ಪುರಸಭೆಯಲ್ಲಿ ಕಸ ಗುಡಿಸುವ ಮಹಿಳೆಯ ಕೈ ಹಿಡಿದ ಸರ್ಕಾರ! ಏನಿದು ಸ್ಟೋರಿ? ಆ ಮಹಿಳೆ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

| Updated By: ಸಾಧು ಶ್ರೀನಾಥ್​

Updated on: Sep 24, 2021 | 2:02 PM

Story of hope: ಮದುವೆ ಆದ ಮೇಲೆ ರಜನಿ ಎರಡು ಹೆಣ್ಣು ಮಕ್ಕಳ ತಾಯಿಯಾದರು. ಆದಾಗ್ಯೂ ಓದು ಮರೆಯದೆ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯತೊಡಗಿದರು. ಈ ಮಧ್ಯೆ, ಪತಿ ಹೃದಯ ಸಂಬಂಧಿ ಕಾಯಿಲೆಯಿಂದ ಹಾಸಿಗೆ ಹಿಡಿದರು.ಇದೇ ವೇಳೇ ವಯಸ್ಸಾದ ಅತ್ತೆಯ ಭಾರವೂ ಈ ಕುಟುಂಬದ ಮೇಲೆ ಬಿತ್ತು. ಆಗ ಅನಿವಾರ್ಯವಾಗಿ ರಜನಿ ತರಕಾರಿ ವ್ಯಾಪಾರ ಮಾಡುವುದರ ಜೊತೆಗೆ ಹೈದರಾಬಾದ್​ ನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡರು. ಮುಂದೆ...

ಪುರಸಭೆಯಲ್ಲಿ ಕಸ ಗುಡಿಸುವ ಮಹಿಳೆಯ ಕೈ ಹಿಡಿದ ಸರ್ಕಾರ! ಏನಿದು ಸ್ಟೋರಿ? ಆ ಮಹಿಳೆ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
ಪುರಸಭೆಯಲ್ಲಿ ಕಸ ಗುಡಿಸುವ ಮಹಿಳೆಯ ಕೈ ಹಿಡಿದ ಸರ್ಕಾರ! ಏನಿದು ಸ್ಟೋರಿ? ಆ ಮಹಿಳೆ ವಿಶೇಷತೆ ಏನು? ಇಲ್ಲಿದೆ ಕಂಪ್ಲೀಟ್​ ಸ್ಟೋರಿ
Follow us on

ಹೈದರಾಬಾದ್: ತೆಲಂಗಾಣ ಸರ್ಕಾರವು ಹೈದರಾಬಾದ್​ನ ನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಒಮ್ಮೆಗೇ ಸಹಾಯಕ ಕೀಟಶಾಸ್ತ್ರಜ್ಞರನ್ನಾಗಿ ನೇಮಿಸಿ, ಮಹಿಳೆಯನ್ನು ಅಚ್ಚರಿಯ ಮಡುವಿಗೆ ದೂಡಿದೆ. ಪುರಸಭೆ ಇಲಾಖೆಯ ಸಚಿವ ಕೆಟಿ ರಾಮರಾವ್ ಪರವಾಗಿ ನಗರಾಭಿವೃದ್ಧಿ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಅರವಿಂದ ಕುಮಾರ್​ ಅವರು ಸೀದಾ ಹೈದರಾಬಾದ್​ ನಗರಪಾಲಿಕೆ ಕಚೇರಿಗೆ (GHMC) ಬಂದು ಕಸ ಗುಡಿಸುತ್ತಿದ್ದ ಮಹಿಳೆಯ ಕೈಗೆ ನೂತನ ಉದ್ಯೋಗದ ನೇಮಕಾತಿ ಪತ್ರ ನೀಡಿದಾಗ ಭಾವುಕರಾಗಿ.. ಆ ಮಹಿಳೆ ಜಸ್ಟ್​ ಕಣ್ಣೀರು ಸುರಿಸಿದ್ದಾರೆ.

ಏನು ಆ ಮಹಿಳೆಯ ವಿಶೇಷ ಅಂದರೆ ಅವರು ಕಸಗುಡಿಸುವ ಕೆಲಸದ (Sweeper) ಜೊತೆಗೆ ತರಕಾರಿ ವ್ಯಾಪಾರಿಯೂ (Vegetable Vendor) ಆಗಿದ್ದರು. ಈ ಮಧ್ಯೆ ಇಬ್ಬರು ಹೆಣ್ಣು ಮಕ್ಕಳ ತಾಯಿಯೂ ಆದರು. ಇದೇ ವೇಳೆ ಗಂಡ ಎದೆ ಹಿಡಿದುಕೊಂಡು ಹಾಸಿಗೆ ಹಿಡಿದರು. ಅಂದಹಾಗೆ ಈ ಸಂಕಷ್ಟಗಳ ಸರಮಾಲೆ ಹೊತ್ತಿದ್ದ ಆ ಮಹಿಳೆ ತಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ ಕೀಟಶಾಸ್ತ್ರ ವಿಷಯದಲ್ಲಿ ಎಂಎಸ್ಸಿ (MSc) ಸಹ ಮಾಡಿದ್ದರು. ಅದುವೇ ಆಕೆಯ ಕೈಹಿಡಿದು ಇಂದು ಸಹಾಯಕ ಕೀಟಶಾಸ್ತ್ರಜ್ಞರನ್ನಾಗಿ (Asst Entomologist) ಮಾಡಿದೆ. ಸದ್ಯಕ್ಕೆ ಆಕೆಯ ಕಷ್ಟಕೋಟಲೆ ಕಳಚಿದೆ. ಆಕೆಯ ಹೆಸರು ರಜನಿ. ಸ್ನಾತಕೋತ್ತರ ಪದವೀಧರೆ ರಜನಿಯ ಈ ಮನೋಜ್ಞ ಕತೆ ನಿಜಕ್ಕೂ ವ್ಯವಸ್ಥೆಯಲ್ಲಿನ ನಂಬಿಕೆ, ಭರವಸೆಯ ದ್ಯೋತಕವಾಗಿದೆ.

ವಾರಂಗಲ್​ ಜಿಲ್ಲೆಯ ರೈತಾಪಿ ಕುಟುಂಬದಿಂದ ಬಂದ ರಜನಿ, ಅಪ್ಪ-ಅಮ್ಮನ ಬಡತನದ ಮಧ್ಯೆಯೂ 2013ರಲ್ಲಿ ಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು. ಹೈದರಾಬಾದ್​ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (Hyderabad Central University) ಪಿಹೆಚ್.​ಡಿ (PhD) ಮಾಡಲು ನೋಂದಾಯಿಸಿಕೊಂಡಿದ್ದರು. ಆದರೆ ಈ ಮಧ್ಯೆ ರಜನಿ ಅಪ್ಪ-ಅಮ್ಮ ಮಗಳನ್ನು ಹೈದರಬಾದಿನ ವಕೀಲರೊಬ್ಬರಿಗೆ ನೀಡಿ, ಮದುವೆ ಮಾಡಿಸಿದರು.

ಮದುವೆ ಆದ ಮೇಲೆ ರಜನಿ ಎರಡು ಹೆಣ್ಣು ಮಕ್ಕಳ ತಾಯಿಯಾದರು. ಆದಾಗ್ಯೂ ಓದು ಮರೆಯದೆ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯತೊಡಗಿದರು. ಈ ಮಧ್ಯೆ, ಪತಿ ಹೃದಯ ಸಂಬಂಧಿ ಕಾಯಿಲೆಯಿಂದ ಹಾಸಿಗೆ ಹಿಡಿದರು.ಇದೇ ವೇಳೇ ವಯಸ್ಸಾದ ಅತ್ತೆಯ ಭಾರವೂ ಈ ಕುಟುಂಬದ ಮೇಲೆ ಬಿತ್ತು. ಆಗ ಅನಿವಾರ್ಯವಾಗಿ ರಜನಿ ತರಕಾರಿ ವ್ಯಾಪಾರ ಮಾಡುವುದರ ಜೊತೆಗೆ ಹೈದರಾಬಾದ್​ ನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸಕ್ಕೆ ತಿಂಗಳಿಗೆ 10 ಸಾವಿರ ರೂಪಾಯಿಯಂತೆ ಕಾಂಟ್ರಾಕ್ಟ್​ ಕೆಲಸಕ್ಕೆ ಸೇರಿಕೊಂಡರು. ಮುಂದೆ ಅದು ಹೇಗೋ ರಜನಿ ತೊಳಲಾಟ ನಗರಾಭಿವೃದ್ಧಿ ಸಚಿವರ ಕಿವಿಗೆ ಬಿದ್ದು, ಮಾನವೀಯತೆ ಆಧಾರದ ಮೇಲೆ ರಜನಿಗೆ ಆಕೆಯ ಓದು, ಕಷ್ಟಕ್ಕೆ ತಕ್ಕಂತೆ ಸಹಾಯಕ ಕೀಟಶಾಸ್ತ್ರಜ್ಞರನ್ನಾಗಿ ನೇಮಿಸಿ ಭರವಸೆಯ ಬೆಳಕಾಗಿದ್ದಾರೆ.

(Story of hope Rajani from GHMC Sweeper Vegetable Vendor To Asst Entomologist in Telangana)