೇನು?: ಪಂಜಾಬ್ ರಾಜಕೀಯದಲ್ಲಿನ ಪ್ರಮುಖ ಬೆಳವಣಿಗೆಗಳು ಇಲ್ಲಿವೆ
ಇದನ್ನೂ ಓದಿ: ದೆಹಲಿ ನಿವಾಸ ಖಾಲಿ ಮಾಡಲು ಬಂದಿದ್ದೇನೆ, ಯಾವ ನಾಯಕರನ್ನೂ ಭೇಟಿಯಾಗುತ್ತಿಲ್ಲ; ಅಮರೀಂದರ್ ಸಿಂಗ್ ಸ್ಪಷ್ಟನೆ
(Punjab Chief Minister Charanjit Singh Channi Navjot Singh Sidhu resignation Amarinder Singh PPCC Congress)
Published On - 6:38 pm, Tue, 28 September 21