
ಚೆನ್ನೈ: ಕೊರೊನಾ ಸೋಂಕು ದೃಢಪಟ್ಟ ನಂತರ ಕೆಲವು ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯ ಐಸಿಯುನಲ್ಲಿ S.P. ಬಾಲಸುಬ್ರಮಣ್ಯಂ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಎಂಜಿಎಂ ಆಸ್ಪತ್ರೆಯಿಂದ ಎಸ್ಪಿಬಿ ಆರೋಗ್ಯದ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಆಗಿದ್ದು, ಎಸ್ಪಿಬಿ ಆರೋಗ್ಯ ಸ್ಟೇಬಲ್ ಆಗಿದ್ದು,ಪೂರ್ಣ ಪ್ರಜ್ಞೆ ಬಂದಿದೆ. ಈಗಲೂ ಎಸ್ಪಿಬಿ ಅವರಿಗೆ ವೆಂಟಿಲೆಟರ್ ಹಾಗೂ ಎಕ್ಮೋ ಸಪೋರ್ಟ್ ಮೂಲಕ ಚಿಕಿತ್ಸೆ ಮುಂದುವರಿದಿದೆ.
ಜೊತೆಗೆ ಫಿಸಿಯೋಥೆರಪಿಗೆ ಚಿಕಿತ್ಸೆಗೆ ಬಹಳ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ. ಹಾಗೂ ಮಲ್ಟಿಡಿಸಿಪ್ಲಿನರಿ ಕ್ಲಿನಿಕಲ್ ಟೀಮ್ ಎಸ್ಪಿಬಿ ಅವರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.
Published On - 6:25 pm, Mon, 31 August 20