Viral Video: ಗರ್ಲ್‌ಫ್ರೆಂಡ್‌ಗಾಗಿ ಕಂತೆ ಕಂತೆ ನೋಟಿನ ಕಾರ್ಪೆಟ್ ಹಾಸಿದ ವ್ಯಕ್ತಿ, ಎಲ್ಲವೂ ದುಡ್ಡಿನ ಮಹಿಮೆ
ತುಂಬಾ ಸಮಯಗಳ ಬಳಿಕ ಭೇಟಿಯಾಗುತ್ತಿದ್ದೇವೆ ಎಂದಾಗ ಹೆಚ್ಚಿನವರು ತಮ್ಮ ಗೆಳತಿ ಹೂಗುಚ್ಛ ನೀಡುವ ಮೂಲಕವೋ ಅಥವಾ ಅವರ ನೆಚ್ಚಿನ ಚಾಕೊಲೇಟ್‌ಗಳನ್ನು ನೀಡುವ ಮೂಲಕ ಮುದ್ದಾಗಿ ಸ್ವಾಗತಿಸುತ್ತಾರೆ. ಆದರೆ ಇಲ್ಲೊಬ್ಬ ಉದ್ಯಮಿ ಹೆಲಿಕಾಪ್ಟರ್‌ನಿಂದ ಧರೆಗಿಳಿದ ತಮ್ಮ ಗೆಳತಿಗೆ ಕಂತೆ ಕಂತೆ ನೋಟಿನ ಕಾರ್ಪೆಟ್ ಅನ್ನು ಹಾಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹುಡುಗರು ತಮ್ಮ ಗರ್ಲ್‌ಫ್ರೆಂಡ್ ಅನ್ನು ಖುಷಿಪಡಿಸಲು ಏನೇನೋ ಸರ್ಕಸ್ ಮಾಡುತ್ತಿರುತ್ತಾರೆ. ಕೆಲವೊಬ್ಬರು ದುಬಾರಿ ಉಡುಗೊರೆಗಳನ್ನು ನೀಡಿದರೆ, ಇನ್ನೂ ಕೆಲವರು ಹೊಗಳಿಕೆಯ ಮಾತುಗಳನ್ನಾಡುವ ಮೂಲಕ ತಮ್ಮ ಗೆಳತಿಯನ್ನು ಖುಷಿಪಡಿಸುತ್ತಾರೆ. ಆದರೆ ಇಲ್ಲೊಬ್ಬ ಭೂಪ ತನ್ನ ಗೆಳತಿಯನ್ನು ಖುಷಿ ಪಡಿಸಲು ಕಂತೆ ಕಂತೆ ನೋಟುಗಳ ಕಾರ್ಪೆಟ್ ಅನ್ನು ಹಾಸಿದ್ದಾನೆ. ಹೌದು ಸಾಮಾನ್ಯವಾಗಿ ಪ್ರೀತಿ ಪಾತ್ರರನ್ನು ಸ್ವಾಗತಿಸಲು ಹೂವಿನ ಕಾರ್ಪೆಟ್ ಹಾಸಿರುವುದನ್ನು ನೋಡಿರುತ್ತೀರಿ, ಆದರೆ ಈ ಉದ್ಯಮಿ ತನ್ನ ಗೆಳತಿ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಆಕೆಯ ಸ್ವಾಗತಕ್ಕೆ ನೋಟುಗಳ ಕಾರ್ಪೆಟ್ ಅನ್ನೇ ಹಾಸಿದ್ದಾನೆ.
ರಷ್ಯಾದ ಉದ್ಯಮಿ ಸೆರ್ಗೆಯ್ ಕೊಸೆಂಕೊ ಎಂಬವನು ತನ್ನ ಗರ್ಲ್‌ಫ್ರೆಂಡ್ ಅನ್ನು ಸ್ವಾಗತಿಸಲು ಕಂತೆ ಕಂತೆ ನೋಟುಗಳ ಕಾರ್ಪೆಟ್ ಅನ್ನು ಹಾಸಿದ್ದು, ಈ ಹಳೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
View this post on Instagram
@mr.thank.you ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಸೆರ್ಗೆಯ್ ಕೊಸೆಂಕೊ ತನ್ನ ಗೆಳತಿಗಾಗಿ ನೋಟಿನ ಕಾರ್ಪೆಟ್ ಹಾಸಿರುವುದನ್ನು ಕಾಣಬಹುದು. ಗೆಳತಿ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಂತೆ ಕೊಸೆಂಕೊ, ಕಂತೆ ಕಂತೆ ನೋಟುಗಳ ಮೇಲೆ ಆಕೆಯ ಕೈ ಹಿಡಿದು ನಡೆಸಿಕೊಂಡು ಬಂದಿದ್ದಾನೆ.
ಇದನ್ನೂ ಓದಿ: ಜೋರು ಮಳೆಯಲ್ಲಿ ರೀಲ್ಸ್ ಮಾಡುವಾಗಲೇ ಬಡಿದ ಸಿಡಿಲು! ಮುಂದೇನಾಯ್ತು ನೋಡಿ?
ಕೆಲ ಸಮಯಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 39.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಎಲ್ಲವೂ ದುಡ್ಡಿನ ಮಹಿಮೆ ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ