ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿ, ಶಿಕ್ಷಕಿಯ ಕುರ್ಚಿಯ ಕೆಳಗಿಟ್ಟು ಸಿಡಿಸಿದ ವಿದ್ಯಾರ್ಥಿ
ತಂತ್ರಜ್ಞಾನ ತೀರಾ ಮುಂದುವರೆದಿರುವುದರಿಂದ ಅನುಕೂಲ ಎಷ್ಟಿದೆಯೇ ಅನನುಕೂಲಗಳು ಕೂಡ ಅಷ್ಟೇ ಇವೆ. ವಿದ್ಯಾರ್ಥಿಯೊಬ್ಬ ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ್ದಷ್ಟೇ ಅಲ್ಲದೆ ಅದನ್ನು ಶಿಕ್ಷಕಿಯ ಕುರ್ಚಿಯಡಿಯಿಟ್ಟು ಸಿಡಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ತಂತ್ರಜ್ಞಾನ ತೀರಾ ಮುಂದುವರೆದಿರುವುದರಿಂದ ಅನುಕೂಲ ಎಷ್ಟಿದೆಯೇ ಅನನುಕೂಲಗಳು ಕೂಡ ಅಷ್ಟೇ ಇವೆ. ವಿದ್ಯಾರ್ಥಿಯೊಬ್ಬ ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ್ದಷ್ಟೇ ಅಲ್ಲದೆ ಸ್ನೇಹಿತರ ಜತೆ ಸೇರಿ ಅದನ್ನು ಶಿಕ್ಷಕಿಯ ಕುರ್ಚಿಯಡಿಯಿಟ್ಟು ಸಿಡಿಸಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ 13 ವಿದ್ಯಾರ್ಥಿಗಳನ್ನು ಒಂದು ವಾರಗಳವರೆಗೆ ಅಮನಾತುಗೊಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಶಿಕ್ಷಕರ ಕುರ್ಚಿಯ ಕೆಳಗೆ ಪಟಾಕಿಯಂತಹ ಬಾಂಬ್ ಅನ್ನು ಇರಿಸಿದ್ದರು. ಯಾವುದೋ ವಿಚಾರಕ್ಕಾಗಿ ವಿದ್ಯಾರ್ಥಿಗೆ ಶಿಕ್ಷಕರು ಬೈದಿದ್ದನ್ನೇ ಮನಸ್ಸಿನಲ್ಲಿಟ್ಟುಕೊಂಡು ಈ ಕೃತ್ಯವೆಸಗಿದ್ದಾನೆ.
ಕುರ್ಚಿಯ ಕೆಳಗೆ ಬಾಂಬ್ ಇರಿಸಿ ರಿಮೋಟ್ ಮೂಲಕ ಅದನ್ನು ಸಿಡಿಸಿದ್ದಾರೆ. ಆ ಸ್ಫೋಟವು ಕುರ್ಚಿಯಡಿ ದೊಡ್ಡ ರಂಧ್ರವನ್ನು ಸೃಷ್ಟಿಸಿತ್ತು. ಅದೃಷ್ಟವಶಾತ್ ಶಿಕ್ಷಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಓರ್ವ ಕುರ್ಚಿಯಡಿ ಬಾಂಬ್ ಇಟ್ಟಿದ್ದರೆ ಇನ್ನೊಬ್ಬ ರಿಮೋಟ್ನಿಂದ ಬಟನ್ ಒತ್ತಿದ್ದ, ಘಟನೆ ನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಆಗಮಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಓದಿ: ಬೇಗ ಬೇಗ ಕಿಟಕಿ ಹತ್ರ ಬನ್ನಿ, ಇಲ್ಲಾಂದ್ರೆ ರೈಲಿನಲ್ಲಿ ಸೀಟ್ ಸಿಗಲ್ಲ, ವಿಡಿಯೋ ವೈರಲ್
ಯೂಟ್ಯೂಬ್ನಿಂದ ಸ್ಫೋಟಕಗಳನ್ನು ತಯಾರಿಸುವುದನ್ನು ವಿದ್ಯಾರ್ಥಿಗಳು ಕಲಿತಿದ್ದಾರೆ. ಮಕ್ಕಳನ್ನು ಶಾಲೆಯಿಂದ ಹೊರ ಹಾಕುವ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಪಾಲಕರು ಕ್ಷಮೆ ಯಾಚಿಸಿದ್ದು, ವಿದ್ಯಾರ್ಥಿಗಳು ಮುಂದೆ ಇಂತಹ ಕೆಲಸ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ನರೇಶ್ ಮೆಹ್ತಾ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 am, Sun, 17 November 24