ಚೆನ್ನೈ:ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಗಾನಗಾರುಡಿಗ SP ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದ್ದು, ಇಂದು ಬೆಳಗ್ಗೆ SPB ಕಣ್ಣು ತೆರೆದಿದ್ದಾರೆ ಅನ್ನೋ ಮಾಹಿತಿ ಬಂದಿದೆ.
ಕೊರೊನಾ ಸೋಂಕು ದೃಢಪಟ್ಟಮೇಲೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ SPBಯವರ ಆರೋಗ್ಯ ತೀರಾ ಹದಗೆಟ್ಟಿತ್ತು. ಹೀಗಾಗಿ, ಆಸ್ಪತ್ರೆ ವೈದ್ಯರು ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಮುಂದಿನ 24 ಗಂಟೆಗಳ ಕಾಲ ಏನನ್ನು ಹೇಳಲಾಗುವುದಿಲ್ಲ ಎಂದಿದ್ದರು.
ಆದರೆ ಇಂದು SPB ಆರೋಗ್ಯದಲ್ಲಿ ತುಸು ಚೇತರಿಕೆ ಕಂಡುಬಂದಿದ್ದು, ಐಸಿಯುನಲ್ಲಿ ಎಕ್ಮೋ ಮೆಷಿನ್ ಮುಖಾಂತರ ಚಿಕಿತ್ಸೆ ನೀಡಲಾಗುತ್ತಿದೆ. ಎಕ್ಮೋ ಮೆಷಿನ್ನ್ನು ಅಳವಡಿಸಿದ 24 ಗಂಟೆಗಳ ತನಕ ಅವರ ದೇಹದ ವೈಟಲ್ಸ್ ಯಾವುದೇ ಏರಿಳಿತಗಳಿಲ್ಲದೆ ಸಮತೋಲನದಲ್ಲಿರುವುದರಿಂದ ಕೃತಕ ಉಸಿರಾಟದಿಂದ ನೀಡಲ್ಪಟ್ಟ ಆಮ್ಲಜನಕ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.
ಈ ಮೂಲಕ ಅವರ ಶ್ವಾಸಕೋಶಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಗಾಯಕರನ್ನು ಆಸ್ಪತ್ರೆಯ ಮೂರನೇ ಮಹಡಿಯಿಂದ 6ನೇ ಮಹಡಿಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ವೈದ್ಯರ ದೃಷ್ಟಿಯಲ್ಲಿ ಚಲನೆಯ ಹೊರತಾಗಿಯೂ ಶ್ವಾಸಕೋಶಕ್ಕೆ ತೀವ್ರ ಹಾನಿಯಿಂದಾಗಿ ಗಾಯಕ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.