ಶಾಲಾ ಬಸ್ನಲ್ಲಿ ಸೀಟಿಗಾಗಿ ಜಗಳ, ಬಾಲಕ ಸಾವು
ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಸಣ್ಣ ಜಗಳ ದುರಂತ ತಿರುವು ಪಡೆದುಕೊಂಡು 14 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. 9 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಸರವಣನ್ ಮತ್ತು ಕಂದಗುರು ನಡುವೆ ಶಾಲಾ ಬಸ್ಸಿನಲ್ಲಿ ಸೀಟಿನ ಕುರಿತು ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿತು, ಮತ್ತು ಆ ಕ್ಷಣದಲ್ಲಿ ಸರವಣನ್ ಕಂದಗುರುವನ್ನು ತಳ್ಳಿದ ಪರಿಣಾಮ ಆತ ಬಿದ್ದು ತಲೆಗೆ ಪೆಟ್ಟು ಬಿದ್ದಿತ್ತು ಎಂದು ಹೇಳಲಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಸಾಗಿಸಲಾಯಿತಾದರೂ, ಗುರುವಾರ ಬೆಳಗ್ಗೆ ಕಂದಗುರು ಸಾವನ್ನಪ್ಪಿದರು

ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಸಣ್ಣ ಜಗಳ ದುರಂತ ತಿರುವು ಪಡೆದುಕೊಂಡು 14 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. 9 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಾದ ಸರವಣನ್ ಮತ್ತು ಕಂದಗುರು ನಡುವೆ ಶಾಲಾ ಬಸ್ಸಿನಲ್ಲಿ ಸೀಟಿನ ಕುರಿತು ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿತು, ಮತ್ತು ಆ ಕ್ಷಣದಲ್ಲಿ ಸರವಣನ್ ಕಂದಗುರುವನ್ನು ತಳ್ಳಿದ ಪರಿಣಾಮ ಆತ ಬಿದ್ದು ತಲೆಗೆ ಪೆಟ್ಟು ಬಿದ್ದಿತ್ತು ಎಂದು ಹೇಳಲಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಸಾಗಿಸಲಾಯಿತಾದರೂ, ಗುರುವಾರ ಬೆಳಗ್ಗೆ ಕಂದಗುರು ಸಾವನ್ನಪ್ಪಿದರು.
ಘಟನೆಯ ನಂತರ, ಸೇಲಂ ಪೊಲೀಸರು ಸರವಣನ್ನ್ನು ವಶಕ್ಕೆ ಪಡೆದಿದ್ದಾರೆ, ಮುಂದಿನ ಕಾನೂನು ಕ್ರಮಗಳಿಗಾಗಿ ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದರು.
ವಾಗ್ವಾದಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಕ್ಟೋಬರ್ 2024 ರಲ್ಲಿ, ಪ್ರೆಸಿಡೆನ್ಸಿ ಕಾಲೇಜಿನ 19 ವರ್ಷದ ವಿದ್ಯಾರ್ಥಿ ಎ ಸುಂದರ್, ಪಚೈಯಪ್ಪ ಕಾಲೇಜಿನ ವಿದ್ಯಾರ್ಥಿಗಳ ಗುಂಪಿನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ.
ಎತ್ತಿನಬಂಡಿಗೆ ಬೈಕ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ಸಾವು ಎತ್ತಿನಬಂಡಿಗೆ ಬೈಕ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ನಡೆದಿದೆ. 25 ವರ್ಷದ ಶಶಿಕುಮಾರ ಉಪ್ಪಾರ, 23 ವರ್ಷದ ಆಕಾಶ ಬಿರಾದಾರ ಮತ್ತು 23 ವರ್ಷದ ದರ್ಶನ ಮೃತ ದುರ್ದೈವಿಗಳು.
ಮತ್ತಷ್ಟು ಓದಿ: ಶಾಲೆಯಿಂದ ತಡವಾಗಿ ಬಂದಿದ್ದಕ್ಕೆ ಮಗನನ್ನು ಹೊಡೆದು ಕೊಂದ ಕುಡುಕ ತಂದೆ
ಇಬ್ಬರು ವಿದ್ಯಾರ್ಥಿಗಳು ಸೇರಿ ಬೈಕ್ನಲ್ಲಿ ಮೂವರು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಜಾತ್ರೆಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಹನುಮನಮಟ್ಟಿ ಗ್ರಾಮದಿಂದ ಮೈಲಾರ ಜಾತ್ರೆಗೆ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ. ಆಕಾಶ ಮತ್ತು ದರ್ಶನ ಮೂರನೇ ವರ್ಷದ ಬಿಎಸ್ಸಿ ಅಗ್ರಿ ಓದುತ್ತಿದ್ದರು.
ಶಶಿಕುಮಾರ ಹನುಮನಮಟ್ಟಿ ಗ್ರಾಮದಲ್ಲಿ ಹೋಟೆಲ್ ಕೆಲಸ ಮಾಡುತ್ತಿದ್ದ. ತಡರಾತ್ರಿ ಎತ್ತಿನಬಂಡಿಗೆ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Tue, 11 February 25