Breaking: ಗೋಲ್ಡನ್ ಟೆಂಪಲ್ ಬಳಿ ಪಂಜಾಬ್ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಮೇಲೆ ಗುಂಡಿನ ದಾಳಿ
ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಸ್ಥಳದಲ್ಲಿದ್ದ ಜನರು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಆತನನ್ನು ಬಂಧಿಸಿದ್ದಾರೆ. ಧಾರ್ಮಿಕ ಶಿಕ್ಷೆಯ ಭಾಗವಾಗಿ ಸೇವೆ ಸಲ್ಲಿಸುತ್ತಿದ್ದಾಗ ಬಾದಲ್ ಮೇಲೆ ದಾಳಿ ನಡೆಸಲಾಯಿತು. ಮಾಹಿತಿ ಪ್ರಕಾರ ದಾಳಿಯಿಂದ ಬಾದಲ್ ಸ್ವಲ್ಪದರಲ್ಲೇ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ. ಏತನ್ಮಧ್ಯೆ, ಭದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು SAD ಆರೋಪಿಸಿದೆ.
VIDEO | Punjab: A man opened fire at Shiromani Akali Dal leader Sukhbir Singh Badal at the entrance of Golden Temple, Amritsar. The person was overpowered by people present on the spot. More details are awaited.#PunjabNews #SukhbirSinghBadal
(Full video available on PTI… pic.twitter.com/LC55kCV864
— Press Trust of India (@PTI_News) December 4, 2024
ಇತ್ತೀಚೆಗಷ್ಟೇ, ಅಕಾಲಿ ದಳದ ನಾಯಕನಿಗೆ 2015 ರಲ್ಲಿ ಗುರು ಗ್ರಂಥ ಸಾಹಿಬ್‌ನ ತ್ಯಾಗದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಅಕಾಲ್ ತಖ್ತ್ ಶಿಕ್ಷೆಯನ್ನು ಘೋಷಿಸಿತು. ಅವರು ಪ್ರತಿದಿನ ಒಂದು ಗಂಟೆ ದೇವಸ್ಥಾನದಲ್ಲಿ ದ್ವಾರಪಾಲಕರಾಗಿ ಕೆಲಸ ಮಾಡಬೇಕಾಗುತ್ತದೆ. ಶೌಚಾಲಯ ತೊಳೆಯುವುದು, ಪಾತ್ರೆ ತೊಳೆಯುವುದು ಸೇರಿ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ.
ಮತ್ತಷ್ಟು ಓದಿ: ಪಂಜಾಬ್‌ನ ಮಾಜಿ ಡಿಸಿಎಂ ಸುಖ್ಬೀರ್ ಬಾದಲ್ಗೆ ಶೌಚಾಲಯ ಹಾಗೂ ಪಾತ್ರೆ ತೊಳೆಯುವ ಶಿಕ್ಷೆ
ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಅಕಾಲಿ ಸರ್ಕಾರದ ಅವಧಿಯಲ್ಲಿ ಡೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ ಕ್ಷಮಾದಾನ ನೀಡುವಲ್ಲಿ ತಮ್ಮ ಪಾತ್ರವಿತ್ತು ಎಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸುಖ್ಬೀರ್ ಬಾದಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಸಿಂಗ್ ಸಾಹಿಬಾನ್‌ಗಳ ಸಭೆಯು ಅಕಾಲ್ ತಖ್ತ್‌ನಲ್ಲಿ ನಡೆಯಿತು. ಎರಡು ತಿಂಗಳ ಹಿಂದೆ ಅಕಾಲ್ ತಖ್ತ್ ಅವರು ಸುಖಬೀರ್ ಸಿಂಗ್ ಬಾದಲ್ ಅವರನ್ನು ತಂಖೈಯಾ (ಧಾರ್ಮಿಕ ಅಪರಾಧಿ) ಎಂದು ಘೋಷಿಸಿದ್ದರು.
ಸುಖ್ಬೀರ್ ಬಾದಲ್ ಹಾಗೂ 2015ರ ಅಕಾಲಿ ಸರ್ಕಾರದ ಇತರೆ ಕ್ಯಾಬಿನೆಟ್ ಸದಸ್ಯರಿಗೆ ಗೋಲ್ಡನ್ ಟೆಂಪಲ್ನಲ್ಲಿ ಶೌಚಾಲಯ ಹಾಗೂ ಪಾತ್ರೆ ತೊಳೆಯುವ ಶಿಕ್ಷೆ ವಿಧಿಸಲಾಗಿದೆ. ಅಕಾಲ್ ತಖ್ತ್ ಜಥೇದಾರ್ ಗಿಯಾನಿ ರಘುಬೀರ್ ಸಿಂಗ್ ಅವರು ಶಿರೋಮಣಿ ಅಕಾಲಿದಳದ ಕಾರ್ಯಕಾರಿ ಸಮಿತಿಗೆ ಮೂರು ದಿನಗಳಲ್ಲಿ ಸುಖ್ಬೀರ್ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಅಕಲ್ ತಖ್ತ್ ಸಾಹಿಬ್‌ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಶಿರೋಮಣಿ ಅಕಾಲಿದಳದ ಕಾರ್ಯಕಾರಿ ಸಮಿತಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಿ ಆರು ತಿಂಗಳೊಳಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಅಕಾಲ್ ತಖ್ತ್ ಸೂಚಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Wed, 4 December 24