ನವ ದೆಹಲಿ: 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ದೋಪಿಸುವ ಷಡ್ಯಂತ್ರದ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಸಂಚು ಇತ್ತು ಎಂದು ಬಿಜೆಪಿ ಶನಿವಾರ ಆರೋಪಿಸಿದೆ. ಗುಜರಾತ್ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಬಂಧಿತ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನನ್ನು ನೀಡದಂತೆ ಗುಜರಾತ್ ಪೊಲೀಸರು ಕೋರ್ಟ್ಗೆ ಮನವಿ ಮಾಡಿದ್ದು. ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು ಗುಜರಾತ್ ಗಲಭೆಯ ಮೂಲಕ ನಡೆಸಿದ ದೊಡ್ಡ ಪಿತೂರಿ ಅದರ ಪ್ರಮುಖ ಭಾಗವೇ ತೀಸ್ತಾ ಎಂದು ಹೇಳಿದ್ದಾರೆ. ಆದರೆ ಈ ಆರೋಪವನ್ನು ಕಾಂಗ್ರೆಸ್ ತಳ್ಳಿ ಹಾಕಿದೆ, ಎಸ್‌ಐಟಿ ಬಿಜೆಪಿ ಸರ್ಕಾರದ ಕೈಗೊಂಬೆ ಆಗಿದೆ ಎಂದು ಹೇಳಿದೆ, ಇದೀಗ ಬಿಜೆಪಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಅವರು ಮಾತನಾಡಿ, ಶ್ರೀಮತಿ ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರರಾಗಿದ್ದ ದಿವಂಗತ ಅಹ್ಮದ್ ಪಟೇಲ್ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದರು, ಅವರು ಆಗಿನ ಗುಜರಾತ್ ರಾಜ್ಯದಲ್ಲಿನ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಪ್ರಧಾನಿ ಮೋದಿಯವರ ರಾಜಕೀಯವಾಗಿ ಮುಗಿಸಲು ಈ ಪಿತ್ತೂರಿಯನ್ನು ನಡೆಸಿದ್ದರೆ ಎಂದು ಹೆಳಿದ್ದಾರೆ. ಈ ಬಗ್ಗೆ ಸೋನಿಯಾ ಗಾಂಧಿ ಪತ್ರಿಕಾಗೋಷ್ಠಿ ನಡೆಸಬೇಕು ಎಂದು ಆಗ್ರಹಿಸಿದರು.
ಪಟೇಲ್ ಅವರನ್ನು ಸಮರ್ಥಿಸಿಕೊಂಡ ಕಾಂಗ್ರೆಸ್, ಇದು ಅಹ್ಮದ್ ಪಟೇಲ್ ವಿರುದ್ಧ ಹೊರಿಸಲಾದ ತಪ್ಪು ಆರೋಪ ಕೋಮು ಹತ್ಯಾಕಾಂಡದ ಬಗ್ಗೆ ತಮ್ಮನ್ನು ರಕ್ಷಿಸಿಕೊಳ್ಳಲು ಈ ತಂತ್ರವನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಎಸ್‌ಐಟಿಯನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ವಕ್ತಾರ ಶ್ರೀ ಪತ್ರಾ, ಕಾಂಗ್ರೆಸ್‌ನ ಹೇಳಿಕೆಯು ತುಂಬಾ ತಮಾಷೆಯಾಗಿದೆ, ಕಾಂಗ್ರೆಸ್ ತನ್ನ ಮೇಲಿನ ಆರೋಪಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿದೆ, ತಮ್ಮ ಮೇಲೆ ಯಾವುದೇ ಕೇಸ್ ಬಂದರು ಆರೋಗ್ಯದ ಸಮಸ್ಯೆ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ಏಕೆ ಪಿತೂರಿ ನಡೆಸುತ್ತಿದ್ದಾರೆ ಎಂಬುದಕ್ಕೆ ಸೋನಿಯಾ ಗಾಂಧಿಯವರು ಪತ್ರಿಕಾಗೋಷ್ಠಿ ನಡೆಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು, ಪಟೇಲ್ ಅವರ ಮೇಲೆ ಆರೋಪ ಮಾಡಲು ಈ ಪತ್ರಿಕಾಗೋಷ್ಠಿಯನ್ನು ಮಾಡುತ್ತಿಲ್ಲ ಎಂದರು.
ಸೋನಿಯಾ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಸಂಚು ರೂಪಿಸಿದರು ಮತ್ತು ಅವರ ಪುತ್ರ ರಾಹುಲ್ ಗಾಂಧಿಯನ್ನು ಹೆಚ್ಚು ಪ್ರಚಾರ ಮಾಡಲು, ಜೊತೆಗೆ ಬಿಜೆಪಿಯನ್ನು ಸೋಲಿಸಲು ಈ ರೀತಿ ಮಾಡಿದ್ದಾರೆ ಎಂದರು. ಎಸ್‌ಐಟಿ ಅಫಿಡವಿಟ್ ಅನ್ನು ಉಲ್ಲೇಖಿಸಿದ ಅವರು, ಸೆಟಲ್ವಾಡ್ ಅವರಿಗೆ ಪಟೇಲ್ ವೈಯಕ್ತಿಕವಾಗಿ 30 ಲಕ್ಷ ರೂ ನೀಡಿದ್ದರು ಎಂದು ಹೇಳಿದ್ದಾರೆ. ಪಟೇಲ್ ಹಣ ಕೊಟ್ಟಿದ್ದರೋ ಅಥವಾ ಸೋನಿಯಾ ಗಾಂಧಿ ಕೊಟ್ಟಿದ್ದರೋ ಎಂದು ಆರೋಪಿಸಿದರು.
ಗುಜರಾತ್ ಗಲಭೆ ಪ್ರಕರಣಕ್ಕೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಸೆಟಲ್ವಾಡ್ ಅವರಿಗೆ ಪದ್ಮಶ್ರೀ ನೀಡಲಾಯಿತು ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರನ್ನಾಗಿಯೂ ಮಾಡಲಾಯಿತು ಎಂದು ಶ್ರೀ ಪಾತ್ರಾ ಹೇಳಿದರು. ಸೋನಿಯಾ ಗಾಂಧಿ ಈ ಎಲ್ಲ ಕೆಲಸವನ್ನು ಮಾಡಿಸಿದ್ದರೆ ಎಂದು ಆರೋಪಿಸಿದ್ದಾರೆ. ಪಟೇಲ್ ಎಂಬುದು ಕೇವಲ ಹೆಸರಾಗಿದೆ. ಈ ಪಿತೂರಿಯ ಹಿಂದಿನ ಪ್ರೇರಕ ಶಕ್ತಿ ಸೋನಿಯಾ ಗಾಂಧಿ ಎಂದು ಅವರು ಹೇಳಿದ್ದಾರೆ.
ವೈನ್ ಮತ್ತು ಹಾಲಿಡೇ ರೆಸಾರ್ಟ್‌ಗಳು ಸೇರಿದಂತೆ ಗಲಭೆ ಸಂತ್ರಸ್ತರಿಗೆ ವೈಯಕ್ತಿಕ ಬಳಕೆಗಾಗಿ ಸೆಟಲ್ವಾಡ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗುಜರಾತ್ ಹೈಕೋರ್ಟ್‌ನ ಅವಲೋಕನಗಳನ್ನು ಶ್ರೀ ಪಾತ್ರಾ ಉಲ್ಲೇಖಿಸಿದ್ದಾರೆ. ಇಡೀ ಪ್ರಕರಣದ ಸತ್ಯವು ಬಹಿರಂಗಗೊಂಡಿದೆ, ಬಿಜೆಪಿ ಪ್ರತೀಕಾರದಿಂದ ಕೆಲಸ ಮಾಡುವುದಿಲ್ಲ ನಾವು ತಾಳ್ಮೆಯಿಂದ ಕೆಲಸ ಮಾಡುತ್ತದೆ ಮತ್ತು ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ನಂಬಿಕೆ ಇದೆ ಎಂದರು.
Published On - 3:52 pm, Sat, 16 July 22