ತಮಿಳುನಾಡಿನಲ್ಲೂ SSLC ಪರೀಕ್ಷೆ ರದ್ದಾಯ್ತು! ರಾಜ್ಯದಲ್ಲಿ ಸುರೇಶ್ ಕುಮಾರ್ ನಿರ್ಧಾರ ಏನು?

| Updated By:

Updated on: Jun 09, 2020 | 1:16 PM

ಉಡುಪಿ: ಮಹಾಮಾರಿ ಕೊರೊನಾ ವೈರಸ್​ನಿಂದ ತೆಲಂಗಾಣದಲ್ಲಿ SSLC ಪರೀಕ್ಷೆಯನ್ನು ರದ್ದುಗೊಳಿಸಲಾಯ್ತು. ಇದೀಗ ತಮಿಳುನಾಡಿನಲ್ಲೂ ಎಸ್ಎಸ್ಎಲ್​ಸಿ ಪರೀಕ್ಷೆ ರದ್ದುಗೊಳಿಸಲಾಗಿದೆ. ಅಲ್ಲದೆ ಪರೀಕ್ಷೆ ಬರೆಯದೆ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧರಿಸಲಾಗಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಎಕ್ಸಾಂ ರದ್ದುಗೊಳಿಸಿ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಆದೇಶಿಸಿದ್ದಾರೆ. ರಾಜ್ಯದಲ್ಲಿ ನಿಗದಿಯಂತೆ SSLC ಪರೀಕ್ಷೆ ನಡೆಯಲಿದೆ: ಆದ್ರೆ ರಾಜ್ಯದಲ್ಲಿ ನಿಗದಿಯಂತೆ SSLC ಪರೀಕ್ಷೆ ನಡೆಯಲಿದೆ. SSLC ಪರೀಕ್ಷೆ ವೇಳೆ ಸಮಸ್ಯೆಯಾದ್ರೆ ಪರ‍್ಯಾಯ ವ್ಯವಸ್ಥೆ ಮಾಡಲಾಗುತ್ತೆ. ಹೀಗಾಗಿ ನಿಗದಿಯಂತೆ ಪರೀಕ್ಷೆ ನಡೆಸಲು […]

ತಮಿಳುನಾಡಿನಲ್ಲೂ SSLC ಪರೀಕ್ಷೆ ರದ್ದಾಯ್ತು! ರಾಜ್ಯದಲ್ಲಿ ಸುರೇಶ್ ಕುಮಾರ್ ನಿರ್ಧಾರ ಏನು?
Follow us on

ಉಡುಪಿ: ಮಹಾಮಾರಿ ಕೊರೊನಾ ವೈರಸ್​ನಿಂದ ತೆಲಂಗಾಣದಲ್ಲಿ SSLC ಪರೀಕ್ಷೆಯನ್ನು ರದ್ದುಗೊಳಿಸಲಾಯ್ತು. ಇದೀಗ ತಮಿಳುನಾಡಿನಲ್ಲೂ ಎಸ್ಎಸ್ಎಲ್​ಸಿ ಪರೀಕ್ಷೆ ರದ್ದುಗೊಳಿಸಲಾಗಿದೆ. ಅಲ್ಲದೆ ಪರೀಕ್ಷೆ ಬರೆಯದೆ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ನಿರ್ಧರಿಸಲಾಗಿದೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಎಕ್ಸಾಂ ರದ್ದುಗೊಳಿಸಿ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಆದೇಶಿಸಿದ್ದಾರೆ.

ರಾಜ್ಯದಲ್ಲಿ ನಿಗದಿಯಂತೆ SSLC ಪರೀಕ್ಷೆ ನಡೆಯಲಿದೆ:
ಆದ್ರೆ ರಾಜ್ಯದಲ್ಲಿ ನಿಗದಿಯಂತೆ SSLC ಪರೀಕ್ಷೆ ನಡೆಯಲಿದೆ. SSLC ಪರೀಕ್ಷೆ ವೇಳೆ ಸಮಸ್ಯೆಯಾದ್ರೆ ಪರ‍್ಯಾಯ ವ್ಯವಸ್ಥೆ ಮಾಡಲಾಗುತ್ತೆ. ಹೀಗಾಗಿ ನಿಗದಿಯಂತೆ ಪರೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಉಡುಪಿಯಲ್ಲಿ ಶಿಕ್ಷಣ ಸಚಿವ ಸುರೇಶ್ ‌ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಳವಾಗಿಲ್ಲ. ಹೊರ ರಾಜ್ಯದಿಂದ ಬಂದವರಿಗೆ ಕೊರೊನಾ ಸೋಂಕು ಇದೆ. ಹೀಗಾಗಿ ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ. ಶಾಲೆಯನ್ನೂ ಆರಂಭಿಸುವ ಉದ್ದೇಶವೂ ಸದ್ಯಕ್ಕೆ ಇಲ್ಲ. ಸರ್ಕಾರದ ಮುಂದೆ ಇಂತಹ ಉದ್ದೇಶ ಇಲ್ಲ. ಪೋಷಕರ ಜತೆ ಚರ್ಚೆಯ ಬಳಿಕ ನಿರ್ಧಾರ ಮಾಡುತ್ತೇವೆ. ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನೂ ತೆರೆಯುವಂತಿಲ್ಲ. ಆದೇಶ ಮೀರಿ ಖಾಸಗಿ ಶಾಲೆಗಳನ್ನು ಆರಂಭ ಮಾಡಿದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್ ‌ಕುಮಾರ್ ಎಚ್ಚರಿಕೆ ನೀಡಿದರು.

Published On - 1:06 pm, Tue, 9 June 20