AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​ನ ಮಾಜಿ ಡಿಸಿಎಂ ಸುಖ್​ಬೀರ್​ ಬಾದಲ್​ಗೆ ಶೌಚಾಲಯ ಹಾಗೂ ಪಾತ್ರೆ ತೊಳೆಯುವ ಶಿಕ್ಷೆ

ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಅಕಾಲಿ ಸರ್ಕಾರದ ಅವಧಿಯಲ್ಲಿ ಡೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ ಕ್ಷಮಾದಾನ ನೀಡುವಲ್ಲಿ ತಮ್ಮ ಪಾತ್ರವಿತ್ತು ಎಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸುಖ್​ಬೀರ್ ಬಾದಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಸಿಂಗ್ ಸಾಹಿಬಾನ್‌ಗಳ ಸಭೆಯು ಅಕಾಲ್ ತಖ್ತ್‌ನಲ್ಲಿ ನಡೆಯಿತು. ಎರಡು ತಿಂಗಳ ಹಿಂದೆ ಅಕಾಲ್ ತಖ್ತ್ ಅವರು ಸುಖಬೀರ್ ಸಿಂಗ್ ಬಾದಲ್ ಅವರನ್ನು ತಂಖೈಯಾ (ಧಾರ್ಮಿಕ  ಅಪರಾಧಿ) ಎಂದು ಘೋಷಿಸಿದ್ದರು.

ಪಂಜಾಬ್​ನ ಮಾಜಿ ಡಿಸಿಎಂ ಸುಖ್​ಬೀರ್​ ಬಾದಲ್​ಗೆ ಶೌಚಾಲಯ ಹಾಗೂ ಪಾತ್ರೆ ತೊಳೆಯುವ ಶಿಕ್ಷೆ
ಸುಖ್​ಬೀರ್Image Credit source: Republicworld.com
ನಯನಾ ರಾಜೀವ್
|

Updated on: Dec 03, 2024 | 12:39 PM

Share

ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಅಕಾಲಿ ಸರ್ಕಾರದ ಅವಧಿಯಲ್ಲಿ ಡೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ ಕ್ಷಮಾದಾನ ನೀಡುವಲ್ಲಿ ತಮ್ಮ ಪಾತ್ರವಿತ್ತು ಎಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸುಖ್​ಬೀರ್ ಬಾದಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಸಿಂಗ್ ಸಾಹಿಬಾನ್‌ಗಳ ಸಭೆಯು ಅಕಾಲ್ ತಖ್ತ್‌ನಲ್ಲಿ ನಡೆಯಿತು. ಎರಡು ತಿಂಗಳ ಹಿಂದೆ ಅಕಾಲ್ ತಖ್ತ್ ಅವರು ಸುಖಬೀರ್ ಸಿಂಗ್ ಬಾದಲ್ ಅವರನ್ನು ತಂಖೈಯಾ (ಧಾರ್ಮಿಕ  ಅಪರಾಧಿ) ಎಂದು ಘೋಷಿಸಿದ್ದರು.

ಸುಖ್​ಬೀರ್ ಬಾದಲ್ ಹಾಗೂ 2015ರ ಅಕಾಲಿ ಸರ್ಕಾರದ ಇತರೆ ಕ್ಯಾಬಿನೆಟ್ ಸದಸ್ಯರಿಗೆ ಗೋಲ್ಡನ್ ಟೆಂಪಲ್​ನಲ್ಲಿ ಶೌಚಾಲಯ ಹಾಗೂ ಪಾತ್ರೆ ತೊಳೆಯುವ ಶಿಕ್ಷೆ ವಿಧಿಸಲಾಗಿದೆ. ಅಕಾಲ್ ತಖ್ತ್ ಜಥೇದಾರ್ ಗಿಯಾನಿ ರಘುಬೀರ್ ಸಿಂಗ್ ಅವರು ಶಿರೋಮಣಿ ಅಕಾಲಿದಳದ ಕಾರ್ಯಕಾರಿ ಸಮಿತಿಗೆ ಮೂರು ದಿನಗಳಲ್ಲಿ ಸುಖ್ಬೀರ್ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಅಕಲ್ ತಖ್ತ್ ಸಾಹಿಬ್‌ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಶಿರೋಮಣಿ ಅಕಾಲಿದಳದ ಕಾರ್ಯಕಾರಿ ಸಮಿತಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಿ ಆರು ತಿಂಗಳೊಳಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಅಕಾಲ್ ತಖ್ತ್ ಸೂಚಿಸಿದ್ದಾರೆ.

ಮತ್ತಷ್ಟು ಓದಿ: Gurmeet Ram Rahim: ಗುರ್ಮೀತ್ ರಾಮ್​ ರಹೀಮ್​ ಪೆರೋಲ್ ಮೇಲೆ ಬಿಡುಗಡೆ

ನಮ್ಮ ಸರ್ಕಾರದ ಅವಧಿಯಲ್ಲಿ ಹತ್ಯಾಕಾಂಡದ ಘಟನೆಗಳು ನಡೆದಿವೆ. ನಾವು ತಪ್ಪಿತಸ್ಥರನ್ನು ಶಿಕ್ಷಿಸುವಲ್ಲಿ ವಿಫಲರಾಗಿದ್ದೇವೆ, ಗುಂಡಿನ ದಾಳಿ ನಡೆದಿದೆ. ಡಿಸೆಂಬರ್ 3, 2024 ರಿಂದ ಪ್ರತಿದಿನ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಗೋಲ್ಡನ್ ಟೆಂಪಲ್‌ನಲ್ಲಿರುವ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ. ಇದಾದ ನಂತರ ಸ್ನಾನ ಮಾಡಿ ಲಂಗರ್ ಹಾಲ್‌ಗೆ ಹೋಗಿ 1 ಗಂಟೆ ಪಾತ್ರೆ ತೊಳೆಯುತ್ತಾರೆ. ಇದಾದ ನಂತರ 1 ಗಂಟೆ ಶಾಬಾದ್ ಕೀರ್ತನೆ ನಡೆಯಲಿದೆ.

ದರ್ಬಾರ್‌ನಲ್ಲಿ 2 ದಿನ ಸೇವೆ ಸಲ್ಲಿಸಿದ ನಂತರ ಮುಂದಿನ 2 ದಿನಗಳ ಕಾಲ ಕೇಸ್‌ಗಢ ಸಾಹಿಬ್, ದಮದಮಾ ಸಾಹಿಬ್, ಮುಕ್ತ್‌ಸರ್ ಸಾಹಿಬ್, ಫತೇಘರ್ ಸಾಹಿಬ್‌ನಲ್ಲಿ ಸೇವೆ ಸಲ್ಲಿಸುವ ಮೂಲಕ ಶಿಕ್ಷೆಯನ್ನು ಪೂರ್ಣಗೊಳಿಸುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?