ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯೊಡ್ಡಿದ್ದ 1975ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಅತ್ಯಂತ ಧೈರ್ಯಶಾಲಿ ತೀರ್ಪಾಗಿತ್ತು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ವ್ಯಾಖ್ಯಾನಿಸಿದ್ದಾರೆ. ಪ್ರಯಾಗ್ರಾಜ್ ಹೈಕೋರ್ಟ್ ಹೊಸ ಸಂಕೀರ್ಣದ ಶಂಕುಸ್ಥಾಪನೆ ಮಾಡಿದ ಅವರು, ಅಂದು ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿದ ತೀರ್ಪು ಮುಂದಿನ ದಿನಗಳಲ್ಲಿ ದೇಶದಲ್ಲಿ ಘೋಷಣೆಯಾದ ತುರ್ತು ಪರಿಸ್ಥಿತಿಗೂ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಅಂದು ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿಯಾಗಿದ್ದ ಜಗಮೋಹನಲಾಲ್ ಸಿನ್ಹಾ ಆದೇಶಿಸಿದ್ದರು. ಅವರು ನೀಡಿದ್ದ ಆದೇಶ ರಾಷ್ಟ್ರವನ್ನೇ ಬೆಚ್ಚಿ ಬೀಳಿಸುವಂತಿತ್ತು. ಆದರೆ ಆನಂತರದ ತುರ್ತು ಪರಿಸ್ಥಿತಿಯ ಪರಿಣಾಮಗಳನ್ನು ವಿವರಿಸಲು ನಾನು ಬಯಸುವುದಿಲ್ಲ ಎಂದು ಸಹ ಸಿಜೆಐ ರಮಣ ಹೇಳಿದ್ದಾರೆ.
1971ರ ರಾಯ್ಬರೇಲಿ ಲೋಕಸಭಾ ಕ್ಷೇತ್ರದಿಂದ ಇಂದಿರಾ ಗಾಂಧಿ ಸ್ಪರ್ಧಿಸಿದ್ದರು. ಈ ಚುನಾವಣೆಗೆ ಸಂಬಂಧಿಸಿಯೇ ಅಲಹಾಬಾದ್ ಹೈಕೋರ್ಟ್ 1975ರಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ತೀರ್ಪು ನೀಡಿತ್ತು,. ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆಯೂ ಅಲಹಾಬಾದ್ ಹೈಕೋರ್ಟ್ ತಡೆ ಒಡ್ಡಿತ್ತು.
ಸುದ್ದಿಗಳಿಗೆ ಕೋಮು ಸ್ಪರ್ಶ ಕೊಡುವ ವೆಬ್ಪೋರ್ಟಲ್, ಸೋಷಿಯಲ್ ಮೀಡಿಯಾಗಳ ವಿರುದ್ಧ ಸಿಜೆಐ ಎನ್.ವಿ.ರಮಣ ಅಸಮಾಧಾನ
ಕೆಲವು ಆನ್ಲೈನ್ ಸುದ್ದಿಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾ (Social Media)ಗಳಲ್ಲಿ ಒಂದಷ್ಟು ಸುದ್ದಿಗಳಿಗೆ ಕೋಮು ಬಣ್ಣ ಬಳಿಯುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಇಂಥ ಪ್ರವೃತ್ತಿ ದೇಶಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ (CJI N V Ramana)ಹೇಳಿದರು. ಹಾಗೇ, ವೆಬ್ ಪೋರ್ಟಲ್ಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ಪ್ರಭಾವಶಾಲಿ ಜನರ ಮಾತುಗಳನ್ನಷ್ಟೇ ಕೇಳುತ್ತವೆ. ಯಾವುದೇ ಸಂಸ್ಥೆ ಅಥವಾ ಸಾಮಾನ್ಯ ಜನರ ಬಗ್ಗೆ ಅವುಗಳ ಗಮನವಿಲ್ಲ ಎಂದೂ ವಿಷಾದ ವ್ಯಕ್ತಪಡಿಸಿದರು.
ಕೊರೊನಾ ಪ್ರಾರಂಭದ ದಿನಗಳಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಜ್ನಲ್ಲಿ ತಬ್ಲಿಘಿ ಜಮಾತ್ ಸಮಾವೇಶ ನಡೆದಿತ್ತು. ದೇಶ-ವಿದೇಶಗಳ ಸಾವಿರಾರು ಮುಸ್ಲಿಮರು ಭಾಗಿಯಾಗಿದ್ದರು. ನಂತರ ತಮ್ಮತಮ್ಮ ವಾಸಸ್ಥಳಕ್ಕೆ ತೆರಳಿದ್ದರು. ಅದು ಕೊರೊನಾ ಮಿತಿಮೀರಲು ಪ್ರಮುಖ ಕಾರಣವಾಗಿತ್ತು ಎಂದು ಈ ಬಗ್ಗೆ ವರದಿ ಮಾಡುವ ಭರದಲ್ಲಿ ಹಲವು ಮಾಧ್ಯಮಗಳು ಸುದ್ದಿಗೆ ಕೋಮು ಸ್ಪರ್ಶ ನೀಡಿವೆ. ಅಂಥ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಲವರು ಸುಪ್ರೀಂಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ಎನ್. ವಿ.ರಮಣ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂಸತ್ತಿನಲ್ಲಿ ಯಾವ ಕಾಯ್ದೆಯ ಬಗ್ಗೆಯೂ ಗುಣಮಟ್ಟದ ಚರ್ಚೆ ನಡೆಯುತ್ತಿಲ್ಲ, ಇದು ವಿಷಾದನೀಯ: ಸಿಜೆಐ ಎನ್ ವಿ ರಮಣ
ಸಿಹಿ ಸುದ್ದಿ: ಮಹಿಳೆಯರ ಎನ್ಡಿಎ ಪ್ರವೇಶ, ಶಾಶ್ವತ ಆಯೋಗಕ್ಕೆ ಕೇಂದ್ರದ ಒಪ್ಪಿಗೆ; ಸುಪ್ರೀಂಕೋರ್ಟ್ಗೆ ಮಾಹಿತಿ
(Supreme Court CJI NV Ramana says 1975 Allahabad High Court verdict Indira Gandhi disqualifying was a great courage)