ಚಿರತೆಗಳನ್ನು ಕರೆತರಲು ಭಾರತದಿಂದ ವಿಶೇಷ ವಿಮಾನವೊಂದು ನಮೀಬಿಯಾಗೆ ತೆರಳಿದೆ. ಈ ವಿಮಾನದಲ್ಲಿ ಚಿರತೆಗಳ ಸುಂದರ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಈ ಕಂಪನಿಯು ಮೊದಲ ಬಾರಿಗೆ ವಿಮಾನದಲ್ಲಿ ಚಿರತೆಗಳನ್ನು ಸ್ಥಳಾಂತರಿಸುತ್ತಿದೆ.
ಈ ದೊಡ್ಡ ವಿಮಾನದಿಂದ 8 ಚಿರತೆಗಳನ್ನು ಭಾರತಕ್ಕೆ ತರಲಾಗುವುದು. ಇದಕ್ಕಾಗಿ, ಪ್ರಧಾನಿ ಮೋದಿ ಅವರ ಜನ್ಮದಿನದಂದು ಸೆಪ್ಟೆಂಬರ್ 17 ರಂದು ಕುನೋ ಅಭಯಾರಣ್ಯಕ್ಕೆ ತೆರಳಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಭಾರತದಲ್ಲಿ ಚಿರತೆಗಳನ್ನು ಪುನರ್ವಸತಿಗೊಳಿಸುವ ಯೋಜನೆಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಯಾದ ಚೀತಾ ಸಂರಕ್ಷಣಾ ನಿಧಿಯು ಬುಧವಾರ ಚಿತ್ರವನ್ನು ಬಿಡುಗಡೆ ಮಾಡಿದೆ.
ಸೆಪ್ಟೆಂಬರ್ 16 ರಂದು ಹಾರಾಟ ನಡೆಸಿದ್ದು, ಈಗಾಗಲೇ ನಮೀಬಿಯಾ ತಲುಪಿದೆ. ವಿಶೇಷ ವಿಮಾನ B747 ಜಂಬೋ ಜೆಟ್ 8 ಚಿರತೆಗಳನ್ನು ಹೊತ್ತು ಸೆಪ್ಟೆಂಬರ್ 16 ಶುಕ್ರವಾರ ನಮೀಬಿಯಾದಿಂದ ಭಾರತಕ್ಕೆ ಹಾರಲಿದೆ.
ವಿಮಾನ ಪ್ರಯಾಣವು 16 ರಿಂದ 20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಸೆಪ್ಟೆಂಬರ್ 17 ರಂದು ಬೆಳಿಗ್ಗೆ ಎಲ್ಲಾ ಚಿರತೆಗಳು ಸಂಜೆ 7 ರ ಸುಮಾರಿಗೆ ಭಾರತವನ್ನು ತಲುಪಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಯಾಣವು ಒಟ್ಟು 16 ಗಂಟೆ 40 ನಿಮಿಷಗಳು.
ಜೈಪುರದಿಂದ ಒಂದು ಗಂಟೆಯ ನಂತರ ಚಿರತೆಗಳು ಕುನೊವನ್ನು ತಲುಪುತ್ತವೆ. ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನಿಂದ ನವದೆಹಲಿಗೆ ವಿಮಾನ ಪ್ರಯಾಣವು 4 ಗಂಟೆಗಳ ನಿಲುಗಡೆಯೊಂದಿಗೆ 16 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಕಾರ್ಗೋ ವಿಮಾನದಿಂದ ಹೆಲಿಕಾಪ್ಟರ್‌ಗೆ ಚಿರತೆಗಳನ್ನು ಸ್ಥಳಾಂತರಿಸಿದ ನಂತರ ಮತ್ತು ಇತರ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಚಿರತೆಗಳು 1 ಗಂಟೆ ಪ್ರಯಾಣದ ನಂತರ ಕುನೊ-ಪಾಲ್ಪುರದ ಹೆಲಿಪ್ಯಾಡ್‌ಗೆ ತಲುಪುತ್ತವೆ.
– All India Radio News (@airnewsalerts) 15 Sep 2022
1952 ರಲ್ಲಿ ದೇಶದಲ್ಲಿ ಈ ಪ್ರಭೇದವು ಅಳಿವಿನಂಚಿನಲ್ಲಿತ್ತು. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆದಿದ್ದು, ಈಗಾಗಲೇ ಈ B747 ಜಂಬೋ ಜೆಟ್ ವಿಮಾನ ಆಫ್ರಿಕಾ ಖಂಡದ ನಮೀಬಿಯಾ ದೇಶದ ರಾಜಧಾನಿ ವಿಂಡೆಕ್‌ಗೆ ತೆರಳಿದೆ.
ಹುಲಿಗಳ ನಾಡಿಗೆ ಸದ್ಭಾವನಾ ರಾಯಭಾರಿಗಳನ್ನು ಕೊಂಡೊಯ್ಯಲು ವಿಶೇಷ ಹಕ್ಕಿಯೊಂದು ಧೈರ್ಯದ ನಾಡಿನ ಭೂಮಿಯನ್ನು ಸ್ಪರ್ಶಿಸಿದೆ ಎಂದು ಕಾವ್ಯಾತ್ಮಕವಾಗಿ ವಿಂಡ್‌ಹೋಕ್‌ನಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್ ಮಾಡಿತ್ತು.
ಆಫ್ರಿಕಾದ ಈ ಚಿರತೆಗಳನ್ನು ಭಾರತಕ್ಕೆ ಕರೆತರುತ್ತಿರುವ ಈ ವಿಶೇಷ ವಿಮಾನದ ಮುಖ್ಯ ಕ್ಯಾಬಿನ್‌ನಲ್ಲಿ ಪಂಜರಗಳನ್ನು ಭದ್ರಪಡಿಸಲು ಸಾಧ್ಯವಾಗುವಂತೆ ಮಾರ್ಪಡಿಸಲಾಗಿದೆ .
ಆದರೆ ಹಾರಾಟದ ಸಮಯದಲ್ಲಿ ಪಶುವೈದ್ಯರಿಗೆ ಈ ಚಿರತೆಗಳನ್ನು ಗಮನಿಸಲು ಪೂರ್ಣ ಅವಕಾಶವನ್ನು ನೀಡಲಾಗಿದೆ. ಈ ವಿಶೇಷ ಜೆಟ್ ವಿಮಾನಕ್ಕೆ ಹುಲಿಯ ಚಿತ್ರದ ಪೇಂಟಿಂಗ್ ಮಾಡಲಾಗಿದೆ.
ಈ ಚಿರತೆಗಳು ತಮ್ಮ ಪ್ರಯಾಣದ ವೇಳೆ ಸಂಪೂರ್ಣ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಬೆಳೆಸಲಿವೆ ಎಂದು ಹಿರಿಯ ಭಾರತೀಯ ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.
ಈ ಮಾಂಸಹಾರಿ ಆಫ್ರಿಕಾನ್ ಚಿರತೆಗಳು ಭಾರತದಲ್ಲಿ ಅಳಿದು ಹೋಗಿವೆ.. 1947ರಲ್ಲಿ ಛತ್ತೀಸಗಢದ ಕೊರಿಯಾ ಜಿಲ್ಲೆಯಲ್ಲಿ ಕೊನೆಯ ಬಾರಿಗೆ ಆಫ್ರಿಕನ್ ಚೀತಾವನ್ನು ನೋಡಲಾಗಿತ್ತು. 1952ರಲ್ಲಿ ದೇಶದಿಂದ ಚೀತಾಗಳ ಸಂತತಿ ಅಳಿದು ಹೋಗಿದೆ ಎಂದು ಘೋಷಿಸಲಾಗಿತ್ತು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:10 am, Fri, 16 September 22