ಗುಜರಾತ್: ನಿವೃತ್ತಿ ಪಡೆದ ಪೊಲೀಸ್ ಶ್ವಾನಗಳಿಗಾಗಿ ವಸತಿ ಸೌಲಭ್ಯ; ದೇಶದಲ್ಲಿಯೇ ಮೊದಲು
ಈ ಸೌಲಭ್ಯವು ಪೊಲೀಸ್ ಶ್ವಾನದಳದ ನಿವೃತ್ತ ನಾಯಿಗಳಿಗಾಗಿ 23 ಕೊಠಡಿಗಳನ್ನು ಹೊಂದಿದೆ ಮತ್ತು ಕರ್ತವ್ಯದಲ್ಲಿರುವ ಶ್ವಾನಗಳಿಗೆ ಮೂರು ಕೊಠಡಿಗಳನ್ನು ಹೊಂದಿದೆ. ಇಲ್ಲಿ ಆಹಾರ, ವೈದ್ಯಕೀಯ ಆರೈಕೆ ಮತ್ತು ಸ್ವಚ್ಛ ಜೀವನ ಪರಿಸರವನ್ನು ನೀಡುತ್ತದೆ ಎಂದು ಪೊಲೀಸ್ ಶ್ವಾನಗಳ ವೃದ್ಧಾಪ್ಯದ ಉಸ್ತುವಾರಿ ಚೌಧರಿ ಹೇಳಿದರು.

ಆನಂದ್ ಜನವರಿ 17 : ಗುಜರಾತ್‌ನ (Gujarat) ಆನಂದ್ ಜಿಲ್ಲೆಯಲ್ಲಿ ನಿವೃತ್ತ ಪೊಲೀಸ್ ಶ್ವಾನಗಳಿಗೆ (Police Dog) ವಯಸ್ಸಾಗಿದ್ದು ಅಥವಾ ಇತರ ಕಾರಣಗಳಿಂದ ಕೆಲಸ ಮಾಡಲು ಸಾಧ್ಯವಾಗದೇ ಇದ್ದ ಅವುಗಳ ಸೇವೆಗೆ ಸ್ಮರಣಿಕೆಯಾಗಿ ಸೂಕ್ತ ಸೌಲಭ್ಯಗಳನ್ನು ಒದಗಿಸಲು ವಿಶೇಷ ಮನೆಯನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೀಸಲಾದ ಮನೆ ಅವರ ಆರಾಮದಾಯಕ ವಾಸ್ತವ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಬೋರ್ಡಿಂಗ್ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜೆ ಜೆ ಚೌಧರಿ ತಿಳಿಸಿದ್ದಾರೆ.
ಪ್ರಸ್ತುತ, ಈ ಮನೆ ದೇಶದಲ್ಲಿಯೇ ಮೊದಲನೆಯದು. ಇದರಲ್ಲಿ 16 ನಿವೃತ್ತ ನಾಯಿಗಳು, ಎರಡು ಕರ್ತವ್ಯದಲ್ಲಿರುವ ಮತ್ತು ಎರಡು ತರಬೇತಿ ನಾಯಿಗಳು ಸೇರಿದಂತೆ 20 ನಾಯಿಗಳಿವೆ ಎಂದು ಅವರು ಹೇಳಿದರು.
ಈ ಸೌಲಭ್ಯವು ಪೊಲೀಸ್ ಶ್ವಾನದಳದ ನಿವೃತ್ತ ನಾಯಿಗಳಿಗಾಗಿ 23 ಕೊಠಡಿಗಳನ್ನು ಹೊಂದಿದೆ ಮತ್ತು ಕರ್ತವ್ಯದಲ್ಲಿರುವ ಶ್ವಾನಗಳಿಗೆ ಮೂರು ಕೊಠಡಿಗಳನ್ನು ಹೊಂದಿದೆ. ಇಲ್ಲಿ ಆಹಾರ, ವೈದ್ಯಕೀಯ ಆರೈಕೆ ಮತ್ತು ಸ್ವಚ್ಛ ಜೀವನ ಪರಿಸರವನ್ನು ನೀಡುತ್ತದೆ ಎಂದು ಪೊಲೀಸ್ ಶ್ವಾನಗಳ ವೃದ್ಧಾಪ್ಯದ ಉಸ್ತುವಾರಿ ಚೌಧರಿ ಹೇಳಿದರು.
ಪೊಲೀಸ್ ಶ್ವಾನದಳದ ನಿವೃತ್ತ ಸದಸ್ಯರಿಗೆ ನಿತ್ಯ 700 ಗ್ರಾಂ ಹಾಲು, 170 ಗ್ರಾಂ ರೊಟ್ಟಿ, ಬೆಳಗ್ಗೆ ಒಂದು ಮೊಟ್ಟೆ, ಸಂಜೆ 280 ಗ್ರಾಂ ಕುರಿ ಮಾಂಸ, ತರಕಾರಿ ಮತ್ತು ಅನ್ನ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಬೆಳಗ್ಗೆ ಹೊತ್ತು ಪಶು ಆಸ್ಪತ್ರೆಗಳ ವೈದ್ಯರಿಂದ ಇವುಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಈ ಮನೆಯಲ್ಲಿ ಸಾಕಿರುವ ಎಲ್ಲಾ ನಾಯಿಗಳನ್ನು ಪಶು ಆಸ್ಪತ್ರೆ ವೈದ್ಯರು 15 ದಿನಕ್ಕೊಮ್ಮೆ ತಪಾಸಣೆಗೆ ಒಳಪಡಿಸುತ್ತಾರೆ. ತುರ್ತು ಪರಿಸ್ಥಿತಿ ಸಂಭವಿಸಿದರೆ ನಾಯಿಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಪೊಲೀಸ್ ವ್ಯಾನ್ ಸಹ ನಿಗದಿಪಡಿಸಲಾಗಿದೆ. “ಚೌಧರಿ ಹೇಳಿದರು.
ಇದನ್ನೂ ಓದಿ: Viral Video: ರಾಮಾಯಣದ ತೊಗಲು ಗೊಂಬೆಯಾಟ ವೀಕ್ಷಿಸಿದ ಮೋದಿ, ಇದು ಕರ್ನಾಟಕದ ಶ್ರೀಮಂತ ಕಲೆ
ದೈನಂದಿನ ದಿನಚರಿಯಂತೆ, ನಾಯಿಗಳನ್ನು ತಮ್ಮ ಬ್ಯಾರಕ್‌ಗಳಿಂದ ಹೊರಗೆ ತೆಗೆದುಕೊಂಡು ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ತೆರೆದ ಮೈದಾನದಲ್ಲಿ ಆಡಲು ಬಿಡಲಾಗುತ್ತದೆ. ಅವುಗಳಿಗೂ ತಾಲೀಮು ನೀಡಿ, ಆಹಾರ ನೀಡಿ ಮರಳಿ ಬ್ಯಾರಕ್‌ಗೆ ಹಾಕಲಾಗುತ್ತದೆ ಎಂದರು. ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ, ಜನರು ಈ ನಾಯಿಗಳನ್ನು ಭೇಟಿ ಮಾಡಲು, ಅವುಗಳೊಂದಿಗೆ ಸಮಯ ಕಳೆಯಲು ಮತ್ತು ಅವುಗಳಿಗೆ ಆಹಾರವನ್ನು ನೀಡಲು ಅನುಮತಿಸಲಾಗಿದೆ ಎಂದು ಚೌಧರಿ ಹೇಳಿದರು.
ನಿವೃತ್ತಿ ಪ್ರಕ್ರಿಯೆಯು ವಾರ್ಷಿಕ ಫಿಟ್‌ನೆಸ್ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಅದನ್ನು ಕ್ಲಿಯರ್ ಮಾಡಲು ವಿಫಲವಾದರೆ ಅಥವಾ ಕರ್ತವ್ಯದ ಸಮಯದಲ್ಲಿ ಗಾಯಗೊಂಡ ನಾಯಿಗಳನ್ನು ನಿವೃತ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅನರ್ಹವೆಂದು ಪ್ರಮಾಣೀಕರಿಸಲಾಗುತ್ತದೆ. ಸ್ಫೋಟಕಗಳಿಗೆ ಒಡ್ಡಿಕೊಳ್ಳುವುದರಿಂದ ಕೆಲಸ ಮಾಡುವ ಪೊಲೀಸ್ ನಾಯಿಯ ಜೀವಿತಾವಧಿ ಕಡಿಮೆಯಾಗುತ್ತದೆ ಮತ್ತು ಅವು ಸಾಮಾನ್ಯವಾಗಿ 8 ರಿಂದ 10 ವರ್ಷ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



