AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಾವು ಹೀಗೂ ಬರುತ್ತೇ.. ವರ್ಕೌಟ್‌ ಮಾಡುವ ವೇಳೆ ಆಯತಪ್ಪಿ 3ನೇ ಮಹಡಿಯಿಂದ ಕೆಳಗೆ ಬಿದ್ದು ಯುವತಿ ಸಾವು

ಸಾವು ಯಾವ ರೂಪದಲ್ಲಿ ಕಾದು ಕುಳಿತಿರುತ್ತೆ ಎಂಬುದನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಇಲ್ಲೊಬ್ಬ ಯುವತಿಗೆ ತಾನು ಪ್ರತಿನಿತ್ಯ ಮಾಡುವ ವ್ಯಾಯಾಮವೇ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ. ಹೌದು ಆಕೆ ಜಿಮ್‌ನಲ್ಲಿ ಟ್ರೆಡ್‌ಮಿಲ್‌ ಮೇಲೆ ವರ್ಕೌಟ್‌ ಮಾಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬೃಹತ್‌ ಗಾಜಿನ ಕಿಟಕಿಯಿಂದ ಕೆಳ ಬಿದ್ದು, ಸಾವನ್ನಪ್ಪಿದ್ದಾಳೆ. ಈ ಆಘಾತಕಾರಿ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

Viral Video: ಸಾವು ಹೀಗೂ ಬರುತ್ತೇ.. ವರ್ಕೌಟ್‌ ಮಾಡುವ ವೇಳೆ ಆಯತಪ್ಪಿ 3ನೇ ಮಹಡಿಯಿಂದ ಕೆಳಗೆ ಬಿದ್ದು ಯುವತಿ ಸಾವು
ವೈರಲ್​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Jun 27, 2024 | 5:08 PM

Share

ಜಿಮ್‌ಗೆ ಹೋಗುವುದು, ಬೆವರು ಹರಿಸಿ ವರ್ಕೌಟ್‌ ಮಾಡುವುದೆಂದರೆ ಯುವಕರಿಗೆ ಅದೇನೋ ಕ್ರೇಜ್. ಇತ್ತೀಚಿಗಂತೂ ಫಿಟ್‌ ಆಂಡ್‌ ಫೈನ್‌ ಆಗಿರಲು ಜಿಮ್‌ಗೆ ಹೋಗಿ ಕಸರತ್ತು ಮಾಡುವ ಯುವ ಜನರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಕೆಲವರಿಗೆ ಜಿಮ್‌ ರೂಮ್‌ನ ಗಾಜಿನ ಗೋಡೆಯ ಸಮೀಪದಲ್ಲೇ ಇರುವ ಟ್ರೆಡ್‌ಮಿಲ್‌ ಮೇಲೆ ಓಡುತ್ತಾ ಹೊರಗಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ವ್ಯಾಯಾಮ ಮಾಡುವುದೆಂದರೆ ಬಲು ಇಷ್ಟ. ಆದರೆ ಇಲ್ಲೊಬ್ಬ ಯುವತಿಯ ಪ್ರಾಣಕ್ಕೆ ಈ ಟ್ರೆಡ್‌ಮಿಲ್‌ ಕಂಟಕವಾಗಿ ಪರಿಣಮಿಸಿದೆ. ಹೌದು ಆಕೆ ಟ್ರೆಡ್‌ಮಿಲ್‌ ಮೇಲೆ ವ್ಯಾಯಾಮ ಮಾಡುತ್ತಿರುವ ವೇಳೆ ಆಯತಪ್ಪಿ ಬೃಹತ್‌ ಗಾಜಿನ ಕಿಟಕಿಯಿಂದ ಕೆಳ ಬಿದ್ದು, ಸಾವನ್ನಪ್ಪಿದ್ದಾಳೆ. ಈ ಆಘಾತಕಾರಿ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಈ ಘಟನೆ ಇಂಡೋನೋಷ್ಯಾದಲ್ಲಿ ನಡೆದಿದ್ದು, ಇಲ್ಲಿನ ನಗರದ ಮೂರನೇ ಮಹಡಿಯಲ್ಲಿರುವ ಜಿಮ್‌ ಒಂದರಲ್ಲಿ ವ್ಯಾಯಾಮ ಮಾಡುತ್ತಿರುವ ವೇಳೆ 22 ವರ್ಷದ ಯುವತಿಯೊಬ್ಬಳು ಟ್ರೆಡ್‌ಮಿಲ್‌ನಿಂದ ಎಡವಿ, ಗಾಜಿನ ಕಿಟಕಿಯಿಂದ ಕೆಳ ಬಿದ್ದಿದ್ದಾಳೆ. ಪೊಲೀಸರ ಪ್ರಕಾರ, ಟ್ರೆಡ್‌ಮಿಲ್‌ ಮತ್ತು ಬೃಹತ್‌ ಗಾಜಿನ ಕಿಟಕಿಯ ನಡುವೆ ಕೇವಲ 2 ಎರಡು ಅಡಿ ಅಂತರ ಮಾತ್ರ ಇತ್ತು. ಆಕೆ ಕಿಟಕಿಯ ಅಂಚನ್ನು ಹಿಡಿಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗದೆ ಕೆಳಗೆ ಬಿದ್ದಿದ್ದಾಳೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

@CollinRugg ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಮೂರನೇ ಮಹಡಿಯಲ್ಲಿರುವ ಜಿಮ್‌ ಒಂದರಲ್ಲಿ ಟ್ರೆಡ್‌ಮಿಲ್‌ ಮೇಲೆ ಓಡುತ್ತಾ ವ್ಯಾಯಾಮ ಮಾಡುತ್ತಿರುವಾಗ ಎಡವಿದ ಯುವತಿಯೊಬ್ಬಳು ತಕ್ಷಣ ಗಾಜಿನ ಕಿಟಕಿಯಿಂದ ಬೀಳುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಗರ್ಲ್‌ಫ್ರೆಂಡ್‌ಗಾಗಿ ಕಂತೆ ಕಂತೆ ನೋಟಿನ ಕಾರ್ಪೆಟ್‌ ಹಾಸಿದ ವ್ಯಕ್ತಿ, ಎಲ್ಲವೂ ದುಡ್ಡಿನ ಮಹಿಮೆ

ಜೂನ್‌ 24 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 8.1 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಟ್ರೆಡ್‌ಮಿಲ್‌ಗಳನ್ನು ಕಿಟಕಿಯ ವಿರುದ್ಧ ದಿಕ್ಕಿನಲ್ಲಿ ಇಡಬೇಕಿತ್ತಲ್ಲವೇ? ಇದೆಲ್ಲಾ ಜಿಮ್‌ ಅವರ ನಿರ್ಲಕ್ಷ್ಯ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ