ಎಚ್ಚರ ಎಚ್ಚರ!! ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೊಬೈಲ್​, ಲ್ಯಾಪ್​ಟಾಪ್​​ ಚಾರ್ಜ್​​ ಇಟ್ಟರೇ ನಿಮ್ಮ ಖಾತೆಯಿಂದ ಹಣ ಮಾಯ

| Updated By: ವಿವೇಕ ಬಿರಾದಾರ

Updated on: Sep 25, 2022 | 9:50 PM

ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್​, ಲ್ಯಾಪ್​ಟಾಪ್​, ಡೆಸ್ಕ್​ಟಾಪ್​ಗಳನ್ನು ಚಾರ್ಜ್​ ಇಡುವ ಮುಖಾಂತರವು ನೀವು ಸೈಬರ್​ ವಂಚಕರಿಗೆ ಆಹುತಿಯಾಗಬಹುದು.

ಎಚ್ಚರ ಎಚ್ಚರ!! ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೊಬೈಲ್​, ಲ್ಯಾಪ್​ಟಾಪ್​​ ಚಾರ್ಜ್​​ ಇಟ್ಟರೇ ನಿಮ್ಮ ಖಾತೆಯಿಂದ ಹಣ ಮಾಯ
ಪ್ರಾತಿನಿಧಿಕ ಚಿತ್ರ
Follow us on

ಇತ್ತೀಚಿಗೆ ಸೈಬರ್​ ಕ್ರೈಂಗಳ ಪ್ರಕರಣಗಳು ಬಹಳಷ್ಟು ದಾಖಲಾಗುತ್ತಿವೆ. ಸಾಕಷ್ಟು ಜನರು ಸೈಬರ್​ ಕ್ರೈಂ ಮುಖಾಂತರ ಹಣವನ್ನು ಕಳೆದುಕೊಂಡು ನೊಂದಿದ್ದಾರೆ. ಇಷ್ಟು ದಿನಗಳ ಕಾಲ ಮೆಸೇಜ್​ ಕಳುಹಿಸುವ ಮೂಲಕ, ಕರೆ ಮಾಡುವ ಮೂಲಕ ಅಥವಾ ಬ್ಲ್ಯಾಕ್ ​ಮೇಲ್ ಮಾಡುವ ಮುಖಾಂತರ​ ನಿಮ್ಮ ಬ್ಯಾಂಕ್​ ಖಾತೆಯ ಮಾಹಿತಿ ಪಡೆದು ನಿಮ್ಮ ಹಣವನ್ನು ಎಗರಿಸುತ್ತಿದ್ದರು.

ಆದರೆ ಇತ್ತೀಚಿಗೆ ಹೊಸ ಪ್ರಕರಣಗಳು ದಾಖಲಾಗಿವೆ. ಅದೇನೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್​, ಲ್ಯಾಪ್​ಟಾಪ್​, ಡೆಸ್ಕ್​ಟಾಪ್​ಗಳನ್ನು ಚಾರ್ಜ್​ ಇಡುವ ಮುಖಾಂತರವು ನೀವು ಸೈಬರ್​ ವಂಚಕರಿಗೆ ಆಹುತಿಯಾಗಬಹುದು. ನೀವು ವಿಮಾನ ನಿಲ್ದಾಣಗಳು, ಬಸ್ ನಿಲ್ದಾಣಗಳು, ಮೆಟ್ರೋ ರೈಲುಗಳು ಮತ್ತು ಇತರ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳು ಅಥವಾ USB ಪೋರ್ಟ್‌ಗಳನ್ನು ನೀವು ನೋಡಿರಲೂಬಹುದು ಮತ್ತು ಬಳಸಿರಬಹುದು.

ಆದರೆ ಇನ್ನೂಮುಂದೆ ಅವುಗಳನ್ನು ಬಳಸಬೇಡಿ ಎಂದು ಸೈಬರ್​ ಕ್ರೈಂ ಪೊಲೀಸರು ಹೇಳಿದ್ದಾರೆ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್​ ಹಾಕುವ ಮುಖಾಂತರ ನಿಮ್ಮ ಮೊಬೈಲ್​, ಲ್ಯಾಪ್​ಟಾಪ್​ನಲ್ಲಿರುವ ಮಾಹಿತಿಯನ್ನು ಪಡೆದು ಹಣವನ್ನು ದೋಚುತ್ತಿರುವ ಪ್ರಕರಣಗಳು ವರದಿಯಾಗಿವೆ.

ಹೈದರಾಬಾದ್‌ನ ಕಂಪನಿಯೊಂದರ ಸಿಇಒ ಒಬ್ಬರು ಸಾರ್ವಜನಿಕ ಸ್ಥಳದಲ್ಲಿ ಯುಎಸ್‌ಬಿ ಪೋರ್ಟ್ ಮೂಲಕ ತಮ್ಮ ಮೊಬೈಲ್​ನ್ನು ಚಾರ್ಜ್ ಮಾಡುತ್ತಿದ್ದರು. ತಮ್ಮ ಮೊಬೈಲ್​ ಚಾರ್ಜ್​ವಾದ ಬಳಿಕ ಅವರ ಬ್ಯಾಂಕ್​ ಖಾತೆಯಿಂದ 16 ಲಕ್ಷ ರೂಪಾಯಿ ಹಣ ಡ್ರಾ ಆಗಿರುವ ಮೆಸೆಜ್​ ಬಂದಿದೆ.

ನವದೆಹಲಿಯಲ್ಲೂ ಇದೇ ರೀತಿಯಾದ ಮೊತ್ತೊಂದು ಪ್ರಕರಣ ದಾಖಲಾಗಿದೆ. ನವದೆಹಲಿಯಲ್ಲಿ ಮಹಿಳೆಯೊಬ್ಬರು ದೆಹಲಿ ವಿಮಾನ ನಿಲ್ದಾಣದಲ್ಲಿ ಫೋನ್​ ಚಾರ್ಚ್​ ಕಡಿಮೆಯಾಗಿದೆ. ಆಗ ಏರ್‌ಪೋರ್ಟ್‌ನಲ್ಲಿರುವ ಯುಎಸ್‌ಬಿ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಫೋನ್​ನ್ನು ಚಾರ್ಜಿಂಗ್ ಮಾಡಲು ಇರಿಸಿದ್ದಾರೆ. ಕೆಲವು ಗಂಟೆಗಳ ನಂತರ ಅವರ ಮೊಬೈಲ್‌ಗೆ ಸಂದೇಶ ಬಂದಿದ್ದು, ಅದರಲ್ಲಿ ಆಕೆಯ ಬ್ಯಾಂಕ್ ಖಾತೆಯಿಂದ 1 ಲಕ್ಷದ 20 ಸಾವಿರ ರೂ ಡೆಬಿಟ್​ ಆಗಿದೆ ಎಂದು ಇಂಡಿಯಾ ಡಾಟ್​ ಕಾಮ್​ ವರದಿ ಮಾಡಿದೆ.

ಮೊಬೈಲ್ ಚಾರ್ಜಿಂಗ್ ಸ್ಟೇಷನ್, ಯುಎಸ್‌ಬಿ ಪವರ್ ಸ್ಟೇಷನ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೊಬೈಲ್‌ಗಳನ್ನು ಚಾರ್ಜ್ ಮಾಡಬೇಡಿ. ಸೈಬರ್ ವಂಚಕರು ಮೊಬೈಲ್‌ನಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ ಎಂದು ಸೆಪ್ಟೆಂಬರ್ 15 ರಂದು ಒಡಿಶಾ ಪೊಲೀಸರು ಟ್ವೀಟ್​ ಮಾಡಿದ್ದಾರೆ.

Published On - 9:50 pm, Sun, 25 September 22