ಗಡಿ ಉದ್ವಿಗ್ನ: ಶ್ರೀನಗರ-ಲೇಹ್ ಹೆದ್ದಾರಿ ಬಂದ್, ತಾಜಾ ಸ್ಥಿತಿ ಏನು?
ದೆಹಲಿ: ಲಡಾಖ್ನಲ್ಲಿ ಚೀನಾ, ಭಾರತದ ಸೈನಿಕರ ಘರ್ಷಣೆ ನಡೆದು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೂ ಭಾರತೀಯ ಸೇನೆಗೆ ಸರ್ಕಾರ ತುರ್ತು ಅಧಿಕಾರ ನೀಡಿದೆ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ನಡೆಯಬಹುದು. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀನಗರ-ಲೇಹ್ ಹೆದ್ದಾರಿ ಬಂದ್ ಮಾಡಿ ಸರ್ಕಾರ ಆದೇಶ ನೀಡಿದೆ. ಹೆದ್ದಾರಿಯಲ್ಲಿ ಸಾರ್ವಜನಿಕರ ಸಂಚಾರ ಕೂಡ ನಿಷೇಧಿಸಲೂ ಸೂಚಿಸಿದೆ. ಹೀಗಾಗಿ ಲಡಾಖ್ಗೆ ಸಂಪರ್ಕ ಕಲ್ಪಿಸುವ ಶ್ರೀನಗರ-ಲೇಹ್ ಹೆದ್ದಾರಿ ಬಂದ್ ಮಾಡಲಾಗಿದ್ದು, ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಈಗಾಗಲೆ […]
ದೆಹಲಿ: ಲಡಾಖ್ನಲ್ಲಿ ಚೀನಾ, ಭಾರತದ ಸೈನಿಕರ ಘರ್ಷಣೆ ನಡೆದು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೂ ಭಾರತೀಯ ಸೇನೆಗೆ ಸರ್ಕಾರ ತುರ್ತು ಅಧಿಕಾರ ನೀಡಿದೆ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ನಡೆಯಬಹುದು.
ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀನಗರ-ಲೇಹ್ ಹೆದ್ದಾರಿ ಬಂದ್ ಮಾಡಿ ಸರ್ಕಾರ ಆದೇಶ ನೀಡಿದೆ. ಹೆದ್ದಾರಿಯಲ್ಲಿ ಸಾರ್ವಜನಿಕರ ಸಂಚಾರ ಕೂಡ ನಿಷೇಧಿಸಲೂ ಸೂಚಿಸಿದೆ. ಹೀಗಾಗಿ ಲಡಾಖ್ಗೆ ಸಂಪರ್ಕ ಕಲ್ಪಿಸುವ ಶ್ರೀನಗರ-ಲೇಹ್ ಹೆದ್ದಾರಿ ಬಂದ್ ಮಾಡಲಾಗಿದ್ದು, ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಈಗಾಗಲೆ ಸರ್ಕಾರ ಮೂರು ಸೇನಾ ಪಡೆಗಳಿಗೆ ಅಲರ್ಟ್ ಆಗಿರಲು ತಿಳಿಸಿದೆ. ಭಾರತೀಯ ಸೇನೆ ಚೀನಾ ವಿರುದ್ಧ ಪ್ರತಿ ದಾಳಿಗೆ ಸಜ್ಜಾಗಿದೆ.
ತಾಜಾ ಸ್ಥಿತಿ ಏನು? ಲಡಾಖ್ನಲ್ಲಿ ಘರ್ಷಣೆಯಲ್ಲಿ 40ಕ್ಕೂ ಹೆಚ್ಚು ಚೀನಾ ಸೈನಿಕರು ಮೃತಪಟ್ಟಿರುವ ಸಾಧ್ಯತೆಯಿದೆ. ಹೀಗಾಗಿ ಭಾರತ-ಚೀನಾ ಗಡಿಗೆ ಆ್ಯಂಬುಲೆನ್ಸ್‌ಗಳು ಆಗಮಿಸಿವೆ. ಲಡಾಖ್ ಗಡಿಯಲ್ಲಿ ಹೆಚ್ಚಿದ ಚೀನಾ ಹೆಲಿಕಾಪ್ಟರ್‌ಗಳು ಹಾರಾಡತೊಡಗಿವೆ.
Published On - 11:08 am, Wed, 17 June 20