AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದ್ಧೂರಿ ಪಾರ್ಟಿ ಮಾಡ್ತಿದ್ದ 11 ಫಾರಿನರ್ಸ್​ ಅರೆಸ್ಟ್​, Drugs ಸಿಕ್ತಾ?

ಲಕ್ನೋ: ಕೊವಿಡ್​ ನಿಯಮಗಳನ್ನು ಉಲ್ಲಂಘಿಸಿ ಅದ್ಧೂರಿ ಪಾರ್ಟಿ ಆಯೋಜಿಸಿದ ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾ ನಗರದಲ್ಲಿ ಬೆಳಕಿಗೆ ಬಂದಿದೆ. ನಿನ್ನೆ ವೀಕೆಂಡ್​ ಪಾರ್ಟಿಯಲ್ಲಿ.. ಭಾನುವಾರ ಮನೆಯೊಂದರಲ್ಲಿ ಪಾರ್ಟಿ ಆಯೋಜಿಸಿದ್ದ ಸುಮಾರು 11 ವಿದೇಶ ಪ್ರಜೆಗಳು ಕೊವಿಡ್​ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ನಾಲ್ವರು ಮಹಿಳೆಯರು ಇದ್ದಾರೆ ಎಂದು ತಿಳಿದುಬಂದಿದೆ. ಬಂಧಿತರು ಬಳಿ ಇದ್ದ 7 ವಾಹನಗಳು, 237 ಬಿಯರ್​ ಕ್ಯಾನ್​ […]

ಅದ್ಧೂರಿ ಪಾರ್ಟಿ ಮಾಡ್ತಿದ್ದ 11 ಫಾರಿನರ್ಸ್​ ಅರೆಸ್ಟ್​, Drugs ಸಿಕ್ತಾ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 31, 2020 | 5:38 PM

ಲಕ್ನೋ: ಕೊವಿಡ್​ ನಿಯಮಗಳನ್ನು ಉಲ್ಲಂಘಿಸಿ ಅದ್ಧೂರಿ ಪಾರ್ಟಿ ಆಯೋಜಿಸಿದ ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾ ನಗರದಲ್ಲಿ ಬೆಳಕಿಗೆ ಬಂದಿದೆ.

ನಿನ್ನೆ ವೀಕೆಂಡ್​ ಪಾರ್ಟಿಯಲ್ಲಿ.. ಭಾನುವಾರ ಮನೆಯೊಂದರಲ್ಲಿ ಪಾರ್ಟಿ ಆಯೋಜಿಸಿದ್ದ ಸುಮಾರು 11 ವಿದೇಶ ಪ್ರಜೆಗಳು ಕೊವಿಡ್​ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ನಾಲ್ವರು ಮಹಿಳೆಯರು ಇದ್ದಾರೆ ಎಂದು ತಿಳಿದುಬಂದಿದೆ.

ಬಂಧಿತರು ಬಳಿ ಇದ್ದ 7 ವಾಹನಗಳು, 237 ಬಿಯರ್​ ಕ್ಯಾನ್​ ಮತ್ತು 51 ಮದ್ಯದ ಬಾಟಲ್​ಗಳನ್ನು ಜಪ್ತಿ ಮಾಡಲಾಗಿದೆ. ಆದ್ರೆ, ಮಾದಕ ವಸ್ತುಗಳ ಬಳಕೆ ಬಗ್ಗೆ ತಕ್ಷಣಕ್ಕೆ ಮಾಹಿತಿಯಿನ್ನೂ ಸಿಕ್ಕಿಲ್ಲ.