AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಒಂದು ಪ್ಲೇಟ್​​​​ ಇಡ್ಲಿ ಬೆಲೆ ಬರೋಬ್ಬರಿ 500ರೂ.; ಯಾಕಿಷ್ಟು ದುಬಾರಿ ಗೊತ್ತಾ?

ಚೆನ್ನೈನ ಹೋಟೆಲ್ ಒಂದರಲ್ಲಿ ನೀವು ಇಡ್ಲಿ ಸವಿಯಬೇಕಾದರೆ ಒಂದು ಪ್ಲೇಟ್​​​​ ಇಡ್ಲಿಗೆ ಬರೋಬ್ಬರಿ 500ರೂಪಾಯಿಯನ್ನು ಪಾವತಿಸಬೇಕು. 30, 40 ರೂ. ಸಿಗುವ ಇಡ್ಲಿಗೆ ಇಷ್ಟೊಂದು ಯಾಕೆ ಪಾವತಿಸಬೇಕು ಎಂದು ನೀವು ಯೋಚಿಸುತ್ತಿರಬಹುದು. ಹಾಗಿದ್ರೆ ಈ ವಿಡಿಯೋ ನೋಡಿ.

Viral Video: ಒಂದು ಪ್ಲೇಟ್​​​​ ಇಡ್ಲಿ ಬೆಲೆ ಬರೋಬ್ಬರಿ 500ರೂ.; ಯಾಕಿಷ್ಟು ದುಬಾರಿ ಗೊತ್ತಾ?
Image Credit source: Thamodharan B
ಅಕ್ಷತಾ ವರ್ಕಾಡಿ
|

Updated on:Jun 27, 2024 | 5:26 PM

Share

ಬೆಳಗ್ಗಿನ ತಿಂಡಿ ಎಂದಾಕ್ಷಣ ಹೆಚ್ಚಿನವರಿಗೆ ನೆನಪಾಗುವುದು ಇಡ್ಲಿ ಸಾಂಬಾರ್​​​. ಈ ಇಡ್ಲಿ ಕಡಿಮೆ ಬೆಲೆಯ ಜೊತೆಗೆ ರುಚಿಕರ ಉಪಹಾರವು ಹೌದು. ಮನೆಯಲ್ಲಿ ತಿನ್ನುವ ಹೊರತಾಗಿ ಹೋಟೆಲ್​ಗಳಲ್ಲಿ 30ರಿಂದ ಹಿಡಿದು ಹೆಚ್ಚೆಂದರೆ 50ರೂಪಾಯಿಯ ಒಳಗಡೆ ಬಿಸಿಬಿಸಿಯಾದ ಇಡ್ಲಿಯನ್ನು ಸವಿಯಬಹುದು. ಆದರೆ ಚೆನ್ನೈನ ಹೋಟೆಲ್ ಒಂದರಲ್ಲಿ ಒಂದು ಪ್ಲೇಟ್​​​​ ಇಡ್ಲಿಗೆ ಬರೋಬ್ಬರಿ 500ರೂಪಾಯಿಯನ್ನು ಪಾವತಿಸಬೇಕು. ಅಷ್ಟಕ್ಕೂ ಒಂದು ಪ್ಲೇಟ್​​​​ ಇಡ್ಲಿ ಯಾಕಿಷ್ಟು ದುಬಾರಿ? ಏನಿದರ ವಿಶೇಷತೆ? ಇಲ್ಲಿ ತಿಳಿದುಕೊಳ್ಳಿ.

ಈ ಇಡ್ಲಿಯನ್ನು ಚೆನ್ನೈನ ಅಡ್ಯಾರ್ ಆನಂದ ಭವನ ಹೋಟೆಲ್‌ನಲ್ಲಿ ಲಭ್ಯವಿದೆ. ಈ ಇಡ್ಲಿ ದುಬಾರಿಯಾಗಲು ಕಾರಣ ಅದರ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು. ಬಾದಾಮಿ, ಬೆರಿಹಣ್ಣುಗಳು, ಆಲಿವ್ ಎಣ್ಣೆ ಮತ್ತು ಇತರ ಅನೇಕ ಪದಾರ್ಥಗಳನ್ನು ಬಳಸಲಾಗುತ್ತದೆ. ಲವಂಗ, ದಾಲ್ಚಿನ್ನಿ, ಮಶ್ರೂಮ್, ಬ್ರೆಜಿಲ್ ನಟ್, ಒಮೆಗಾ 3 – ಅಗಸೆಬೀಜ, ಶುಂಠಿ ಪುಡಿ, ಅಶ್ವಗಂಧ ಸಾರ, 24 ಗಂಟೆಗಳ ಕಾಲ ನೆನೆಸಿದ ಬಾದಾಮಿ, ವಾಲ್್ನಟ್ಸ್, ಪಿಸ್ತಾ, ಗೋಡಂಬಿ, ನೀಲಿ ಹಣ್ಣುಗಳು, ಆಲಿವ್ ಎಣ್ಣೆ, ಕೊತ್ತಂಬರಿ, ಆವಕಾಡೊ, ಕೇಸರಿ ಇತ್ಯಾದಿ ಪೋಷಕಾಂಶಗಳಿಂದ ಕೂಡಿರುವ ಪದಾರ್ಥಗಳಿಂದ ತಯಾರಿಸಲಾಗುತ್ತದೆ.

ಮಧುಮೇಹಿಗಳು ಕೂಡ ಈ ಇಡ್ಲಿಯನ್ನು ಹಿಂಜರಿಕೆಯಿಲ್ಲದೆ ಸವಿಯಬಹುದು. ಇಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಇದರಲ್ಲಿ ಬಳಸುವ ಆಲಿವ್ ಎಣ್ಣೆಯು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉಪಯುಕ್ತವಾಗಿದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಬ್ಲೂಬೆರ್ರಿಗಳನ್ನು ಸಹ ಇದರಲ್ಲಿ ಬಳಸಲಾಗುತ್ತದೆ.

ಇದನ್ನೂ ಓದಿ: ಗರ್ಲ್‌ಫ್ರೆಂಡ್‌ಗಾಗಿ ಕಂತೆ ಕಂತೆ ನೋಟಿನ ಕಾರ್ಪೆಟ್‌ ಹಾಸಿದ ವ್ಯಕ್ತಿ, ಎಲ್ಲವೂ ದುಡ್ಡಿನ ಮಹಿಮೆ

@foodtastingmission ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಶೇಷ ಇಡ್ಲಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್​​ 21ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Thu, 27 June 24

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ