ಇಂಡಿಗೋ ಸಿಬ್ಬಂದಿ ಸಂಗೀತ ಉಪಕರಣಗಳನ್ನು ಎತ್ತಿ ಬಿಸಾಡುತ್ತಿರುವ ವಿಡಿಯೊ ವೈರಲ್; ಹೀಗೆ ಮಾಡಬೇಡಿ ಎಂದ ಸೂಫಿ ಗಾಯಕ
ವಿಡಿಯೊದಲ್ಲಿ, ಇಂಡಿಗೋ ಸಿಬ್ಬಂದಿ ಸಂಗೀತ ಉಪಕರಣಗಳ ಎರಡು ಪೆಟ್ಟಿಗೆಗಳನ್ನು ತೆಗೆದುಕೊಂಡು ಕಾರ್ಗೋ ಒಳಗೆ ಎಸೆಯುವುದನ್ನು ಕಾಣಬಹುದು. ಎರಡನೆ ಬಾಕ್ಸ್ ಹಾಕಿದ ಬಳಿಕ ಬ್ಯಾಗ್ ಕಾರ್ಗೋದಿಂದ ಬೀಳದಂತೆ ಸಿಬ್ಬಂದಿ ನೋಡಿಕೊಂಡರು.
ಸೂಫಿ ಗಾಯಕ ಬಿಸ್ಮಿಲ್ (Sufi singer Bismil) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇಂಡಿಗೋ (IndiGo) ಸಿಬ್ಬಂದಿಯೊಬ್ಬರು ತಮ್ಮ ಸಂಗೀತ ಉಪಕರಣವನ್ನು ಕಾರ್ಗೋ ಒಳಗೆ ಎಸೆಯುವ ವಿಡಿಯೊವನ್ನು ಪೋಸ್ಟ್ ಮಾಡಿದ್ದು ಏರ್‌ಲೈನ್ ಸಿಬ್ಬಂದಿ ಸಂಗೀತ ಉಪಕರಣಗಳನ್ನು (musical instrument) ಹೇಗೆ ನೋಡಿಕೊಳ್ಳುತ್ತಾರೆ ಎಂಬುದು ನೋವಿನ ಸಂಗತಿ ಎಂದು ಹೇಳಿದ್ದಾರೆ. ವಿಡಿಯೊದಲ್ಲಿ, ಇಂಡಿಗೋ ಸಿಬ್ಬಂದಿ ಸಂಗೀತ ಉಪಕರಣಗಳ ಎರಡು ಪೆಟ್ಟಿಗೆಗಳನ್ನು ತೆಗೆದುಕೊಂಡು ಕಾರ್ಗೋ ಒಳಗೆ ಎಸೆಯುವುದನ್ನು ಕಾಣಬಹುದು. ಎರಡನೆ ಬಾಕ್ಸ್ ಹಾಕಿದ ಬಳಿಕ ಬ್ಯಾಗ್ ಕಾರ್ಗೋದಿಂದ ಬೀಳದಂತೆ ಸಿಬ್ಬಂದಿ ನೋಡಿಕೊಂಡರು. ಇಂಡಿಗೋ ನಮ್ಮ ಸಂಗೀತ ಉಪಕರಣಗಳನ್ನು ಹೇಗೆ ನೋಡಿಕೊಳ್ಳುತ್ತದೆ ಎಂಬುದನ್ನು ನೋಡಿ. ಯಾವುದೇ ಕಲಾವಿದರಿಗೆ ಸಂಗೀತ ಉಪಕರಣಗಳು ಅತ್ಯಂತ ಅಮೂಲ್ಯವಾದ ವಸ್ತುವಾಗಿದೆ. ಇಂಡಿಗೋ ಅವುಗಳನ್ನು ಹೇಗೆ ಕಸದಂತೆ ಎಸೆಯುತ್ತಿದೆ ಎಂಬುದು ನಿಜವಾಗಿಯೂ ದುಃಖಕರವಾಗಿದೆ ಎಂದು ಗಾಯಕ ಪೋಸ್ಟ್ ಮಾಡಿದ್ದಾರೆ.
ನಮ್ಮ ಹೆಚ್ಚುವರಿ ಸಾಮಾನುಗಳಿಗಾಗಿ 30ಸಾವಿರ ಹೆಚ್ಚುವರಿ ಪಾವತಿಸಿದ್ದೇವೆ. ದಯವಿಟ್ಟು ಸಂಗೀತ ಉಪಕರಣಗಳನ್ನು ಎಚ್ಚರಿಕೆಯಿಂದ ವ್ಯವಹರಿಸಿ ಎಂದು ನಾವು ಅವರಲ್ಲಿ ಹೇಳಿದ್ದೇವೆ. ನನ್ನ ಎಲ್ಲಾ ಸಹ ಕಲಾವಿದರು, ನಿಮ್ಮ ಬ್ಯಾಗ್‌ಗಳನ್ನು IngiGo ಗೆ ನೀಡುವಾಗ ದಯವಿಟ್ಟು ಜಾಗರೂಕರಾಗಿರಿ ಎಂದು ಗಾಯಕ ಹೇಳಿದ್ದಾರೆ.
View this post on Instagram
ಇಂಡಿಗೋ ಈ ವಿಷಯದ ಬಗ್ಗೆ ತನಿಖೆಯ ಭರವಸೆ ನೀಡುವ ಹೇಳಿಕೆಯನ್ನು ನೀಡಿದೆ ಎಂದು ವರದಿಯಾಗಿದೆ. ಸಂಗೀತ ಉಪಕರಣಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ. ಆದಾಗ್ಯೂ, ಈ ವೈರಲ್ ವಿಡಿಯೊ ವಿಮಾನಯಾನ ಸಂಸ್ಥೆಯು ತನ್ನ ಬ್ಯಾಗೇಜ್ ನಿರ್ವಹಣೆ ಸೇವೆಗಾಗಿ ಹೊಂದಿಸುವ ಉನ್ನತ ಗುಣಮಟ್ಟವನ್ನು ಪ್ರತಿನಿಧಿಸುವುದಿಲ್ಲ ಎಂದು ಅದು ಹೇಳಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದ ಹೌರಾ-ಜಲ್ಪೈಗುರಿ ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಚಾಲನೆ
ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಎಲ್ಲಾ ಲಗೇಜ್‌ಗಳನ್ನು ವಿಮಾನಯಾನ ಸಂಸ್ಥೆಗಳು ಹೇಗೆ ಪರಿಗಣಿಸುತ್ತವೆ ಎಂಬುದರ ಕುರಿತು ಚರ್ಚೆಯಾಗಿದೆ. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಗಾಯಕನ ಆತಂಕವು ಸಮರ್ಥನೀಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಸಿಬ್ಬಂದಿ ಹಗಲು ರಾತ್ರಿ ಅಂತಹ ಅನೇಕ ಬ್ಯಾಗ್‌ಗಳನ್ನು ಎತ್ತುತ್ತಿರುವುದರಿಂದ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಉಪಕರಣಗಳು ಅಥವಾ ಪ್ರಮುಖ ವಸ್ತುಗಳನ್ನು ನಾವು ಯಾವಾಗಲೂ ನಮ್ಮೊಂದಿಗೆ ಕ್ಯಾಬಿನ್‌ಗೆ ತೆಗೆದುಕೊಂಡು ಹೋಗಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Fri, 30 December 22