African Swine Fever: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ, ಕರ್ನಾಟಕಕ್ಕೂ ಆತಂಕ
ಆಫ್ರಿಕನ್ ಹಂದಿಜ್ವರ, ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಹಂದಿ ಕಾಯಿಲೆಯಾಗಿದ್ದು, ಇದು ಕಾಡು ಹಂದಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ತ್ರಿಶೂರ್ ಜಿಲ್ಲೆಯ ಮಡಕ್ಕತಾರಾ ಪಂಚಾಯತ್‌ನ ಖಾಸಗಿ ಜಮೀನಿನಲ್ಲಿ 310 ಹಂದಿಗಳನ್ನು ಕೊಲ್ಲಲು ತ್ರಿಶೂರ್ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಡೆಂಗ್ಯೂ, ಚಿಕನ್ ಗುನ್ಯಾ, ಹಕ್ಕಿ ಜ್ವರ ಹೆಚ್ಚಾಗಿ ಜನರನ್ನು ಬಾಧಿಸುತ್ತಿದೆ. ಕೊರೊನಾ ನಂತರ ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುವುದು ಕೊಂಚ ಕಡಿಮೆಯಾಗಿತ್ತು. ಇದೀಗ ಮತ್ತೆ ಹಂದಿ ರೋಗದ ಹಾವಳಿ ಹೆಚ್ಚಾಗಿದೆ. ಇದು ಹಂದಿಗಳಿಂದ ಜನರಿಗೆ ಹರಡುವುದಿಲ್ಲ. ಆದರೆ ಹಂದಿಗಳಿಗೆ ಬೇಗ ಹರಡುತ್ತದೆ. ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ(African Swine Fever) ಪತ್ತೆಯಾಗಿದ್ದು, ಕರ್ನಾಟಕಕ್ಕೂ ಆತಂಕ ಶುರುವಾಗಿದೆ. ಕೇರಳದ ತ್ರಿಶೂರ್ನಲ್ಲಿ ಹಂದಿಜ್ವರ ಪತ್ತೆಯಾಗಿದೆ. ಒಂದು ಹಂದಿಯಿಂದ ಮತ್ತೊಂದು ಹಂದಿಗೆ ಬೇಗ ಸೋಂಕು ಹರಡುವ ಕಾರಣ ತ್ರಿಶೂರ್ ಜಿಲ್ಲೆಯ ಮಡಕ್ಕತಾರಾ ಪಂಚಾಯತ್‌ನ ಖಾಸಗಿ ಜಮೀನಿನಲ್ಲಿ 310 ಹಂದಿಗಳನ್ನು ಕೊಲ್ಲಲು ತ್ರಿಶೂರ್ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹಾನಿಗೊಳಗಾದ ಜಮೀನಿನ ಒಂದು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ರೋಗ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು 10 ಕಿಮೀ ವ್ಯಾಪ್ತಿಯ ಪ್ರದೇಶವನ್ನು ರೋಗ ಕಣ್ಗಾವಲು ಪ್ರದೇಶವೆಂದು ಘೋಷಿಸಲಾಗಿದೆ.
ತ್ರಿಶೂರ್ ಅಥವಾ ಇತರ ಪ್ರದೇಶಗಳಿಂದ ಹಂದಿಗಳು ಮತ್ತು ಹಂದಿಗಳನ್ನು ಅಕ್ರಮವಾಗಿ ಸಾಗಿಸುವುದನ್ನು ತಡೆಯಲು ಇಲಾಖೆಯು ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದೆ.
ಇತರೆ ಪ್ರದೇಶಗಳಲ್ಲಿ ಹಂದಿ ಜ್ವರ ಪತ್ತೆಯಾದರೆ ಸಂಬಂಧಪಟ್ಟ ಪುರಸಭೆ, ಸರ್ಕಾರಿ ಕಾರ್ಯದರ್ಶಿಗಳು, ಗ್ರಾಮಾಧಿಕಾರಿಗಳು ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿಗಳು ಸಂಬಂಧಪಟ್ಟ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ನಂತರ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಮತ್ತಷ್ಟು ಓದಿ: Health Tips: ಹಂದಿ ಜ್ವರ ತಡೆಗಟ್ಟುವಲ್ಲಿ ಈ ಆಯುರ್ವೇದ ಮನೆಮದ್ದುಗಳು ಸಹಕಾರಿ
ಕೀನ್ಯಾದಲ್ಲಿ ಮೊದಲ ಪ್ರಕರಣ ಆಫ್ರಿಕನ್ ಹಂದಿ ಜ್ವರ ಸಾಂಕ್ರಾಮಿಕ ರೋಗವಾಗಿದ್ದು, ಸಾಕು ಹಂದಿಗಳಿಗೆ ಮಾರಣಾಂತಿಕವೆನಿಸಿದೆ. ಇದು ಮೊಟ್ಟಮೊದಲ ಬಾರಿ 1921ರಲ್ಲಿ ಕೀನ್ಯಾದಲ್ಲಿ ಪತ್ತೆಯಾಗಿತ್ತು. ಆದರೆ ಈ ರೋಗ ಹಂದಿಗಳಿಂದ ಮಾನವರಿಗೆ ಹರಡುವುದಿಲ್ಲ.
ಇದನ್ನು ಮೊದಲು ಕೀನ್ಯಾ, ಪೂರ್ವ ಆಫ್ರಿಕಾ, 1921 ರಲ್ಲಿ ವಿವರಿಸಲಾಯಿತು. ಶೀಘ್ರದಲ್ಲೇ ದಕ್ಷಿಣ ಆಫ್ರಿಕಾ ಮತ್ತು ಅಂಗೋಲಾದಲ್ಲಿ ಹಂದಿಗಳನ್ನು ಕೊಲ್ಲುವ ರೋಗ ಎಂದು ಹೇಳಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ