Viral Video: ಜೋರು ಮಳೆಯಲ್ಲಿ ರೀಲ್ಸ್‌ ಮಾಡುವಾಗಲೇ ಬಡಿದ ಸಿಡಿಲು! ಮುಂದೇನಾಯ್ತು ನೋಡಿ?

ಈ ಕೆಲವರಿಗಂತೂ ಯಾವಾಗಲೂ ರೀಲ್ಸ್‌ನದ್ದೇ ಚಿಂತೆ. ಮಳೆಯಿರಲಿ, ಉರಿ ಬಿಸಿಲಿರಲಿ ಇದ್ಯಾವುದನ್ನು ಲೆಕ್ಕಿಸದೇ ಸದಾ ಕಾಲ ರೀಲ್ಸ್‌ ಮಾಡುವುದರಲ್ಲಿಯೇ ನಿರತರಾಗಿರುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಕೂಡಾ ಭಾರೀ ಮಳೆಗೆ ಮನೆ ಟೆರೆಸ್‌ ಮೇಲೆ ರೀಲ್ಸ್‌ ಮಾಡಲು ಹೋಗಿದ್ದು, ಅದೇ ಸಂದರ್ಭದಲ್ಲಿ ಆಕೆಯ ಹತ್ತಿರದಲ್ಲಿಯೇ ಸಿಡಿಲು ಬಡಿದಿದೆ. ಈ ಆಘಾತಕಾರಿ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

Viral Video: ಜೋರು ಮಳೆಯಲ್ಲಿ ರೀಲ್ಸ್‌ ಮಾಡುವಾಗಲೇ ಬಡಿದ ಸಿಡಿಲು! ಮುಂದೇನಾಯ್ತು ನೋಡಿ?
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 27, 2024 | 12:16 PM

ಇದೀಗ ಮಳೆಗಾಲ ಆರಂಭವಾಗಿಬಿಟ್ಟಿದೆ. ಈ ಋತುಮಾನದಲ್ಲಿ ಭಾರೀ ಮಳೆಯೊಂದಿಗೆ ಗುಡುಗು ಮಿಂಚು ಬರುವುದು ಸಾಮಾನ್ಯ. ಇದೇ ಕಾರಣಕ್ಕಾಗಿ ಹೆಚ್ಚಿನವರು ಜೋರು ಮಳೆ ಬರುವ ಸಂದರ್ಭದಲ್ಲಿ ಮನೆಯಿಂದ ಹೊರ ಬರಲು ಭಯಪಡುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಮಾತ್ರ ಮಳೆಯಲ್ಲಿ ಒಂದು ರೀಲ್ಸ್‌ ಮಾಡೋಣಾ, ಚೆನ್ನಾಗಿರುತ್ತೆ ಎಂದು ಜೋರು ಮಳೆ ಬರುವಾಗ ಮನೆಯ ಟೆರೆಸ್‌ ಮೇಲೆ ರೀಲ್ಸ್‌ ವಿಡಿಯೋ ಮಾಡಲು ಹೋಗಿದ್ದು, ಅದೇ ಸಂದರ್ಭದಲ್ಲಿ ಅಲ್ಲೇ ಪಕ್ಕದ ಕಟ್ಟಡಕ್ಕೆ ಸಿಡಿಲು ಬಡಿದಿದೆ. ಯುವತಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಆಘಾತಕಾರಿ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಘಟನೆ ಬಿಹಾರದ ಸೀತಾಮರ್ಹಿ ಎಂಬಲ್ಲಿ ನಡೆದಿದ್ದು, ಭಾರೀ ಮಳೆಯ ನಡುವೆಯೇ ಯುವತಿಯೊಬ್ಬಳು ರೀಲ್ಸ್‌ ಮಾಡಲು ಹೋಗಿ ಪಜೀತಿಗೆ ಸಿಲುಕಿದ್ದಾಳೆ. ಜೋರು ಮಳೆ ಬರುವಾಗ ಗುಡುಗು ಮಿಂಚು ಬರುತ್ತೆ ಎಂಬುದನ್ನೂ ಮರೆತು ಯುವತಿ ಮನೆಯ ಮೇಲೆ ರೀಲ್ಸ್‌ ಮಾಡಲು ಹೋಗಿದ್ದು, ಅದೇ ಸಂದರ್ಭದಲ್ಲಿ ಅಲ್ಲೇ ಪಕ್ಕದ ಕಟ್ಟಡಕ್ಕೆ ಸಿಡಿಲು ಬಡಿದಿದೆ. ಯುವತಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

@sdcworldoffl ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, “ಬಿಹಾರದಲ ಸೀತಾಮರ್ಹಿಯಲ್ಲಿ ಬಾಲಕಿಯೊಬ್ಬಳು ರೀಲ್ಸ್‌ ವಿಡಿಯೋ ಮಾಡುತ್ತಿರುವಾಗ ಸಿಡಿಲು ಬಡಿದಿದ್ದು, ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಯುವತಿಯೊಬ್ಬಳು ಭಾರೀ ಮಳೆಗೆ ರೀಲ್ಸ್‌ ವಿಡಿಯೋ ಮಾಡುತ್ತಿದ್ದಾಗ ಅಲ್ಲೇ ಪಕ್ಕದ ಕಟ್ಟಡಕ್ಕೆ ಸಿಡಲು ಬಡಿದಿದ್ದು, ಸಿಡಿಲಿನ ಬಡಿತಕ್ಕೆ ಹೆದರಿ ಯುವತಿ ರೀಲ್ಸ್‌ ಮಾಡುವುದನ್ನು ಮರೆತು ಕಾಲ್ಕಿತ್ತು ಓಡಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಇಲ್ಲಿಗೆ ಕುಡ್ಕೊಂಡು ಬಂದಿದ್ಯೇನೋ.. ಕುಡುಕನನ್ನು ಕೋಪದಿಂದ ಎತ್ತೆಸೆದ ಕುಕ್ಕೆ ಸುಬ್ರಮಣ್ಯ ದೇಗುಲದ ಆನೆ

ಸೋಷಿಯಲ್‌ ಮೀಡಿಯಾದಲ್ಲಿ ಇದೀಗ ವೈರಲ್‌ ಆಗುತ್ತಿರುವ ಈ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸಿದ್ದು, ಜೋರು ಮಳೆಯಲ್ಲೂ ಈಕೆಯದ್ದು ಇದೆಂಥಾ ಹುಚ್ಚಾಟ ಎಂದು ರೀಲ್ಸ್‌ ವಿಡಿಯೋ ಮಾಡಿದ ಯುವತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್