AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಮುಂದಿನ ಟಾರ್ಗೆಟ್ ಮಾಧ್ಯಮ ಸಂಸ್ಥೆಗಳು, ಉಳಿಯುವ ಮನಸ್ಸಿದ್ದರೆ ನಮ್ಮೊಂದಿಗೆ ಕೈಜೋಡಿಸಿ‘-ರಾಕೇಶ್​ ಟಿಕಾಯತ್​

ಕೃಷಿ ಕಾಯ್ದೆಗಳನ್ನು ಹಿಂಪಡೆದರೆ ಮಾತ್ರ ನಾವು ಪ್ರತಿಭಟನೆ ಕೈಬಿಡುತ್ತೇವೆ ಎಂದು ನಿನ್ನೆಯೇ ಹೇಳಿರುವ ರಾಕೇಶ್​ ಟಿಕಾಯತ್​ ಇಂದು ಛತ್ತೀಸ್​ಗಢ್​ ತಲುಪಿದ್ದಾರೆ. ಇಲ್ಲಿ ಮಾತನಾಡಿ, ದೇಶದಲ್ಲಿ ಕನಿಷ್ಠ ಬೆಂಬಲ ಬೆಲೆ ಬಹುದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ.

‘ನಮ್ಮ ಮುಂದಿನ ಟಾರ್ಗೆಟ್ ಮಾಧ್ಯಮ ಸಂಸ್ಥೆಗಳು, ಉಳಿಯುವ ಮನಸ್ಸಿದ್ದರೆ ನಮ್ಮೊಂದಿಗೆ ಕೈಜೋಡಿಸಿ‘-ರಾಕೇಶ್​ ಟಿಕಾಯತ್​
ರಾಕೇಶ್​ ಟಿಕಾಯತ್​
TV9 Web
| Edited By: |

Updated on: Sep 28, 2021 | 6:41 PM

Share

ರಾಯ್ಪುರ: ನಮ್ಮ ಚಳವಳಿಯಲ್ಲಿ ನೀವೂ ಕೈಜೋಡಿಸಿ ಎಂದು ಮಾಧ್ಯಮ ಸಂಸ್ಥೆಗಳಿಗೆ ರಾಕೇಶ್ ಟಿಕಾಯತ್​ (Rakesh Tikait) ಕರೆ ನೀಡಿದ್ದಾರೆ. ನಿನ್ನೆ (ಸೆ.27) ರೈತಸಂಘಟನೆಗಳು ಮೂರು ಕೃಷಿ ಕಾಯ್ದೆಗಳ ವಿರುದ್ಧ ಭಾರತ್ ಬಂದ್ ನಡೆಸಿದ್ದಾರೆ. ಇಂದು ಛತ್ತೀಸ್​ಗಢ್​​ನ ರಾಯ್ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತೀಯ ಕಿಸಾನ್​ ಯೂನಿಯನ್​ (BKU)ನಾಯಕ ರಾಕೇಶ್​ ಟಿಕಾಯತ್,  ನಮ್ಮ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು. ನಮ್ಮ ಮುಂದಿನ ಟಾರ್ಗೆಟ್​ ಮಾಧ್ಯಮದವರು. ನೀವು ಉಳಿಯಬೇಕು ಎಂಬ ಆಸೆ ಹೊಂದಿದ್ದರೆ, ನಮ್ಮೊಂದಿಗೆ ಕೈಜೋಡಿಸಬೇಕು. ಇಲ್ಲದಿದ್ದರೆ ನೀವೂ ಕಷ್ಟ ಅನುಭವಿಸುತ್ತೀರಿ ಎಂದು ಹೇಳಿದ್ದಾರೆ.

ಕೃಷಿ ಕಾಯ್ದೆಗಳನ್ನು ಹಿಂಪಡೆದರೆ ಮಾತ್ರ ನಾವು ಪ್ರತಿಭಟನೆ ಕೈಬಿಡುತ್ತೇವೆ ಎಂದು ನಿನ್ನೆಯೇ ಹೇಳಿರುವ ರಾಕೇಶ್​ ಟಿಕಾಯತ್​ ಇಂದು ಛತ್ತೀಸ್​ಗಢ್​ ತಲುಪಿದ್ದಾರೆ. ಇಲ್ಲಿ ಮಾತನಾಡಿ, ದೇಶದಲ್ಲಿ ಕನಿಷ್ಠ ಬೆಂಬಲ ಬೆಲೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆ ವಿರುದ್ಧ ನಾವು ಧ್ವನಿ ಎತ್ತುತ್ತೇವೆ ಎಂದಿದ್ದಾರೆ.  ನಂತರ ಮಾಧ್ಯಮದವರ ವಿರುದ್ಧವೇ ಮಾತನಾಡಿದ ಅವರು, ನೀವೆಲ್ಲ ದೆಹಲಿಯಲ್ಲಿ ಕುಳಿತು ದೇಶವನ್ನು ಮಾರುತ್ತಿರುವ ಕೇಂದ್ರ ಸರ್ಕಾರದ ಮೇಲೆಯೇ ಗಮನಹರಿಸಿದ್ದೀರಿ. ಈಗಾಗಲೇ ಅರ್ಧದೇಶವನ್ನು ಅದು ಮಾರಾಟ ಮಾಡಿದೆ. ಮಧ್ಯಪ್ರದೇಶದಲ್ಲಿ ಮಂಡಿಗಳನ್ನು ಮಾರಾಟ ಮಾಡಿದ್ದಾರೆ. ಈಗಾಗಲೇ 182 ಮಂಡಿಗಳು ಮಾರಾಟವಾಗಿದ್ದು, ಅವುಗಳ ಮೇಲೆಯೂ ಸ್ವಲ್ಪ ಗಮನಹರಿಸಿ. ಇಲ್ಲದೆ ಇದ್ದರೆ ಛತ್ತೀಸ್​ಗಢ್​​ಕ್ಕೂ ಕಾಲಿಡುತ್ತಾರೆ ಎಂದು ರಾಕೇಶ್ ಟಿಕಾಯತ್​ ಹೇಳಿದ್ದಾರೆ.

ಛತ್ತೀಸ್​ಗಢ್​​ನ ರಾಜಿಮ್​ ನಗರದಲ್ಲಿ ಆಯೋಜಿಸಲಾಗಿರುವ ಕಿಸಾನ್​ ಮಹಾಪಂಚಾಯತ್​ ನಲ್ಲಿ ಮಾತನಾಡಲು ಆಗಮಿಸಿರುವ ರಾಕೇಶ್​ ಟಿಕಾಯಿತ್​, ಇಲ್ಲಿ ಹಣ್ಣು ಬೆಳೆಗಾರರ ಸಮಸ್ಯೆಯ ಬಗ್ಗೆ ಮಾತನಾಡಲಾಗುತ್ತದೆ. ಬೆಂಬಲ ಬೆಲೆಯ ಬಗ್ಗೆಯೂ ಧ್ವನಿ ಎತ್ತಲಾಗುವುದು. ಛತ್ತೀಸ್​ಗಢ ರೈತರ ಅಭಿವೃದ್ಧಿಗೆ ಇನ್ನಷ್ಟು ಯೋಜನೆಗಳ ಅಗತ್ಯವಿದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Mysuru Dasara 2021: ದಸರಾ ಉದ್ಘಾಟಕರಾಗಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಆಯ್ಕೆ

Coronavirus: ಕೇರಳದಿಂದ‌ ಕರ್ನಾಟಕ ಪ್ರವೇಶಕ್ಕೆ ನಿರ್ಬಂಧ ವಿಚಾರ; ಮಧ್ಯಪ್ರವೇಶಿಸಲು ಕೇರಳ ಹೈಕೋರ್ಟ್ ನಕಾರ

(If you want to be saved, then join us Says Farmer Leader Rakesh Tikait to Media houses In Raipur)

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ