AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪ್ಪಿತಸ್ಥ ಪ್ರಶಾಂತ್ ಭೂಷಣ್ ಪರ ಆ ಒಂದು ರೂಪಾಯಿ ದಂಡ ಕಟ್ಟಿದ್ದು ಯಾರು ಗೊತ್ತಾ?

ದೆಹಲಿ: ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿ ಸುಪ್ರೀಂಕೋರ್ಟ್ ನಿಂದ ಇಂದು 1 ರೂ ದಂಡನಾರ್ಹ ಶಿಕ್ಷೆಗೊಳಗಾದರು. ಸೆ. 15ರೊಳಗೆ ಆ 1 ರೂ ದಂಡ ಕಟ್ಟುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತಾದರೂ, ಪ್ರಶಾಂತ್ ಭೂಷಣ್ ಅವರ ಪರ ವಕೀಲರು ತಕ್ಷಣವೇ ಕೋರ್ಟ್​ಗೆ 1 ರೂ ದಂಡ ಕಟ್ಟಿದ್ದಾರೆ. ದಂಡ ಕಟ್ಟಿದ ತಮ್ಮ ಸಹೋದ್ಯೋಗಿಗೆ ವಕೀಲ ಪ್ರಶಾಂತ್ ಭೂಷಣ್ ಕೃತಜ್ಞತೆ ತಿಳಿಸಿದ್ದಾರೆ. ಇಂದು ನನಗೆ ಸುಪ್ರೀಂಕೋರ್ಟ್ ಒಂದು ರೂಪಾಯಿ ದಂಡ ವಿಧಿಸಿದ್ದಾಗ ನನ್ನ ವಕೀಲ […]

ತಪ್ಪಿತಸ್ಥ ಪ್ರಶಾಂತ್ ಭೂಷಣ್ ಪರ ಆ ಒಂದು ರೂಪಾಯಿ ದಂಡ ಕಟ್ಟಿದ್ದು ಯಾರು ಗೊತ್ತಾ?
ಆಯೇಷಾ ಬಾನು
| Edited By: |

Updated on:Aug 31, 2020 | 5:14 PM

Share

ದೆಹಲಿ: ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿ ಸುಪ್ರೀಂಕೋರ್ಟ್ ನಿಂದ ಇಂದು 1 ರೂ ದಂಡನಾರ್ಹ ಶಿಕ್ಷೆಗೊಳಗಾದರು. ಸೆ. 15ರೊಳಗೆ ಆ 1 ರೂ ದಂಡ ಕಟ್ಟುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತಾದರೂ, ಪ್ರಶಾಂತ್ ಭೂಷಣ್ ಅವರ ಪರ ವಕೀಲರು ತಕ್ಷಣವೇ ಕೋರ್ಟ್​ಗೆ 1 ರೂ ದಂಡ ಕಟ್ಟಿದ್ದಾರೆ.

ದಂಡ ಕಟ್ಟಿದ ತಮ್ಮ ಸಹೋದ್ಯೋಗಿಗೆ ವಕೀಲ ಪ್ರಶಾಂತ್ ಭೂಷಣ್ ಕೃತಜ್ಞತೆ ತಿಳಿಸಿದ್ದಾರೆ. ಇಂದು ನನಗೆ ಸುಪ್ರೀಂಕೋರ್ಟ್ ಒಂದು ರೂಪಾಯಿ ದಂಡ ವಿಧಿಸಿದ್ದಾಗ ನನ್ನ ವಕೀಲ ಮತ್ತು ಹಿರಿಯ ಸಹೋದ್ಯೋಗಿ ರಾಜೀವ್ ಧವನ್ ಅವರು ತಕ್ಷಣ 1 ರೂ ನೀಡಿ ಸಹಾಯ ಮಾಡಿದ್ದಾರೆ. ಅದನ್ನು ನಾನು ಕೃತಜ್ಞತೆಯಿಂದ ಅಂಗೀಕರಿಸಿದ್ದೇನೆ ಎಂದು ಹೇಳಿದ್ರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆ ‌ಎಸ್.ಎ. ಬೊಬ್ಡೆ ವಿರುದ್ಧ ಟ್ವಿಟರ್​ನಲ್ಲಿ ಅವಹೇಳನಕಾರಿ ಫೋಸ್ಟ್​ ಮಾಡಿದ್ದ ಕಾರಣದಿಂದಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಪ್ರಶಾಂತ್ ಭೂಷಣ್ ದೋಷಿಯಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಪ್ರಶಾಂತ್ ಭೂಷಣ್​ಗೆ ಸುಪ್ರೀಂಕೋರ್ಟ್ ಸಾಂಕೇತಿಕವಾಗಿ ಒಂದು ರೂಪಾಯಿ ದಂಡ ವಿಧಿಸಿದೆ.

1 ರೂ. ದಂಡ ಪಾವತಿಸದಿದ್ದರೆ 3 ತಿಂಗಳು ಜೈಲು ಶಿಕ್ಷೆ ಹಾಗೂ 3 ವರ್ಷ ಕೋರ್ಟ್​ನಲ್ಲಿ ವಾದ ಮಾಡಬಾರದು ಎಂದೂ ಸಹ ಇಂದು ಬೆಳಗ್ಗೆ ತೀರ್ಪು ನೀಡಿತ್ತು.

ಇದನ್ನೂ ಓದಿ: ಸೆ. 15ರೊಳಗೆ ಸಾಂಕೇತಿಕವಾಗಿ 1 ರೂ ದಂಡ ಕಟ್ಟುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್

Published On - 3:05 pm, Mon, 31 August 20

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ