Gujarat Riots: ಮೋದಿ ವಿರುದ್ಧ ಅಹ್ಮದ್ ಪಟೇಲ್ ಸಂಚು ರೂಪಿಸಿದ್ದರು ಎಂದ ಎಸ್‌ಐಟಿ, ಆರೋಪವನ್ನು ತಳ್ಳಿಹಾಕಿದ ಕಾಂಗ್ರೆಸ್

ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು  ಗುಜರಾತ್ ಗಲಭೆಯ ಮೂಲಕ  ನಡೆಸಿದ ದೊಡ್ಡ ಪಿತೂರಿ ಅದರ ಪ್ರಮುಖ ಭಾಗವೇ  ತೀಸ್ತಾ  ಎಂದು ಎಸ್‌ಐಟಿ ಹೇಳಿದೆ. 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ದೊಡ್ಡ ಸಂಚು ರೂಪಿಸಿದ ಆರೋಪದ ಮೇಲೆ ಇತ್ತೀಚೆಗೆ ಅಹಮದಾಬಾದ್ ಕ್ರೈಂ ಬ್ರಾಂಚ್ ಬಂಧಿಸಿದ ಇಬ್ಬರು ವ್ಯಕ್ತಿಗಳಲ್ಲಿ ಸೆಟಲ್ವಾಡ್ ಒಬ್ಬರು.

Gujarat Riots: ಮೋದಿ ವಿರುದ್ಧ ಅಹ್ಮದ್ ಪಟೇಲ್ ಸಂಚು ರೂಪಿಸಿದ್ದರು ಎಂದ ಎಸ್‌ಐಟಿ, ಆರೋಪವನ್ನು ತಳ್ಳಿಹಾಕಿದ ಕಾಂಗ್ರೆಸ್
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 16, 2022 | 12:44 PM

ಅಹಮದಾಬಾದ್: 2002ರ ಗುಜರಾತ್ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಬಂಧಿತ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನನ್ನು ನೀಡದಂತೆ ಗುಜರಾತ್ ಪೊಲೀಸರು ಕೋರ್ಟ್​ಗೆ ಮನವಿ ಮಾಡಿದ್ದಾರೆ. ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು  ಗುಜರಾತ್ ಗಲಭೆಯ ಮೂಲಕ  ನಡೆಸಿದ ದೊಡ್ಡ ಪಿತೂರಿ ಅದರ ಪ್ರಮುಖ ಭಾಗವೇ  ತೀಸ್ತಾ  ಎಂದು ಹೇಳಿದ್ದಾರೆ. 2002 ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ದೊಡ್ಡ ಸಂಚು ರೂಪಿಸಿದ ಆರೋಪದ ಮೇಲೆ ಇತ್ತೀಚೆಗೆ ಅಹಮದಾಬಾದ್ ಕ್ರೈಂ ಬ್ರಾಂಚ್ ಬಂಧಿಸಿದ ಇಬ್ಬರು ವ್ಯಕ್ತಿಗಳಲ್ಲಿ ಸೆಟಲ್ವಾಡ್ ಒಬ್ಬರು.

ತೀಸ್ತಾ ಸೆಟಲ್ವಾಡ್ 2002 ರ ಗಲಭೆಯ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಕಾಂಗ್ರೆಸ್ ನ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ನಿರ್ದೇಶನದ ಮೇರೆಗೆ ಈ  ಪಿತೂರಿಯನ್ನು ನಡೆಸಿದ್ದಾರೆ  ಎಂದು ಪೊಲೀಸ್ ವಿಶೇಷ ತನಿಖಾ ತಂಡವು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಹೇಳಿಕೊಂಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿಡಿ ಠಕ್ಕರ್ ಅವರು ವಿಶೇಷ ತನಿಖಾ ತಂಡ  ದಾಖಲೆಯಲ್ಲಿ ತೆಗೆದುಕೊಂಡು ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ್ದಾರೆ.  ಗುಜರಾತ್ ಗಲಭೆ ಪ್ರಕರಣಗಳಲ್ಲಿ ಅಮಾಯಕರನ್ನು ಬಂಧಿಸಲು ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿದ ಆರೋಪದಲ್ಲಿ ಮಾಜಿ ಐಪಿಎಸ್ ಅಧಿಕಾರಿಗಳಾದ ಆರ್ ಬಿ ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರೊಂದಿಗೆ ಎಂಎಸ್ ಸೆಟಲ್ವಾಡ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ
Image
International Yoga Day 2022: ಮಾನವೀಯತೆಗೆ ಭಾರತ ನೀಡಿದ ಕೊಡುಗೆಯೇ ಯೋಗ; ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ
Image
International Yoga Day 2022: ಗಾರ್ಡಿಯನ್ ರಿಂಗ್ ಮೂಲಕ ವಿವಿಧ ದೇಶಗಳ ಯೋಗ ಪ್ರಸಾರ; 5 ಪ್ರಮುಖ ಅಂಶಗಳು ಇಲ್ಲಿವೆ
Image
Thyroid Disease and Yoga: ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ
Image
International Yoga Day 2022: ಯಾವ ರಾಶಿಯವರು ಯಾವ ಯೋಗಾಸನಗಳನ್ನು ಮಾಡಬೇಕು? ಇಲ್ಲಿದೆ ಮಾಹಿತಿ

ಪಿತೂರಿಯ ಭಾಗವಾಗಿದ್ದ ಸೆಟಲ್ವಾಡ್ ಅಂದಿನ ಮೋದಿ ಸರ್ಕಾರವನ್ನು  ಅಸ್ಥಿರಗೊಳಿಸುವುದರ ಜೊತೆಗೆ ಅಮಾಯಕರನ್ನು ಈ ಗಲಭೆಯಲ್ಲಿ  ಸಿಲುಕಿಸುವ ಪ್ರಯತ್ನಗಳು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ, ಇದರ ಜೊತೆಗೆ   ರಾಜಕೀಯ ಪಕ್ಷದಿಂದ ಅಕ್ರಮ ಹಣ ಮತ್ತು ಇತರ  ಬಹುಮಾನಗಳನ್ನು ಪಡೆದಿದ್ದಾರೆ ಎಂದು ಎಸ್‌ಐಟಿ ಅಫಿಡವಿಟ್ ನಲ್ಲಿ  ಹೇಳಿದೆ.

ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಿ, ಎಸ್‌ಐಟಿ ಕಾಂಗ್ರೆಸ್ ನಾಯಕ ದಿವಂಗತ ಅಹ್ಮದ್ ಪಟೇಲ್ ಅವರ ಸೂಚನೆಯ ಮೇರೆಗೆ ಸಂಚು ನಡೆಸಲಾಗಿದೆ ಎಂದು ಹೇಳಿದೆ. 2002 ರಲ್ಲಿ ಗೋಧ್ರಾ ಗಲಭೆಯ ನಂತರ ಅಹ್ಮದ್ ಪಟೇಲ್ ಅವರ ಆದೇಶದ ಮೇರೆಗೆ ಸೆಟಲ್ವಾಡ್ ಅವರು 30 ಲಕ್ಷ ರೂ. ಪಡೆದಿದ್ದಾರೆ ಎಂದು  ಆರೋಪಿಸಿದೆ. ಸೆಟಲ್ವಾಡ್ ಅವರು ಬಿಜೆಪಿ ಸರ್ಕಾರದ ಹಿರಿಯ ನಾಯಕರ ಹೆಸರನ್ನು ಗಲಭೆ ಪ್ರಕರಣಗಳಲ್ಲಿ ಸಿಲುಕಿಸಲು ದೆಹಲಿಯಲ್ಲಿ ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದರು ಎಂದು ಎಸ್‌ಐಟಿ ಹೇಳಿದೆ.

ಪಕ್ಷವು ಶಬಾನಾ ಮತ್ತು ಜಾವೇದ್‌ಗೆ ಮಾತ್ರ ಏಕೆ ಅವಕಾಶ ನೀಡುತ್ತಿದೆ, ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಏಕೆ? ಮಾಡುತ್ತಿಲ್ಲ ಎಂದು 2006 ರಲ್ಲಿ  ಸೆಟಲ್ವಾಡ್ ಕಾಂಗ್ರೆಸ್ ನಾಯಕರೊಬ್ಬರನ್ನು ಕೇಳಿದ್ದರು ಎಂದು  ಸಾಕ್ಷಿಯಲ್ಲಿ ಉಲ್ಲೇಖಿಸಿದೆ. ಕಳೆದ ತಿಂಗಳು, ಗುಜರಾತ್ ಗಲಭೆ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರಿಗೆ ನೀಡಿದ್ದ ಕ್ಲೀನ್ ಚಿಟ್ ಅನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಒಂದು ದಿನದ ನಂತರ, ರಾಜ್ಯ ಪೊಲೀಸರು ಎಂಎಸ್ ಸೆಟಲ್ವಾಡ್ ಅವರನ್ನು ಬಂಧಿಸಿದರು.

ಶ್ರೀಕುಮಾರ್ ಮತ್ತು ಶ್ರೀ ಭಟ್ ಅವರ ಜೊತೆಗೆ ಇತರ ಅಪರಾಧಿಗಳನ್ನು ಐಪಿಸಿ ಸೆಕ್ಷನ್ 468 (ನಕಲಿ) ಮತ್ತು 194  ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದೀಗ ಎಸ್‌ಐಟಿ  ಅಹ್ಮದ್ ಪಟೇಲ್ ಮೇಲೆ ಮಾಡಿರುವ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ,  ಪ್ರಧಾನಿ ನರೇಂದ್ರ ಮೋದಿಯೇ ಇದಕ್ಕೆ ಕಾರಣ ಎಂದು ಹೇಳಿದೆ. ತನಿಖಾ ಸಂಸ್ಥೆಗಳು ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

Published On - 11:53 am, Sat, 16 July 22