ರಾಜಸ್ಥಾನದಲ್ಲಿ 2 ಗಂಟೆಯೊಳಗೆ 40 ಜನರಿಗೆ ಕಚ್ಚಿದ ಬೀದಿನಾಯಿ; ಆಸ್ಪತ್ರೆ ವಾರ್ಡ್​ಗಳು ಫುಲ್!

ಬೀದಿ ನಾಯಿಯಿಂದ ಕಡಿತಕ್ಕೊಳಗಾದ ಜನರು ಸಮೀಪದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಜನರಿಂದ ತುಂಬಿ ತುಳುಕುತ್ತಿದ್ದು, ವಾರ್ಡ್​ಗಳು ಫುಲ್ ಆಗಿವೆ.

ರಾಜಸ್ಥಾನದಲ್ಲಿ 2 ಗಂಟೆಯೊಳಗೆ 40 ಜನರಿಗೆ ಕಚ್ಚಿದ ಬೀದಿನಾಯಿ; ಆಸ್ಪತ್ರೆ ವಾರ್ಡ್​ಗಳು ಫುಲ್!
ಸಾಂದರ್ಭಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Dec 30, 2022 | 3:49 PM

ಬಾರ್ಮರ್: ರಾಜಸ್ಥಾನದ (Rajasthan) ಬಾರ್ಮರ್‌ನಲ್ಲಿ ಬೀದಿ ನಾಯಿಯೊಂದು ಕೇವಲ 2 ಗಂಟೆಗಳಲ್ಲಿ 40 ಜನರಿಗೆ ಕಚ್ಚಿದ್ದು, ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಬೀದಿ ನಾಯಿಯಿಂದ (Stray Dog) ಕಡಿತಕ್ಕೊಳಗಾದ ಜನರು ಸಮೀಪದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಜನರಿಂದ ತುಂಬಿ ತುಳುಕುತ್ತಿದ್ದು, ವಾರ್ಡ್​ಗಳು ಫುಲ್ ಆಗಿವೆ. ನಾಯಿ ಕಚ್ಚಿ 40 ಜನರಿಗೆ ಗಾಯಗಳಾಗಿದ್ದು, ಬಾರ್ಮರ್ (Barmer) ಜಿಲ್ಲೆಯ ಕಲ್ಯಾಣಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆ ಆಸ್ಪತ್ರೆಯ ಆಡಳಿತ ಮಂಡಳಿಯೂ ತಬ್ಬಿಬ್ಬಾಯಿತು. ಕೂಡಲೇ ನಗರಸಭೆಗೆ ಮಾಹಿತಿ ನೀಡಲಾಗಿದ್ದು, ಬೀದಿ ನಾಯಿಯನ್ನು ಹಿಡಿಯಲು 2 ತಂಡಗಳನ್ನು ರಚಿಸಲಾಯಿತು. ಕೊನೆಗೆ ಆಸ್ಪತ್ರೆಯ ಸಿಬ್ಬಂದಿಯ ನೆರವಿನಿಂದ ಬೀದಿ ನಾಯಿಯನ್ನು ಹಿಡಿಯಲಾಯಿತು.

ಇದನ್ನೂ ಓದಿ: Street Dog Attack: 8 ವರ್ಷದ ಬಾಲಕಿ ಹಾಗೂ ತಂದೆ ಮೇಲೆ ಬೀದಿ ನಾಯಿ ದಾಳಿ, ಬಾಲಕಿ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹೊಲಿಗೆ

ಇದೀಗ ಬಾರ್ಮರ್ ನಗರದ ವಿವಿಧ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿಯಲು ನಗರಸಭೆ ಮುಂದಾಗಿದೆ. ಹಠಾತ್ ಬೀದಿನಾಯಿ ಕಡಿತದಿಂದ ಗಾಯಗೊಂಡ ಅನೇಕ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಲ್. ಮನ್ಸೂರಿಯಾ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ