Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Narendra Modi: ರೇವಡಿ ಸಂಸ್ಕೃತಿ ದೇಶದ ಅಭಿವೃದ್ಧಿಗೆ ಅಪಾಯಕಾರಿ; ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇಗೆ ಮೋದಿ ಚಾಲನೆ

ರೇವಡಿ ಸಂಸ್ಕೃತಿಯನ್ನು ಹೊಂದಿರುವವರು ನಿಮಗಾಗಿ ಹೊಸ ಎಕ್ಸ್‌ಪ್ರೆಸ್‌ವೇಗಳನ್ನು, ಹೊಸ ವಿಮಾನ ನಿಲ್ದಾಣಗಳನ್ನು ಅಥವಾ ರಕ್ಷಣಾ ಕಾರಿಡಾರ್‌ಗಳನ್ನು ಎಂದಿಗೂ ನಿರ್ಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

PM Narendra Modi: ರೇವಡಿ ಸಂಸ್ಕೃತಿ ದೇಶದ ಅಭಿವೃದ್ಧಿಗೆ ಅಪಾಯಕಾರಿ; ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇಗೆ ಮೋದಿ ಚಾಲನೆ
ಬುಂದೇಲ್​ಖಂಡ್ ಎಕ್ಸ್​ಪ್ರೆಸ್​ವೇಗೆ ಮೋದಿ ಚಾಲನೆ
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Jul 16, 2022 | 3:44 PM

ಲಕ್ನೋ: ದೇಶದಲ್ಲಿ ಉಚಿತ ರೇವಡಿ ಹಂಚುವ ಮೂಲಕ ಮತ ಸಂಗ್ರಹಿಸುವ ಸಂಸ್ಕೃತಿ ತರಲು ಪ್ರಯತ್ನಿಸಲಾಗುತ್ತಿದೆ. ಈ ರೇವಡಿ ಸಂಸ್ಕೃತಿ ದೇಶದ ಅಭಿವೃದ್ಧಿಗೆ ಅತ್ಯಂತ ಅಪಾಯಕಾರಿ. ಈ ರೇವಡಿ ಸಂಸ್ಕೃತಿಯ ಬಗ್ಗೆ ದೇಶದ ಜನರು ಬಹಳ ಜಾಗರೂಕರಾಗಿರಬೇಕು. ನಾವೆಲ್ಲರೂ ಒಟ್ಟಾಗಿ ದೇಶದ ರಾಜಕೀಯದಿಂದ ರೇವಡಿ ಸಂಸ್ಕೃತಿಯನ್ನು ತೊಡೆದುಹಾಕಬೇಕು. ರೇವಡಿ ಸಂಸ್ಕೃತಿಯನ್ನು ಹೊಂದಿರುವವರು ನಿಮಗಾಗಿ ಹೊಸ ಎಕ್ಸ್‌ಪ್ರೆಸ್‌ವೇಗಳನ್ನು, ಹೊಸ ವಿಮಾನ ನಿಲ್ದಾಣಗಳನ್ನು ಅಥವಾ ರಕ್ಷಣಾ ಕಾರಿಡಾರ್‌ಗಳನ್ನು ಎಂದಿಗೂ ನಿರ್ಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ರೇವಡಿ ಒಂದು ಸಿಹಿತಿಂಡಿ. ಪ್ರಾಯಶಃ ಹರ್ಯಾಣಾದ ರೇವರಿಯಲ್ಲಿ ಈ ಸಿಹಿತಿಂಡಿ ಹುಟ್ಟಿದ್ದರಿಂದ ಇದಕ್ಕೆ ರೇವಡಿ ಎಂದು ಕರೆಯುತ್ತಾರೆ ಎನ್ನುವ ನಂಬುಗೆ ಇದೆ. ಆದರೆ ಪ್ರಧಾನಿ ಇಂದು ಭಾಷಣ ಮಾಡುವಾಗ ಬಳಸಿದ ರೇವಡಿ ಹಂಚುವಿಕೆ ಅರ್ಥವೇ ಬೇರೆ ಇದೆ. ರೇವಡಿ ಹಂಚೋದು ಎಂದರೆ, ಸಿಹಿಮಾತಾಡಿ ಜನರ ಹಾದಿ ತಪ್ಪಿಸುವುದು ಎಂದರ್ಥ.

ಉತ್ತರ ಪ್ರದೇಶದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಉತ್ತರ ಪ್ರದೇಶದ ಜಲೌನ್​ನಲ್ಲಿ​​14,850 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 296.07 ಕಿ.ಮೀ. ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಇಂದು ಮೋದಿ ಉದ್ಘಾಟಿಸಿದ್ದಾರೆ. ಈ ಎಕ್ಸ್‌ಪ್ರೆಸ್‌ವೇ 7 ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ. ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುತ್ತದೆ. ಈ ವೇಳೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಮೂಲಭೂತ ಸೌಕರ್ಯದ ಕೆಲಸವನ್ನು ಎಷ್ಟು ಗಂಭೀರವಾಗಿ ಮತ್ತು ವೇಗವಾಗಿ ಮಾಡಲಾಗುತ್ತಿದೆ ಎಂದರೆ ಉತ್ತಮ ಪ್ರದೇಶ ಈಗ, ಈ ವಿಷಯದಲ್ಲಿ ಸಾಧನೆ ಮಾಡಿದ್ದ ಇತರೆ ಉತ್ತಮ ರಾಜ್ಯಗಳನ್ನು ಕೂಡ ಮೀರಿಸಿದೆ. ದೇಶದಾದ್ಯಂತ ಉತ್ತರ ಪ್ರದೇಶದ ಗುರುತು ಬದಲಾಗುತ್ತಿದೆ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: Bundelkhand Expressway: ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಇಂದು ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​ ವೇ ಉದ್ಘಾಟನೆ

ದೇಶಕ್ಕೆ ಹಾನಿ ಮಾಡುವ, ದೇಶದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ಎಲ್ಲವನ್ನೂ ನಾವು ದೂರವಿಡಬೇಕು. ಉತ್ತರ ಪ್ರದೇಶ ಅಸಂಖ್ಯಾತ ಯೋಧರನ್ನು ಹುಟ್ಟುಹಾಕಿದ ಭೂಮಿ. ಈ ನಾಡಿನವರ ರಕ್ತದಲ್ಲಿ ಭಕ್ತಿ ಹರಿಯುತ್ತಿದೆ. ಇಂದು ಬುಂದೇಲ್‌ಖಂಡ್ ಭೂಮಿಗೆ ಎಕ್ಸ್‌ಪ್ರೆಸ್‌ವೇಯ ಉಡುಗೊರೆಯನ್ನು ನೀಡಲು ನನಗೆ ಬಹಳ ಸಂತೋಷವಾಗುತ್ತಿದೆ. ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮೂಲಕ ಚಿತ್ರಕೂಟದಿಂದ ದೆಹಲಿಗೆ 3-4 ಗಂಟೆಗಳಷ್ಟು ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಾಗಿದೆ ಎಂದಿದ್ದಾರೆ.

ಈ ಎಕ್ಸ್‌ಪ್ರೆಸ್‌ವೇ ಇಲ್ಲಿನ ವಾಹನಗಳಿಗೆ ವೇಗವನ್ನು ನೀಡುವುದಲ್ಲದೆ, ಇಡೀ ಬುಂದೇಲ್‌ಖಂಡದ ಕೈಗಾರಿಕಾ ಪ್ರಗತಿಯನ್ನು ವೇಗಗೊಳಿಸುತ್ತದೆ. ಉತ್ತರ ಪ್ರದೇಶದಲ್ಲಿ ಸರಯೂ ಕಾಲುವೆ ಯೋಜನೆ ಪೂರ್ಣಗೊಳ್ಳಲು 40 ವರ್ಷ ಬೇಕಾಯಿತು. ಉತ್ತರ ಪ್ರದೇಶದಲ್ಲಿ 30 ವರ್ಷಗಳ ಕಾಲ ಗೋರಖ್‌ಪುರ ರಸಗೊಬ್ಬರ ಘಟಕವನ್ನು ಮುಚ್ಚಲಾಗಿತ್ತು. ಅರ್ಜುನ್ ಅಣೆಕಟ್ಟು ಯೋಜನೆ ಪೂರ್ಣಗೊಳಿಸಲು 12 ವರ್ಷ ಬೇಕಾಯಿತು. ಆದರೆ, ಈಗ ಉತ್ತರ ಪ್ರದೇಶ ಅಭಿವೃದ್ಧಿಯ ವಿಷಯದಲ್ಲಿ ಬಹಳ ಮುಂಚೂಣಿಯಲ್ಲಿದೆ ಎಂದು ಮೋದಿ ಹೇಳಿದ್ದಾರೆ.

ಚಿತ್ರಕೂಟವನ್ನು ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುವ ನಾಲ್ಕು-ಪಥದ ಎಕ್ಸ್‌ಪ್ರೆಸ್‌ವೇಗೆ 2020ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. 28 ತಿಂಗಳಲ್ಲಿ ಪೂರ್ಣಗೊಂಡಿರುವ ಈ ಯೋಜನೆಯು ಇಂದು ಲೋಕಾರ್ಪಣೆಯಾಗಿದೆ. ಸುಮಾರು 14,850 ಕೋಟಿ ರೂ. ವೆಚ್ಚದಲ್ಲಿ 296 ಕಿ.ಮೀ ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇ ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ.

Published On - 1:30 pm, Sat, 16 July 22

ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ