ಅಯೋಧ್ಯೆಗೆ ಬಂದ ಭಕ್ತರ ದಂಡು: ವಿಶೇಷ ಸುಗಂಧ ದ್ರವ್ಯದಿಂದ ಆಧ್ಯಾತ್ಮಿಕ ಸ್ವಾಗತ

ಇಂದು ರಾಮಮಂದಿರದಲ್ಲಿ ನಡೆದ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅಯೋಧ್ಯೆಗೆ ಬಂದ ಭಕ್ತರನ್ನು ಸ್ವಾಗತಿಸಲು ಉತ್ತರ ಪ್ರದೇಶದ ಬರೇಲಿಯ ಸುಗಂಧ ದ್ರವ್ಯ ಉದ್ಯಮಿಯೊಬ್ಬರು ವಿಶೇಷ ಸುಗಂಧ ದ್ರವ್ಯ ಮತ್ತು ಊದುಬತ್ತಿಯನ್ನು ಸಿದ್ಧಪಡಿಸಿದ್ದಾರೆ.

ಅಯೋಧ್ಯೆಗೆ ಬಂದ ಭಕ್ತರ ದಂಡು: ವಿಶೇಷ ಸುಗಂಧ ದ್ರವ್ಯದಿಂದ ಆಧ್ಯಾತ್ಮಿಕ ಸ್ವಾಗತ
ವಿಶೇಷ ಸುಗಂಧ ದ್ರವ್ಯ
Edited By:

Updated on: Jan 22, 2024 | 1:17 PM

ಅಯೋಧ್ಯೆ, ಜ.22: 500 ವರ್ಷಗಳ ಹೋರಾಟ, ಕೋಟ್ಯಾಂತರ ಜನರ ಕನಸು ಇಂದು ನನಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟಿಸಿದ್ದಾರೆ (Ayodhya Ram Mandir). ಪೂಜಾ ವಿಧಿವಿಧಾನ ನೆರವೇರಿಸಿ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ವಿಶೇಷವೆಂದರೆ ಈ ಐತಿಹಾಸಿಕ ದಿನಕ್ಕಾಗಿ ಸುಗಂಧ ದ್ರವ್ಯ ಉದ್ಯಮಿಯೊಬ್ಬರು ಎಲ್ಲೂ ಸಿಗದ ಹೊಸ ಮಾದರಿಯ ವಿಶೇಷ ಸುಗಂಧ ದ್ರವ್ಯ (Perfume) ಮತ್ತು ಊದುಬತ್ತಿಯನ್ನು (Incense) ಸಿದ್ಧಪಡಿಸಿ ಭಕ್ತಿ ತೋರ್ಪಡಿಸಿದ್ದಾರೆ.

ಇಂದು ರಾಮಮಂದಿರದಲ್ಲಿ ನಡೆದ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅಯೋಧ್ಯೆಗೆ ಬಂದ ಭಕ್ತರನ್ನು ಸ್ವಾಗತಿಸಲು ಉತ್ತರ ಪ್ರದೇಶದ ಬರೇಲಿಯ ಸುಗಂಧ ದ್ರವ್ಯ ಉದ್ಯಮಿಯೊಬ್ಬರು ವಿಶೇಷ ಸುಗಂಧ ದ್ರವ್ಯ ಮತ್ತು ಊದುಬತ್ತಿಯನ್ನು ಸಿದ್ಧಪಡಿಸಿದ್ದಾರೆ. ಗೌರವ್ ಮಿತ್ತಲ್ ಎಂಬ ಸುಗಂಧ ದ್ರವ್ಯ ಉದ್ಯಮಿ ಹಾಗೂ ಅವರ ತಂಡ ಸೇರಿಕೊಂಡು ಸುಮಾರು 10 ದಿನಗಳ ಕಾಲ ಪರಿಶ್ರಮ ಪಟ್ಟು ಹೊಸ ರೀತಿಯ ಕಸ್ತೂರಿ ಸುಗಂಧ ದ್ರವ್ಯಗಳು ಮತ್ತು ಕೇಸರಿ ಧೂಪದ್ರವ್ಯಗಳನ್ನು ವಿಶೇಷವಾಗಿ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕಾಗಿಯೇ ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ: ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ: ಸುಂದರ ಮೂರ್ತಿ ಹೀಗಿದೆ ನೋಡಿ

ಅಯೋಧ್ಯೆಗೆ ಬಂದ ಭಕ್ತರಿಗೆ ಈ ವಿಶೇಷ ಸುಗಂಧದ ಬಾಟಲಿಗಳು ಮತ್ತು ಅಗರಬತ್ತಿಗಳನ್ನು ಉಡುಗೊರೆಯಾಗಿ ನೀಡಿ ಸ್ವಾಗತಿಸಲಾಗಿದೆ. ಅಯೋಧ್ಯೆಗೆ 5,000 ಸುಗಂಧ ದ್ರವ್ಯದ ಬಾಟಲಿಗಳು ಮತ್ತು 7,000 ಅಗರಬತ್ತಿಗಳನ್ನು ಕಳುಹಿಸಲಾಗಿತ್ತು. ಅಲ್ಲದೆ ಗೌರವ್ ಮಿತ್ತಲ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಸುಗಂಧ ದ್ರವ್ಯ ನೀಡಿ ಧನ್ಯವಾದ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಗೌರವ್ ಮಿತ್ತಲ್, ಈ ವಿಶೇಷ ದಿನಕ್ಕೆಂದೆ ವಿಶೇಷ ಸುಗಂಧ ದ್ರವ್ಯವನ್ನು ರಚಿಸಲು ನನಗೆ ಅವಕಾಶ ಕೂಡಿಬಂತು. ಇದಕ್ಕಾಗಿ ಕಸ್ತೂರಿ ಸುಗಂಧ ದ್ರವ್ಯ ಮತ್ತು ಕೇಸರಿ ಊದುಬತ್ತಿಗಳನ್ನು ಮಾಡಿದ್ದೇನೆ. ರಾಮಚರಿತಮಾನಸದಲ್ಲಿ ತಿಳಿಸಿರುವಂತೆ, ಶ್ರೀ ರಾಮ ಜನಿಸಿದಾಗ, ದಶರಥ ಮಹಾರಾಜರು ಅಯೋಧ್ಯೆಯಾದ್ಯಂತ ಶ್ರೀಗಂಧ ಮತ್ತು ಕಸ್ತೂರಿಯನ್ನು ಸಿಂಪಡಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ, ನೈಸರ್ಗಿಕ ಸುಗಂಧವನ್ನು ಸೃಷ್ಟಿಸಲು ನಾವೂ ಸಹ ಅದೇ ಅಂಶಗಳನ್ನು ಬಳಸಬೇಕು ಎಂದು ನಾನು ಭಾವಿಸಿದ್ದೇನೆ ಎಂದು ಮಿತ್ತಲ್ ಅವರು ಖಾಸಗಿ ಸುದ್ದಿ ಪತ್ರಿಕೆಗೆ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ