ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿದೆ ಎಸ್ಪಿಬಿ ಸರ್ ಆರೋಗ್ಯ ಸ್ಥಿತಿ, ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ
ಚೆನ್ನೈ: ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರ ಜೊತೆಗೆ ಎಸ್ಪಿಬಿ ಪುತ್ರ ಚರಣ್ ಚರ್ಚೆ ನಡೆಸುತ್ತಿದ್ದಾರೆ. ಎಸ್ಪಿಬಿ ಪುತ್ರಿ ಪಲ್ಲವಿ, ಸಹೋದರಿ ಶೈಲಜಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಎಸ್ಪಿಬಿ ಆಪ್ತರಲ್ಲಿ, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಕೆಲಹೊತ್ತಲ್ಲಿ ಖ್ಯಾತ ನಿರ್ದೇಶಕ ಭಾರತಿರಾಜ, ಸಂಗೀತ ನಿರ್ದೇಶಕ ಇಳಯರಾಜ ಆಸ್ಪತ್ರೆಗೆ ಭೇಟಿ ನೀಡುವ ಮಾಹಿತಿ ಇದೆ. ಇಂದು ಬೆಳಗ್ಗೆ ಕಮಲ್ ಹಾಸನ್ ಬಂದು ಎಸ್ಪಿಬಿ ಆರೋಗ್ಯ ವಿಚಾರಿಸಿಕೊಂಡು […]
ಚೆನ್ನೈ: ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಷಣ ಕ್ಷಣಕ್ಕೂ ಬಿಗಡಾಯಿಸ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರ ಜೊತೆಗೆ ಎಸ್ಪಿಬಿ ಪುತ್ರ ಚರಣ್ ಚರ್ಚೆ ನಡೆಸುತ್ತಿದ್ದಾರೆ.
ಎಸ್ಪಿಬಿ ಪುತ್ರಿ ಪಲ್ಲವಿ, ಸಹೋದರಿ ಶೈಲಜಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಎಸ್ಪಿಬಿ ಆಪ್ತರಲ್ಲಿ, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಕೆಲಹೊತ್ತಲ್ಲಿ ಖ್ಯಾತ ನಿರ್ದೇಶಕ ಭಾರತಿರಾಜ, ಸಂಗೀತ ನಿರ್ದೇಶಕ ಇಳಯರಾಜ ಆಸ್ಪತ್ರೆಗೆ ಭೇಟಿ ನೀಡುವ ಮಾಹಿತಿ ಇದೆ.
ಇಂದು ಬೆಳಗ್ಗೆ ಕಮಲ್ ಹಾಸನ್ ಬಂದು ಎಸ್ಪಿಬಿ ಆರೋಗ್ಯ ವಿಚಾರಿಸಿಕೊಂಡು ಹೋದರು. ಚೆನ್ನೈ ಎಂಜಿಎಂ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಚೆನ್ನೈನ ಎಸ್ಪಿಬಿ ನಿವಾಸಕ್ಕೆ ಆಗಮಿಸ್ತಿರೋ ಆಪ್ತರು: ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‌ಪಿಬಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇನ್ನೂ ಹೆಲ್ತ್ಬುಲೆಟಿನ್ ಬಿಡುಗಡೆಯಾಗಿಲ್ಲ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಎಸ್ಪಿಬಿ ನಿವಾಸದಲ್ಲಿ ಕುಟುಂಬಸ್ಥರೆಲ್ಲ ಸೇರಿದ್ದಾರೆ. ಕಣ್ಣೀರು ಸುರಿಸುತ್ತಿದ್ದಾರೆ. ಎಸ್ಪಿಬಿ ಮನೆಯ ಸುತ್ತ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ನಿವಾಸಕ್ಕೆ ಆಗಮಿಸೋರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ.
ಎಸ್ಪಿಬಿ ಅವರು ಯಾವತ್ತೂ ನನ್ನನ್ನ ಡ್ರೈವರ್ ಅಂತಾ ನೋಡ್ಲಿಲ್ಲ: ಎಸ್ಪಿ ಬಾಲಸುಬ್ರಹ್ಮಣ್ಯಂ ನಮಗೆ ದೇವರಿದ್ದಂತೆ. ಆದ್ರೆ ನಾವೀಗ ಭಗವಂತನ ಮೇಲೆಯೇ ಭಾರ ಹಾಕಿದ್ದೇವೆ ಎಂದು ಎಂಜಿಎಂ ಆಸ್ಪತ್ರೆ ಎದುರು ಎಸ್ಪಿಬಿ ಡ್ರೈವರ್ ದುಃಖ ಹಂಚಿಕೊಂಡಿದ್ದಾರೆ. ಎಸ್ಪಿಬಿ ಅವರು ಯಾವತ್ತೂ ನನ್ನನ್ನ ಡ್ರೈವರ್ ಅಂತಾ ನೋಡ್ಲಿಲ್ಲ. ಅವರ ಜೊತೆ ಊಟ ಮಾಡಿದ್ದೀನಿ, ಅವರ ಜೊತೆ ಓಡಾಡಿದ್ದೀನಿ. ಅವರ ಮನೆಯ ಮಗನ ರೀತಿ ನಮ್ಮನ್ನ ನೋಡಿಕೊಳ್ತಿದ್ರು .
ಅವರು ಹಾಡಿರೋ ದೇವರು ಹಾಡುಗಳು ದೇವರಿಗೆ ತಲುಪಿವೆ. ಈಗ ಆ ದೇವರೇ ಅವರನ್ನ ಬದುಕಿಸ್ತಾರೆ ಅನ್ನೋ ನಂಬಿಕೆ ಇದೆ. ತಿರುವಣ್ಣಾಮಲೈಗೆ ಎಸ್ಪಿಬಿ ಜಾಸ್ತಿ ಹೋಗ್ತಾ ಇದ್ರು. ಪೂಜೆ ಮುಗಿಯೋ ವರೆಗೂ ಎಸ್ಪಿಬಿ ಹನಿ ನೀರು ಕುಡಿಯುತ್ತಿರಲಿಲ್ಲ. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಎಸ್ಪಿಬಿ ಹಣ ನೀಡಿದ್ರು . ನನಗೆ ಬೈಪಾಸ್ ಸರ್ಜರಿ ಆದಾಗಲೂ ಅವರೇ ಹಣ ನೀಡಿ ನನ್ನನ್ನ ಬದುಕಿಸಿದ್ರು . ಅವರು ವಾಪಸ್ ಬರ್ತಾರೆ ಅನ್ನೋ ನಂಬಿಕೆ ಇದೆ. ವಾಪಸ್ ಬಂದು ಹಾಡು ಹಾಡದೇ ಇದ್ರೂ ನಮ್ಮ ಜೊತೆ ಇದ್ರೆ ಸಾಕು ಎಂದು ಡ್ರೈವರ್ ಷಣ್ಮುಗಂ ದುಃಖದಿಂದ ತಮ್ಮ ನೋವನ್ನು ಹೊರಹಾಕಿದ್ದಾರೆ.
Published On - 12:20 pm, Fri, 25 September 20