ಕಳೆದ 30 ವರ್ಷಗಳಿಂದ ಹೊಸ ಸೀರೆಯನ್ನೇ ಖರೀದಿಸಿಲ್ವಂತೆ ಸುಧಾಮೂರ್ತಿ!

|

Updated on: Jul 05, 2024 | 12:37 PM

ರಾಜ್ಯಸಭಾ ಸಂಸದೆ ಸುಧಾಮೂರ್ತಿಯವರು ಕಳೆದ 30 ವರ್ಷಗಳಿಂದ ಹೊಸ ಸೀರೆಗಳನ್ನೇ ಖರೀದಿ ಮಾಡಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ. ಈ ಕುರಿತು ಖುದ್ದಾಗಿ ಅವರೇ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಕಾಶಿಗೆ ಹೋದಾಗ ಈ ನಿರ್ಧಾರ ತೆಗೆದುಕೊಂಡಿದ್ದರಂತೆ

ಕಳೆದ 30 ವರ್ಷಗಳಿಂದ ಹೊಸ ಸೀರೆಯನ್ನೇ ಖರೀದಿಸಿಲ್ವಂತೆ ಸುಧಾಮೂರ್ತಿ!
ಸುಧಾಮೂರ್ತಿ
Follow us on

ರಾಜ್ಯಸಭಾ ಸಂಸದೆ, ಇನ್​ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿ(Sudha Murthy) ಕಳೆದ 30 ವರ್ಷಗಳಿಂದ ಹೊಸ ಸೀರೆಯನ್ನೇ ಖರೀದಿಸಿಲ್ಲವಂತೆ. ಅದಕ್ಕೆ ಕಾರಣವನ್ನೂ ಕೂಡ ಅವರು ಬಹಿರಂಗಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿ ಇದ್ದರೂ ಅವರು ಯಾಕೆ ಮೂವತ್ತು ವರ್ಷಗಳಿಂದ ಸೀರೆ ಖರೀದಿಸಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಅವರು ಒಮ್ಮೆ ಕಾಶಿ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿನ ವಾಡಿಕೆಯಂತೆ ತಮಗಿಷ್ಟವಾಗಿದ್ದನ್ನು ಬಿಡಲೇಬೇಕಿತ್ತು, ಅವರಿಗೆ ಶಾಪಿಂಗ್​ ಎಂದರೆ ಪಂಚಪ್ರಾಣ ಹೀಗಾಗಿ ಅವರು ಇನ್ನುಮುಂದೆ ಶಾಪಿಂಗ್ ಮಾಡುವುದನ್ನು ಬಿಡುತ್ತೇನೆ ಎಂದಿದ್ದರಂತೆ. ಅಂದಿನಿಂದ ಅವರು ಬಟ್ಟೆಗಳನ್ನು ಖರೀದಿಸಿಲ್ಲ.

ಸುಧಾಮೂರ್ತಿ ಅವರು ಅಪಾರ ಸಂಪತ್ತಿನ ಹೊರತಾಗಿಯೂ ತಮ್ಮ ಸರಳತೆಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಸುಧಾಮೂರ್ತಿ ತನ್ನ ತಾಯಿ ಹಾಗೂ ಅಜ್ಜಿಯ ಬಗ್ಗೆಯೂ ಮಾತನಾಡಿದ್ದಾರೆ.

ಮತ್ತಷ್ಟು ಓದಿ: Viral Video: ಪುರುಷರು ಮತ್ತು ಮಹಿಳೆಯರ ನಡುವೆ ಇರುವ ವ್ಯತ್ಯಾಸ ಇಷ್ಟೇ, ಲಿಂಗ ಸಮಾನತೆ ಬಗ್ಗೆ ಸುಧಾಮೂರ್ತಿ ಹೇಳಿದ್ದೇನು?

ಆರು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡಾಗ ಅವರ ಕಪಾಟಿನಲ್ಲಿದ್ದ ವಸ್ತುಗಳನ್ನು ಹೊರಹಾಕಲು ಕೇವಲ ಅರ್ಧ ಗಂಟೆ ಮಾತ್ರ ಸಾಕಾಗಿತ್ತು. ಏಕೆಂದರೆ ಅವರ ಬಳಿ ಕೇವಲ 8-10 ಸೀರೆಗಳು ಇದ್ದವು. ಅವರನ್ನು ನೋಡಿಯೇ ನಾನು ಕೂಡ ಸರಳ ಜೀವನವನ್ನು ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಿಂದ ನನ್ನ ಸಹೋದರಿಯರು, ಆಪ್ತ ಸ್ನೇಹಿತರು, ಎನ್​ಜಿಒಗಳು ಉಡುಗೊರೆಯಾಗಿ ನೀಡಿರುವ ಸೀರೆಯನ್ನೇ ಧರಿಸುತ್ತಿದ್ದೇನೆ ಎಂದರು.

ಸಹೋದರಿಯರು ವರ್ಷಕ್ಕೆ ಒಂದೆರಡು ಸೀರೆಗಳನ್ನು ನೀಡುತ್ತಿದ್ದರು, ಈಗ ಕೊಟ್ಟಿರುವ ಸೀರೆಯೇ ಬಹಳಷ್ಟಿದೆ ಇನ್ನು ಕೊಡಬೇಡಿ ಎಂದು ಹೇಳಿದ್ದೇನೆ. ನಾನು ಐವತ್ತು ವರ್ಷಗಳಿಂದ ಸೋರೆ ಉಡುತ್ತಿದ್ದೇನೆ, ಸೀರೆ ಉಟ್ಟ ಬಳಿಕ ಅವುಗಳನ್ನು ತೊಳೆದು, ಇಸ್ತ್ರಿ ಮಾಡಿ ಇಟ್ಟುಕೊಳ್ಳುತ್ತೇನೆ, ಸೀರೆಯು ನೆಲಕ್ಕೆ ತಾಕುವಂತೆ ಎಂದೂ ಉಡುವುದಿಲ್ಲ, ಹಾಗಾಗಿ ಹೆಚ್ಚು ಗಲೀಜಾಗುವುದಿಲ್ಲ, ಹೆಚ್ಚು ವರ್ಷಗಳ ಕಾಲ ಬಾಳಿಕೆಗೆ ಬರುತ್ತದೆ.

ಸುಧಾಮೂರ್ತಿಯವರು ಈ ವಾರ ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಗ್ಗೆ ಬೆಳಕು ಚೆಲ್ಲಿದ್ದರು, ಹಾಗೆಯೇ 57 ದೇಶೀಯ ಪ್ರವಾಸಿ ತಾಣಗಳನ್ನು ವಿಶ್ವಪಾರಂಪರಿಕ ತಾಣಗಳೆಂದು ಗುರುತಿಸುವಂತೆ ಒತ್ತಾಯಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 12:37 pm, Fri, 5 July 24