ದೆಹಲಿ: ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ (municipal polls) ದಿನಾಂಕಗಳ ಘೋಷಣೆಯನ್ನು ರಾಜ್ಯ ಚುನಾವಣಾ ಆಯೋಗವು ಬುಧವಾರ ಮುಂದೂಡಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಇದನ್ನು “ಕೇಂದ್ರದ ಆಜ್ಞೆಯ ಮೇರೆಗೆ” ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರದಿಂದ ದಕ್ಷಿಣ, ಪೂರ್ವ ಮತ್ತು ಉತ್ತರ ಎಂಬ ಮೂರು ನಿಗಮಗಳನ್ನು ಏಕಕಾಲದಲ್ಲಿ ಒಗ್ಗೂಡಿಸಲು ಏಕಕಾಲದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದು ದೇಶದ ಪ್ರಜಾಪ್ರಭುತ್ವದಲ್ಲಿ ದುರದೃಷ್ಟಕರ ದಿನ. ಇದು ನಮ್ಮ ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ನ್ಯಾಯಸಮ್ಮತ ಮತ್ತು ಸಮಯೋಚಿತ ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಎಂಸಿಡಿ ಚುನಾವಣೆಗಳಿಗೆ ದಿನಾಂಕಗಳನ್ನು ನಿಗದಿಪಡಿಸಲು ನಿರಾಕರಿಸಿದೆ. ಇಂದು ಎಂಸಿಡಿ ಚುನಾವಣೆಯ ದಿನಾಂಕಗಳನ್ನು ಘೋಷಿಸಲು ಚುನಾವಣಾ ಆಯೋಗ ಎಲ್ಲಾ ಮಾಧ್ಯಮ ಸದಸ್ಯರನ್ನು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿಗೆ ಕರೆದಿತ್ತು. ಆದರೆ ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಒತ್ತಡ ಹೇರಿ ತಡೆದು ನಿಲ್ಲಿಸಿದರು. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿ ಸೋಲನ್ನು ಒಪ್ಪಿಕೊಂಡಿರುವುದರಿಂದ ಮತ್ತು ಓಡಿಹೋಗುತ್ತಿರುವ ಕಾರಣ ದೆಹಲಿಯ ಮುನ್ಸಿಪಲ್ ಚುನಾವಣೆಯನ್ನು ಮುಂದೂಡಲಾಗಿದೆ ಎಂದಿದ್ದಾರೆ.
ಬಿಜೆಪಿ ಓಡಿ ಹೋಗಿದೆ. ಅವರು ಎಂಸಿಡಿ ಚುನಾವಣೆಯನ್ನು ಮುಂದೂಡಿದರು ಮತ್ತು ಸೋಲನ್ನು ಒಪ್ಪಿಕೊಂಡರು. ದೆಹಲಿಯ ಜನರು ತುಂಬಾ ಕೋಪಗೊಂಡಿದ್ದಾರೆ. ಚುನಾವಣೆಯನ್ನು ಮುಂದೂಡುವ ಹುಮ್ಮಸ್ಸು ಇವರಿಗೆ ಹೇಗೆ ಎಂದು ಕೇಳುತ್ತಿದ್ದಾರೆ. ಅವರು ಬಿಜೆಪಿ ಠೇವಣಿ ಕಳೆದುಕೊಳ್ಳುವಂತೆ ಮಾಡುತ್ತಾರೆ. 272ರಲ್ಲಿ 250 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಸಮೀಕ್ಷೆ ಹೇಳಿದೆ. ಈಗ ನಾವು 260 ಕ್ಕಿಂತ ಹೆಚ್ಚು ಪಡೆಯುತ್ತೇವೆ. ಆದರೆ ಚುನಾವಣಾ ಆಯೋಗವು ಬಿಜೆಪಿಯ ಒತ್ತಡಕ್ಕೆ ಮಣಿಯಬಾರದಿತ್ತು,” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
भाजपा भाग गयी। MCD चुनाव टाल दिया, हार मान ली
दिल्ली वाले खूब ग़ुस्सा हैं। कह रहे हैं इनकी हिम्मत कि चुनाव ना करायें? अब इनकी ज़मानत ज़ब्त करायेंगे
हमारे सर्वे में अभी 272 में से 250 सीट आ रहीं थीं। अब 260 से ज़्यादा आएँगी
पर चुनाव आयोग को भाजपा के दबाव में नहीं आना चाहिए था
— Arvind Kejriwal (@ArvindKejriwal) March 9, 2022
ದೆಹಲಿ ಸರ್ಕಾರದ ಮೂಲಗಳ ಪ್ರಕಾರ, ನಗರದಲ್ಲಿರುವ ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನು ಒಂದುಗೂಡಿಸುವಲ್ಲಿ ಕೇಂದ್ರವು ಕೆಲಸ ಮಾಡುತ್ತಿದೆ. ಈ ಘೋಷಣೆಗೆ ಅನುಗುಣವಾಗಿ ಎಂಸಿಡಿ ಚುನಾವಣೆಯ ಘೋಷಣೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ಹೇಳುತ್ತವೆ.
ಏತನ್ಮಧ್ಯೆ, ದೆಹಲಿ ಬಿಜೆಪಿ ವಕ್ತಾರ ಹರೀಶ್ ಖುರಾನಾ, ಬಿಜೆಪಿ ಎಂದಿಗೂ ಚುನಾವಣೆಗೆ ಹೆದರುವುದಿಲ್ಲ. “ನಾವು ಯಾವಾಗಲೂ ಚುನಾವಣೆಗೆ ಸಿದ್ಧರಿದ್ದೇವೆ. ಇಂದು ಇರಲಿ, ನಾಳೆ ಇರಲಿ, ಯಾವಾಗಲಾದರೂ ನಾವು ಗೆಲ್ಲುತ್ತೇವೆ. ಈಗ ಅದನ್ನು ಯಾವಾಗ ನಡೆಸಬೇಕು ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸುತ್ತದೆ. ಆದರೆ ಇಂದು, ಎಲ್ಲಾ ಮೂರು ನಿಗಮಗಳ ದುಃಸ್ಥಿತಿಗೆ ಅರವಿಂದ್ ಕೇಜ್ರಿವಾಲ್ ಅವರು ಎಂಸಿಡಿಗಳಿಗೆ ಹಣವನ್ನು ನೀಡದೆ ಮಲತಾಯಿಯ ವರ್ತನೆಯಿಂದಾಗಿ ಕಾರಣ ಎಂಬುದಂತೂ ನಿಜ ಎಂದಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ ಅಮಿತ್ ಶಾ; ಏನೋ ವಿಶೇಷ ಇರಬೇಕು ಎಂದ ಶಶಿ ತರೂರ್
Published On - 8:18 pm, Wed, 9 March 22