ದೆಹಲಿ ಡಿಸೆಂಬರ್ 08: ಇನ್ಪೋಸಿಸ್ (Infosys) ಸಂಸ್ಥಾಪಕಿ,ಲೇಖಕಿ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿ (Sudha Murty) ಅವರು ಇಂದು(ಶುಕ್ರವಾರ) ನವದೆಹಲಿಯ ಹೊಸ ಸಂಸತ್ ಕಟ್ಟಡಕ್ಕೆ(New parliament building) ಭೇಟಿ ನೀಡಿದ್ದಾರೆ. ಇದು ತುಂಬಾ ಸುಂದರವಾಗಿದೆ. ವರ್ಣಿಸಲು ಪದಗಳಿಲ್ಲ. ನಾನು ಇದನ್ನು ಬಹಳ ದಿನಗಳಿಂದ ನೋಡಬೇಕೆಂದು ಬಯಸಿದ್ದೆ. ಇದು ಇಂದು ಕನಸು ನನಸಾಯಿತು. ಹೊಸದಾಗಿ ನಿರ್ಮಿಸಲಾದ ಸಂಸತ್ ಕಟ್ಟಡ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ಇದು ಸುಂದರವಾಗಿದೆ… ಇದು ಕಲೆ, ಸಂಸ್ಕೃತಿ, ಭಾರತೀಯ ಇತಿಹಾಸ – ಎಲ್ಲವೂ ಸುಂದರವಾಗಿದೆ” ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾ ಮೂರ್ತಿ ಅವರು ಹೊಸ ಕಟ್ಟಡದ ಬಗ್ಗೆ ತಮ್ಮ ವಿಸ್ಮಯ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
#WATCH | Delhi | As Sudha Murty visits the Parliament, she says, “It is so beautiful…No words to describe. I wanted to see this for a long time. It was a dream come true today. It is beautiful…It’s art, culture, Indian history – everything is beautiful…” pic.twitter.com/P2kKp2Wj2o
— ANI (@ANI) December 8, 2023
ಕಟ್ಟಡವನ್ನು ನಿರ್ಮಿಸಿದ ಅವಧಿಯು ನಿಜವಾಗಿಯೂ ಗಮನಾರ್ಹವಾದುದು. ಇಷ್ಟು ಕಡಿಮೆ ಅವಧಿಯಲ್ಲಿ, ಅದನ್ನು ಸುಂದರವಾಗಿ ಜೋಡಿಸಲಾಗಿದೆ ಮತ್ತು ಕ್ಯುರೇಟ್ ಮಾಡಲಾಗಿದೆ .ಈ ಎಲ್ಲಾ ವಿಷಯಗಳನ್ನು ನೋಡಲು ನಾನು ಒಂದು ಅಥವಾ ಎರಡು ದಿನಗಳನ್ನು ಕಳೆಯಲು ಬಯಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Sudha Murty: ಇನ್ಫೋಸಿಸ್ ಸ್ಥಾಪಕಿ, ಲೇಖಕಿ ಸುಧಾಮೂರ್ತಿ ಜನ್ಮದಿನ; ನಿಮಗೆ ತಿಳಿಯದ ಕೆಲ ಸಂಗತಿಗಳು ಇಲ್ಲಿವೆ..
ಮಾಧ್ಯಮ ಪ್ರತಿನಿಧಿಯೊಬ್ಬರು “ಅಧಿಕೃತವಾಗಿ” ಒಳಗೆ ಇರಲು ಇಷ್ಟಪಡುತ್ತೀರಾ ಎಂದು ಕೇಳಿದಾಗ, 73ರ ಹರೆಯದ ಸುಧಾಮೂರ್ತಿ ಕೈಮುಗಿದು ತಲೆ ಅಲ್ಲಾಡಿಸುತ್ತಾ ಈಗ ಹೇಗಿದ್ದೇನೋ ನಾನು ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Fri, 8 December 23