Viral : ಹೆದ್ದಾರಿ ನಾಮ ಫಲಕಗಳು ಏಕೆ ಕೇವಲ ಹಸಿರು ಬಣ್ಣದಲ್ಲಿರುತ್ತದೆ? ಇದರ ಹಿಂದೆ ವೈಜ್ಞಾನಿಕ ಕಾರಣ ಇದೆ
The Green Boards On Roads: ನೀವು ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಅಲ್ಲಲ್ಲಿ ಸ್ಥಳಗಳ ಹೆಸರು ಮತ್ತು ಅದರ ದೂರ ಎಷ್ಟಿದೆ ಎಂಬುದನ್ನು ಬರೆದಿರುವ ಹಸಿರು ಬಣ್ಣದ ನಾಮ ಫಲಕಗಳಿರುವುದನ್ನು ಗಮನಿಸಿರುತ್ತೀರಿ ಅಲ್ವಾ. ಆದ್ರೆ ಈ ನಾಮ ಫಲಕಗಳು ಏಕೆ ಕೇವಲ ಹಸಿರು ಬಣ್ಣದಲ್ಲಿರುತ್ತವೆ ಎಂಬುದನ್ನು ನೀವು ಎಂದಾದ್ರೂ ಯೋಚಿಸಿದ್ದೀರಾ. ಇದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ, ಬನ್ನಿ ಅದೇನೆಂಬುದನ್ನು ನೋಡೋಣ.
ಭಾರತವಾಗಿರಲಿ ಅಥವಾ ಯಾವುದೇ ದೇಶವಾಗಿರಲಿ ಎಲ್ಲಾ ದೇಶದ ರಸ್ತೆ ಬದಿಗಳಲ್ಲೂ ಸ್ಥಳಗಳ ಹೆಸರು ಮತ್ತು ಅದರ ದೂರ ಎಷ್ಟಿದೆ ಎಂಬುದನ್ನು ಬರೆದಿರುವ ಸೈನ್ ಬೋರ್ಡ್‌ಗಳು ಕೇವಲ ಹಸಿರು ಬಣ್ಣದಲ್ಲಿರುತ್ತವೆ. ಇವುಗಳನ್ನು ಗಮನಿಸಿದಾಗ ಅಲ್ಲಾ ಹೆದ್ದಾರಿಗಳಲ್ಲಿ ಏಕೆ ಕೇವಲ ಹಸಿರು ಬಣ್ಣದ ನಾಮಫಲಕಗಳನ್ನು ಮಾತ್ರ ಅಳವಡಿಸಿರುತ್ತಾರೆ, ಬೇರೆ ಬಣ್ಣದ ನಾಮ ಫಲಕಗಳನ್ನೂ ಅಳವಡಿಸಬಹುದಲ್ವಾ ಅನ್ನೋ ಯೋಚನೆ ನಿಮಗೂ ಬಂದಿದ್ಯಾ? ಹೆದ್ದಾರಿ ನಾಮ ಫಲಕಗಳು ಕೇವಲ ಹಸಿರು ಬಣ್ಣದಲ್ಲಿರುವ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.
ಹೆದ್ದಾರಿ ನಾಮ ಫಲಕಗಳು ಕೇವಲ ಹಸಿರು ಬಣ್ಣದಲ್ಲಿರಲು ಕಾರಣವೇನು?
ಅರಿಝೋನ ಸಾರಿಗೆ ಇಲಾಖೆ ಪ್ರಕಾರ ಹಸಿರು ಶಾಂತ ರೂಪದ ಬಣ್ಣವಾಗಿದ್ದು, ಇದು ಅಪಾಯದ ವಿರುದ್ಧವಾಗಿದೆ. ಇದು ವಾಹನ ಚಲಾಯಿಸುವವರ ಗಮನವನ್ನು ಯಾವುದೇ ಕಾರಣಕ್ಕೂ ವಿಚಲಿತಗೊಳಿಸುವುದಿಲ್ಲ. ಈ ಸೂಚನಾ ಫಲಕಗಳು ಒಂದು ವೇಳೆ ಕೆಂಪು, ಹಳದಿಯಂತಹ ಗಾಢ ಬಣ್ಣದಲ್ಲಿದ್ದರೆ ನಾಮ ಫಲಕಗಳನ್ನು ನೋಡುತ್ತಾ, ನಾವು ಬೇರೆಡೆ ದೃಷ್ಟಿ ಹಾಯಿಸುವ ಸಾಧ್ಯತೆಯಿರುತ್ತದೆ. ಹೀಗೆ ವಾಹನ ಚಲಾಯಿಸುವಾಗ ನಮ್ಮ ಗಮನ ವಿಚಲಿತವಾದರೆ ಅದು ತುಂಬಾನೇ ಅಪಾಯಕಾರಿಯಾಗಿದೆ. ಇದೇ ಕಾರಣಕ್ಕಾಗಿ ಹಸಿರು ಬಣ್ಣದ ನಾಮ ಫಲಕಗಳನ್ನು ಅಳವಡಿಸಲಾಗುತ್ತದೆ.
ಇದನ್ನೂ ಓದಿ: ಸಾವು ಹೀಗೂ ಬರುತ್ತೇ.. ವರ್ಕೌಟ್ ಮಾಡುವ ವೇಳೆ ಆಯತಪ್ಪಿ 3ನೇ ಮಹಡಿಯಿಂದ ಕೆಳಗೆ ಬಿದ್ದು ಯುವತಿ ಸಾವು
ಇದರ ಹಿಂದಿರುವ ಮತ್ತೊಂದು ಕಾರಣವೆಂದರೆ ಹಸಿರು ಬಣ್ಣದ ಬೋರ್ಡ್ ಮೇಲೆ ಬಿಳಿ ಬಣ್ಣದಲ್ಲಿ ಬರೆದಿರುವ ಅಕ್ಷರಗಳನ್ನು, ಸೂಚನೆಗಳನ್ನು, ನಿಯಂತ್ರಕ ಮತ್ತು ಎಚ್ಚರಿಯ ಚಿಹ್ನೆಗಳನ್ನು ಸುಲಭವಾಗಿ ಯಾರು ಬೇಕಾದರೂ ಓದಬಹುದು. ಇದಲ್ಲದೆ ಈ ಬಣ್ಣವು ರಾತ್ರಿ ಹೊತ್ತಿನಲ್ಲೂ ಸುಲಭವಾಗಿ ಗೋಚರಿಸುತ್ತದೆ. . ಅದಕ್ಕಾಗಿಯೇ ಈ ಬಣ್ಣವನ್ನು ಬಳಸಲಾಗುತ್ತದೆ. ಹೀಗೆ ಹಸಿರು ನಾಮ ಫಲಕಗಳು ಪ್ರಾಯೋಗಿಕ ಉದ್ದೇಶವನ್ನು ಮಾತ್ರವಲ್ಲದೆ ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಪರಿಸರ ಪ್ರಜ್ಞೆಯ ಸಂಕೇತವಾಗಿ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ