Sputnik V: ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಭಾರತದಲ್ಲಿ ಬಳಸಲು ತಜ್ಞರ ಒಪ್ಪಿಗೆ

| Updated By: ganapathi bhat

Updated on: Apr 05, 2022 | 12:38 PM

ಸದ್ಯ ಭಾರತದಲ್ಲಿ ಕೊವಿಡ್-19 ವಿರುದ್ಧದ ಎರಡು ಲಸಿಕೆಗಳಿಗೆ ಅನುಮತಿ ಇದೆ. ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಯನ್ನು ದೇಶದಲ್ಲಿ ನೀಡಲಾಗುತ್ತಿದೆ.

Sputnik V: ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಭಾರತದಲ್ಲಿ ಬಳಸಲು ತಜ್ಞರ ಒಪ್ಪಿಗೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ ವಿ ಬಳಸುವ ಬಗ್ಗೆ ತಜ್ಞರ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪುಟ್ನಿಕ್ ಲಸಿಕೆ ಬಳಕೆ ಮಾಡುವ ಬಗ್ಗೆ ತಜ್ಞರು ಅನುಮೋದನೆ ನೀಡಿದ್ದಾರೆ. ಮುಂದೆ, ಭಾರತದ ಔಷಧ ಮಹಾನಿಯಂತ್ರಕರು (DCGI) ಕೂಡ ಅನುಮತಿ ನೀಡಿದರೆ ಈ ಲಸಿಕೆ ಬಳಕೆಗೆ ಲಭ್ಯವಾಗಲಿದೆ. ಭಾರತದಲ್ಲಿ ಅನುಮೋದನೆ ಪಡೆದುಕೊಂಡ ಮೂರನೇ ಕೊರೊನಾ ಲಸಿಕೆ ಇದಾಗಲಿದೆ.

ಸದ್ಯ ಭಾರತದಲ್ಲಿ ಕೊವಿಡ್-19 ವಿರುದ್ಧದ ಎರಡು ಲಸಿಕೆಗಳಿಗೆ ಅನುಮತಿ ಇದೆ. ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಲಸಿಕೆಯನ್ನು ದೇಶದಲ್ಲಿ ನೀಡಲಾಗುತ್ತಿದೆ.

ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ಡಾ.ರೆಡ್ಡಿಸ್ ಕಂಪನಿ ಉತ್ಪಾದನೆ ಮಾಡುತ್ತಿದೆ. ಕೊವಿಡ್ ವಿರುದ್ಧದ ಹೋರಾಟದಲ್ಲಿ ಇದು ಶೇ 91.6ರಷ್ಟು ಪರಿಣಾಮಕಾರಿ ಎನಿಸಿದೆ. ಮಾಡೆರ್ನಾ ಫೈಜರ್ ಲಸಿಕೆ ಬಳಿಕ ಅತಿ ಹೆಚ್ಚು ಪರಿಣಾಮಕಾರಿ ಲಸಿಕೆ ಇದು ಎಂದಾಗಿದೆ. ಫೆ.19ರಂದು ಡಾ. ರೆಡ್ಡಿಸ್, ಲಸಿಕೆಯ ತುರ್ತು ಬಳಕೆಗೆ ಅರ್ಜಿ ಸಲ್ಲಿಸಿತ್ತು. ಲಸಿಕೆಯು ಈಗ 3ನೇ ಹಂತದ ವೈದ್ಯಕೀಯ ಪರೀಕ್ಷೆ ಎದುರಿಸುತ್ತಿದೆ.

ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ 18ರಿಂದ 99 ವರ್ಷದ ಸುಮಾರು 1,600 ಜನರಿಗೆ ನಡೆದಿದೆ. ಯುಎಇ, ವೆನಜುವೆಲಾ ಮತ್ತು ಬೆಲರುಸ್​ನಲ್ಲಿ ಕೂಡ ಲಸಿಕೆ ಪ್ರಯೋಗ ನಡೆಯುತ್ತಿದೆ. ಎರಡು ಡೋಸ್​ಗಳ ರಷ್ಯಾ ತಯಾರಿಯ ಈ ಲಸಿಕೆ 10 ಡಾಲರ್​ಗಿಂತ ಕಡಿಮೆ ದರಕ್ಕೆ (ಸುಮಾರು 750 ರೂಪಾಯಿ) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ದೇಶದಲ್ಲಿ 1,68,912 ಹೊಸ ಕೊವಿಡ್ ಪ್ರಕರಣಗಳು
ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 1,68,912 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದ್ದು 904 ಮಂದಿ ಸಾವಿಗೀಡಾಗಿದ್ದಾರೆ. 12,01,009 ರಷ್ಟು ಸಕ್ರಿಯ ಪ್ರಕರಣಗಳಿವೆ. 1,21,56,529 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,70,179ಕ್ಕೇರಿದ್ದು, ಸೋಂಕಿತರ ಸಂಖ್ಯೆ 1,35,27,717 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ದೇಶದಾದ್ಯಂತ ಲಸಿಕೆ ನೀಡುವ ಅಭಿಯಾನ ಟೀಕಾ ಉತ್ಸವ (ಲಸಿಕೆ ಉತ್ಸವ) ಎರಡನೇ ದಿನವಾಗಿದೆ ಇದೆ. ಏಪ್ರಿಲ್ 11ರ ರಾತ್ರಿ 8 ಗಂಟೆಯವರೆಗಿನ ಅಂಕಿಅಂಶಗಳ ಪ್ರಕಾರ 10.43 ಕೋಟಿ ಲಸಿಕೆ ನೀಡಲಾಗಿದೆ. ದೇಶದಾದ್ಯಂತ 9.14 ಕೋಟಿ ಮೊದಲ ಡೋಸ್ ಮತ್ತು 1.29 ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: Karnataka Lockdown News: ಲಾಕ್​ಡೌನ್​ ಹೇರುವ ಪರಿಸ್ಥಿತಿ ತರಬೇಡಿ.. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಲಸಿಕೆ ತೆಗೆದುಕೊಳ್ಳಿ : ಪ್ರತಾಪ್​ ಸಿಂಹ ಮನವಿ

ಇದನ್ನೂ ಓದಿ: Karnataka Lockdown Latest Updates: 2ನೇ ಅಲೆ ಸಿಕ್ಕಾಪಟ್ಟೆ ಡೇಂಜರಸ್: ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ, ಲಾಕ್​ಡೌನ್​ ಮುನ್ಸೂಚನೆ?

Published On - 4:37 pm, Mon, 12 April 21