Viral Video: ಪುರುಷರು ಮತ್ತು ಮಹಿಳೆಯರ ನಡುವೆ ಇರುವ ವ್ಯತ್ಯಾಸ ಇಷ್ಟೇ, ಲಿಂಗ ಸಮಾನತೆ ಬಗ್ಗೆ ಸುಧಾಮೂರ್ತಿ ಹೇಳಿದ್ದೇನು?
ಎಷ್ಟೆಲ್ಲಾ ಆಸ್ತಿ ಅಂತಸ್ತು ಹೊಂದಿದ್ದರೂ ಕೂಡಾ ಯಾವುದೇ ಆಡಂಬರವಿಲ್ಲದೆ ಸರಳ ಜೀವನವನ್ನು ನಡೆಸುತ್ತಿರುವ ಸುಧಾಮೂರ್ತಿಯವರು ತಮ್ಮ ಸಮಾಜ ಸೇವೆ, ಪ್ರೇರಕ ಮಾತುಗಳಿಂದಲೇ ಎಲ್ಲರ ಗಮನ ಸೆಳೆದವರು. ಇದೀಗ ಅವರು ಲಿಂಗ ಸಮಾನತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಈ ಕುರಿತ ಇಂಟೆರೆಸ್ಟಿಂಗ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ, ರಾಜ್ಯ ಸಭಾ ಸಂಸದೆ, ಲೇಖಕಿ, ಚಿಂತಕಿ, ಸಮಾಜ ಸೇವಕಿ ಸುಧಾಮೂರ್ತಿ ಅವರು ತಮ್ಮ ಸರಳ ಬದುಕಿನ ಕಾರಣದಿಂದಲೇ ಕೋಟ್ಯಾಂತರ ಜನರ ಹೃದಯ ಗೆದ್ದವರು. ಸರಳತೆಗೆ ಒಂದೊಳ್ಳೆ ನಿದರ್ಶನವಾಗಿರುವ ಸುಧಾಮೂರ್ತಿ ತಮ್ಮ ಪ್ರೇರಕ ಮಾತುಗಳಿಂದಲೇ ಅದೆಷ್ಟೋ ಯುವ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇದೀಗ ಅವರು ಲಿಂಗ ಸಮಾನತೆ ಎಂದರೇನು? ಎಂದು ಲಿಂಗ ಸಮಾನತೆಯ ಬಗ್ಗೆ ತಮ್ಮ ದೃಷ್ಟಿಕೋನ ಏನೆಂಬುದನ್ನು ವಿವರಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸುಧಾಮೂರ್ತಿಯವರು ತಮ್ಮ ದೃಷ್ಟಿಕೋನದಲ್ಲಿ ಲಿಂಗ ಸಮಾನತೆ ಎಂದರೇನು ಎಂಬುದನ್ನು ವಿವರಿಸಿದ್ದು, ಈ ಕುರಿತ ಪೋಸ್ಟ್ ಒಂದನ್ನು ಅವರು (@SmtSudhaMurty) ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ:
In my view, men and women are equal but in different ways. They complement each other like two wheels of a bicycle; you can’t move forward without the other. pic.twitter.com/MMShEOtg9Q
— Smt. Sudha Murty (@SmtSudhaMurty) June 27, 2024
ಅವರು ಹೇಳುತ್ತಾರೆ ನನ್ನ ದೃಷ್ಟಿಕೋನದಲ್ಲಿ ಎರಡು ಲಿಂಗಗಳು ವಿಭಿನ್ನವಾಗಿದ್ದರೂ, ಪುರುಷರು ಮತ್ತು ಮಹಿಳೆಯರು ಸಮಾನರು. ಈ ಇಬ್ಬರೂ ಒಂದು ಸೈಕಲ್‌ನ ಎರಡು ಚಕ್ರಗಳಿದ್ದಂತೆ. ಒಂದು ಚಕ್ರವಿಲ್ಲದೆ ಸೈಕಲ್ ಹೇಗೆ ಮುಂದೆ ಸಾಗಲು ಸಾಧ್ಯವಿಲ್ಲವೋ ಹಾಗೆಯೇ ಪುರುಷರಿಲ್ಲದೆ ಮಹಿಳೆಯರು ಮತ್ತು ಮಹಿಳೆಯರಿಲ್ಲದೆ ಪುರುಷರು ಮುಂದೆ ಸಾಗಲು ಸಾಧ್ಯವಿಲ್ಲ. ಹೀಗೆ ಹೆಣ್ಣು ಮತ್ತು ಗಂಡು ಸಮಾನರು ಆದರೆ ಅದು ವಿಭಿನ್ನ ರೀತಿಯಲ್ಲಿ. ಮಹಿಳೆಯರು ಅತ್ಯುತ್ತಮ ವ್ಯವಸ್ಥಾಪಕರು, ಸಹಾನುಭೂತಿ ಹೊಂದಿದವರು ಮತ್ತು ತಮ್ಮವರಿಗೆ ಹೆಚ್ಚು ಪ್ರೀತಿಯನ್ನು ನೀಡುವವರಾಗಿರುತ್ತಾರೆ. ಆದರೆ ಪುರುಷರ ಈ ಭಾವನಾತ್ಮಕ ಅಂಶವು ಮಹಿಳೆಯರಂತೆ ಅಲ್ಲ. ಅವರು ಉತ್ತಮ IQ (ಬುದ್ಧಿವಂತಿಕೆ ಅಂಶ) ಹೊಂದಿರಬಹುದು. ಆದರೆ ಇವರು ಉತ್ತಮ EQ (ಭಾವನಾತ್ಮಕ ಅಂಶ) ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೆದ್ದಾರಿ ನಾಮ ಫಲಕಗಳು ಏಕೆ ಕೇವಲ ಹಸಿರು ಬಣ್ಣದಲ್ಲಿರುತ್ತದೆ? ಇದರ ಹಿಂದೆ ವೈಜ್ಞಾನಿಕ ಕಾರಣ ಇದೆ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಿಜವಾದ ಮಾತು ಮಹಿಳೆ ಮತ್ತು ಪುರುಷ ಈ ಎರಡು ಅಂಶ ಇಲ್ಲದೆ ಪ್ರಕೃತಿ ಪೂರ್ಣವಾಗುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ