Sudha Murty: ಇನ್ಫೋಸಿಸ್​ ಸ್ಥಾಪಕಿ, ಲೇಖಕಿ ಸುಧಾಮೂರ್ತಿ ಜನ್ಮದಿನ; ನಿಮಗೆ ತಿಳಿಯದ ಕೆಲ ಸಂಗತಿಗಳು ಇಲ್ಲಿವೆ..

ಸುಧಾಮೂರ್ತಿ ಈ ಹೆಸರು ಜಗತ್ಪ್ರಸಿದ್ಧಿ. ಅತಿದೊಡ್ಡ ಸ್ಟಾಫ್ಟವೇರ್​ ಕಂಪನಿಯಾದ ಇನ್ಪೋಸಿಸ್​ ಸಂಸ್ಥಾಪಕಿ. ಇವರು ಅತಿದೊಡ್ಡ ಶ್ರಿಮಂತರಾದರು ತಮ್ಮ ಸರಳ, ಸಜ್ಜನಿಕೆ, ನಡೆ, ನುಡಿಯಿಂದ ಹೆಸರುವಾಸಿಯಾದವರು. ಎಲ್ಲರೊಳಗೊಂದಾಗು ಎಂಬ ಮಂಕುತಿಮ್ಮನ ಕಗ್ಗಕ್ಕೆ ಕೈಗನ್ನಡಿಯಾಗಿದ್ದಾರೆ. ಶಿಕ್ಷಣತಜ್ಞೆ, ಲೇಖಕಿ ಮತ್ತು ಸಮಾಜ ಸೇವಕಿ ಸುಧಾಮೂರ್ತಿ ಅವರು ಅನೇಕರಿಗೆ ಸ್ಪೂರ್ತಿಯ ಚಿಲುಮೆ. ಸುಧಾಮೂರ್ತಿಯವರ ಕುರಿತು ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ...

Sudha Murty: ಇನ್ಫೋಸಿಸ್​ ಸ್ಥಾಪಕಿ, ಲೇಖಕಿ ಸುಧಾಮೂರ್ತಿ ಜನ್ಮದಿನ; ನಿಮಗೆ ತಿಳಿಯದ ಕೆಲ ಸಂಗತಿಗಳು ಇಲ್ಲಿವೆ..
ಸುಧಾಮೂರ್ತಿ
Follow us
ವಿವೇಕ ಬಿರಾದಾರ
|

Updated on:Aug 19, 2023 | 11:45 AM

ಸುಧಾಮೂರ್ತಿ(Sudha Murthy) ಈ ಹೆಸರು ಜಗತ್ಪ್ರಸಿದ್ಧಿ. ಅತಿದೊಡ್ಡ ಸ್ಟಾಫ್ಟವೇರ್​ ಕಂಪನಿಯಾದ ಇನ್ಪೋಸಿಸ್ (Infosys)​ ಸಂಸ್ಥಾಪಕಿ. ಇವರು ಅತಿದೊಡ್ಡ ಶ್ರಿಮಂತರಾದರು ತಮ್ಮ ಸರಳ, ಸಜ್ಜನಿಕೆ, ನಡೆ, ನುಡಿಯಿಂದ ಹೆಸರುವಾಸಿಯಾದವರು. ಎಲ್ಲರೊಳಗೊಂದಾಗು ಎಂಬ ಮಂಕುತಿಮ್ಮನ ಕಗ್ಗಕ್ಕೆ ಕೈಗನ್ನಡಿಯಾಗಿದ್ದಾರೆ. ಶಿಕ್ಷಣತಜ್ಞೆ, ಲೇಖಕಿ ಮತ್ತು ಸಮಾಜ ಸೇವಕಿ ಸುಧಾಮೂರ್ತಿ ಅವರು ಅನೇಕರಿಗೆ ಸ್ಪೂರ್ತಿಯ ಚಿಲುಮೆ. ಇವರು ತಮ್ಮ ಇನ್ಪೋಸಿಸ್​ ಕಂಪನಿಯಿಂದ ಮಾತ್ರ ಹೆಸರುವಾಸಿಯಾಗದೆ ಸೇವೆ, ಜ್ಞಾನ, ಹೃದಯ ಶ್ರೀಮಂತಿಕೆ ಮತ್ತು ಬರವಣಿಗೆಯಿಂದ ಜಗದ​ ವಿಖ್ಯಾತರಾಗಿದ್ದಾರೆ. ಇವರಿಗೆ ಇಂದು ಜನ್ಮದಿನದ ಸಂಭ್ರಮ. 73ನೇ ವಸಂತಕ್ಕೆ ಕಾಲಿಟ್ಟ ಸುಧಾಮೂರ್ತಿಯವರ ಕುರಿತು ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ…

ಸುಧಾ ಮೂರ್ತಿಯವರು ಆಗಸ್ಟ್ 19, 1950 ರಂದು ಹಾವೇರಿಯ ಜಿಲ್ಲೆಯ ಶಿಗ್ಗಾಂವಿಯಲ್ಲಿ ಜನಿಸಿದರು. ಡಾ. ಆರ್‌ಹೆಚ್ ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಯ ಮಗಳು. ಹುಬ್ಬಳ್ಳಿಯಲ್ಲಿರುವ ಕೆಎಲ್​ಇ ಸಂಸ್ಥೆಯ BVB ಇಂಜಿನಿಯರಿಂಗ್ ಕಾಲೇಜ್ ಪದವಿ ಪಡೆದರು. ನಂತರ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ನಂತರ ಸುಧಾಮೂರ್ತಿ ಅವರು ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ (ಟೆಲ್ಕೊ) ಕಂಪನಿಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದರು. ಭಾರತದ ಅತಿದೊಡ್ಡ ವಾಹನ ತಯಾರಿಕಾ ಘಟಕದಲ್ಲಿ ನೇಮಕಗೊಂಡ ಮೊದಲ ಮಹಿಳಾ ಇಂಜಿನಿಯರ್ ಇವರಾಗಿದ್ದರು. ಇವರನ್ನು ಮೊದಲು ಪುಣೆಯಲ್ಲಿ ಡೆವಲಪ್‌ಮೆಂಟ್ ಇಂಜಿನಿಯರ್ ಆಗಿ ನೇಮಿಸಲಾಯಿತು. ನಂತರ ಮುಂಬೈ ಮತ್ತು ಜಮ್‌ಶೆಡ್‌ಪುರಗೆ ವರ್ಗಾಯಿಸಲಾಯಿತು.

1970 ಫೆಬ್ರವರಿ 10 ರಂದು ನಾರಾಯಣ ಮೂರ್ತಿ ಅವರನ್ನು ವಿವಾಹವಾದರು. ನಂತರ ಇವರು ಇನ್ಪೋಸಿಸ್ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿ ಜಗತ್ತಿನಾದ್ಯಂತ ಹೆಸರುವಾಸಿ ಆಯ್ತು. ಇವರ ಕಂಪನಿ ಬೆಳೆಯುತ್ತಾ ಹೋದಂತೆ, ಹೆಚ್ಚು ಆದಾಯ ಬರಲು ಆರಂಭಿಸಿತು. ಹೀಗೆ ಬಂದ ಆದಾಯದಲ್ಲಿ ಒಂದಿಷ್ಟು ಪ್ರತಿಷತದಷ್ಟು ಸಮಾಜ ಸೇವೆಗೆ ಮುಡಿಪಾಗಿಡಲು ಆರಂಭಿಸಿದರು.

1996 ರಲ್ಲಿ, ಸುಧಾಮೂರ್ತಿ ಅವರು ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಟ್ರಸ್ಟ್ ಇದುವರೆಗೆ 2,300 ಮನೆಗಳನ್ನು ನಿರ್ಮಿಸಿದೆ. ಟ್ರಸ್ಟ್​ ಮೂಲಕ ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಇದುವರೆಗೆ 70,000 ಗ್ರಂಥಾಲಯಗಳನ್ನು ನಿರ್ಮಾಣಮಾಡಿದ್ದಾರೆ. ಇವರ ಸಂಸ್ಥೆ ಇದುವರೆಗೆ 16,000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದೆ.

ಇವರಿಗೆ 2006 ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಸುಧಾಮೂರ್ತಿಯವರು ಇದುವರೆಗೆ ಕನ್ನಡ ಮತ್ತು ಇಂಗ್ಲೀಷ್​ ಭಾಷೆಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಒಟ್ಟು ನಿವ್ವಳ ಆದಾಯ 775 ಕೋಟಿ ರೂ. ಇದರಲ್ಲಿ 300 ಕೋಟಿ ರೂ. ಪುಸ್ತಕ ಮತ್ತು ಸಣ್ಣಕಥೆಗಳ ಮೂಲಕವೇ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:41 am, Sat, 19 August 23