ಅರವಿಂದ್ ಕೇಜ್ರಿವಾಲ್ ಜಾಮೀನು: ದೆಹಲಿ ಹೈಕೋರ್ಟ್‌ನ ಮಧ್ಯಂತರ ತಡೆಯಾಜ್ಞೆಯನ್ನು ‘ಅಸಾಮಾನ್ಯ’ ಎಂದ ಸುಪ್ರೀಂಕೋರ್ಟ್

|

Updated on: Jun 24, 2024 | 4:58 PM

ನಾವು ಈ ಹಂತದಲ್ಲಿ ಯಾವುದೇ ಆದೇಶವನ್ನು ನೀಡಿದರೆ, ನಾವು ಸಮಸ್ಯೆಯನ್ನು ಮುಂಚಿತವಾಗಿ ನಿರ್ಣಯಿಸಿದಂತಾಗುತ್ತದೆ. ಇದು ಬೇರೆ ಯಾವುದೋ ನ್ಯಾಯಾಲಯವಲ್ಲ ಆದರೆ ಹೈಕೋರ್ಟ್" ಎಂದು ಪೀಠವು ಸಿಂಘ್ವಿಗೆ ಹೇಳಿದೆ. ಬಳಿಕ ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿತು. ಜಾಮೀನು ಆದೇಶದ ಮೇಲಿನ ಮಧ್ಯಂತರ ತಡೆಯನ್ನು ತೆರವು ಮಾಡುವಂತೆ ಸಿಂಘ್ವಿ ಕೋರಿದ್ದರು.

ಅರವಿಂದ್ ಕೇಜ್ರಿವಾಲ್ ಜಾಮೀನು: ದೆಹಲಿ ಹೈಕೋರ್ಟ್‌ನ ಮಧ್ಯಂತರ ತಡೆಯಾಜ್ಞೆಯನ್ನು ಅಸಾಮಾನ್ಯ ಎಂದ ಸುಪ್ರೀಂಕೋರ್ಟ್
ಅರವಿಂದ್ ಕೇಜ್ರಿವಾಲ್
Follow us on

ದೆಹಲಿ ಜೂನ್ 24: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ತಮ್ಮ ಜಾಮೀನಿನ ಮೇಲಿನ ಮಧ್ಯಂತರ ತಡೆಯಾಜ್ಞೆಯ (interim stay) ವಿರುದ್ಧ ಸಲ್ಲಿಸಿದ ಮನವಿಯನ್ನು ಆಲಿಸಿದ ಸುಪ್ರೀಂಕೋರ್ಟ್‌ನ (Supreme Court) ರಜಾಕಾಲದ ಪೀಠವು ಸೋಮವಾರ ತಡೆಯಾಜ್ಞೆಗಳನ್ನು ಸಾಮಾನ್ಯವಾಗಿ ಕಾಯ್ದಿರಿಸಲಾಗುವುದಿಲ್ಲ, ಅದೇ ದಿನ ತೀರ್ಪು ನೀಡಲಾಗುತ್ತದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠ, ಈ ವಿಷಯದ ಕುರಿತು ಹೈಕೋರ್ಟ್‌ನ ಆದೇಶದ ಘೋಷಣೆಗಾಗಿ ಕಾಯಲು ಬಯಸುವುದಾಗಿ ಹೇಳಿದೆ. “ಇದು ಅಸಾಮಾನ್ಯ,” ನ್ಯಾಯಮೂರ್ತಿ ಮಿಶ್ರಾ ಹೇಳಿದ್ದಾರೆ.

ಜಾರಿ ನಿರ್ದೇಶನಾಲಯದ ಅರ್ಜಿಯ ತೀರ್ಪು ಪ್ರಕಟಿಸುವವರೆಗೆ ಅರವಿಂದ್ ಕೇಜ್ರಿವಾಲ್ ಅವರ ಬಿಡುಗಡೆಗೆ ಹೈಕೋರ್ಟ್ ತಡೆ ನೀಡಿದ ನಂತರ ಅರವಿಂದ್ ಕೇಜ್ರಿವಾಲ್ ಭಾನುವಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಂತದಲ್ಲಿ ಯಾವುದೇ ಆದೇಶವನ್ನು ಪ್ರಕಟಿಸುವುದು ಸಮಸ್ಯೆಯನ್ನು ಮುಂಚಿತವಾಗಿ ನಿರ್ಣಯಿಸಿದಂತೆ ಎಂದು ಸುಪ್ರೀಂ ಕೋರ್ಟ್ ಇಂದು ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ತಿಳಿಸಿದೆ.

“ನಾವು ಈ ಹಂತದಲ್ಲಿ ಯಾವುದೇ ಆದೇಶವನ್ನು ನೀಡಿದರೆ, ನಾವು ಸಮಸ್ಯೆಯನ್ನು ಮುಂಚಿತವಾಗಿ ನಿರ್ಣಯಿಸಿದಂತಾಗುತ್ತದೆ. ಇದು ಬೇರೆ ಯಾವುದೋ ನ್ಯಾಯಾಲಯವಲ್ಲ ಆದರೆ ಹೈಕೋರ್ಟ್” ಎಂದು ಪೀಠವು ಸಿಂಘ್ವಿಗೆ ಹೇಳಿದೆ. ಬಳಿಕ ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿತು. ಜಾಮೀನು ಆದೇಶದ ಮೇಲಿನ ಮಧ್ಯಂತರ ತಡೆಯನ್ನು ತೆರವು ಮಾಡುವಂತೆ ಸಿಂಘ್ವಿ ಕೋರಿದ್ದರು.

ದೆಹಲಿ ಹೈಕೋರ್ಟ್ ತನ್ನ ಆದೇಶವನ್ನು ಪ್ರಕಟಿಸುವವರೆಗೆ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಬೇಕು ಎಂದು ವಕೀಲರು ಹೇಳಿದ್ದು, ದೆಹಲಿ ಮುಖ್ಯಮಂತ್ರಿ ವಿದೇಶಕ್ಕೆ ಪ್ರಯಾಣಿಸುವುದಿಲ್ಲ ಎಂದು ಅವರು ಹೇಳಿದರು.

“ನಾನು ಏನು ಕೇಳುತ್ತಿದ್ದೇನೆಂದು ನನಗೆ ತಿಳಿದಿದೆ. ಜಾರಿ ನಿರ್ದೇಶನಾಲಯವು ಕೇವಲ ಉಲ್ಲೇಖದ ಮೇರೆಗೆ ಹೈಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡಿದಂತೆ ಈ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಆದೇಶವನ್ನು ಉಚ್ಚರಿಸುವ ಮೊದಲು ತಡೆಹಿಡಿಯಬೇಕು” ಎಂದು ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ.

ಇದನ್ನೂ ಓದಿ: ಜಾಮೀನು ತಡೆ ಆದೇಶ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

ಇಡಿ ಪರ ಹಾಜರಾದ ಎಎಸ್‌ಜಿ ಎಸ್‌ವಿ ರಾಜು, ಏಜೆನ್ಸಿಯ ತಡೆಯಾಜ್ಞೆ ಅರ್ಜಿಯ ಕುರಿತು ಹೈಕೋರ್ಟ್ ಶೀಘ್ರದಲ್ಲೇ ತೀರ್ಪು ಪ್ರಕಟಿಸಲಿದೆ ಎಂದು ಹೇಳಿದರು. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 21 ರಂದು ಇಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು.

ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಕಳೆದ ವಾರ ಅವರಿಗೆ ಸಾಮಾನ್ಯ ಜಾಮೀನು ಮಂಜೂರು ಮಾಡಿದೆ. ಆದರೆ ಜಾರಿ ನಿರ್ದೇಶನಾಲಯ ಮರುದಿನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣಾ ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೆ ತಡೆ ನೀಡುವಂತೆ ಕೋರಿತ್ತು.  ಹೈಕೋರ್ಟ್‌ನಲ್ಲಿ, ಇಡಿ ವಕೀಲರು ವಿಚಾರಣಾ ನ್ಯಾಯಾಲಯದ ಆದೇಶವನ್ನು ಏಕಪಕ್ಷೀಯ ಎಂದು ಕರೆದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Mon, 24 June 24