Hemant Soren: ಬಂಧನದ ವಿರುದ್ಧ ಹೇಮಂತ್ ಸೊರೆನ್ ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್

|

Updated on: Feb 02, 2024 | 3:23 PM

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ಬಂಧನವನ್ನು "ಕಾನೂನುಬಾಹಿರ ಮತ್ತು ನ್ಯಾಯವ್ಯಾಪ್ತಿಯಿಂದ ಹೊರಗಿನದ್ದು ಎಂದು ಹೇಳಿದ್ದಾರೆ. "ಇಡಿ ಕೇಂದ್ರ ಸರ್ಕಾರದ (ಆದೇಶ) ಅಡಿಯಲ್ಲಿ ನಿರ್ಲಜ್ಜವಾಗಿ ವರ್ತಿಸುತ್ತಿದೆ ಮತ್ತು ಅರ್ಜಿದಾರರ ನೇತೃತ್ವದ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಅರ್ಜಿದಾರರನ್ನು ಬೇಟೆಯಾಡುತ್ತಿದೆ" ಎಂದು ಹೇಳಿದ್ದಾರೆ.

Hemant Soren: ಬಂಧನದ ವಿರುದ್ಧ ಹೇಮಂತ್ ಸೊರೆನ್ ಮನವಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಹೇಮಂತ್ ಸೊರೆನ್
Follow us on

ದೆಹಲಿ ಫೆಬ್ರುವರಿ 02: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (Enforcement Directorate) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ. ನಾವು ಮಧ್ಯಪ್ರವೇಶಿಸುತ್ತಿಲ್ಲ, ಹೈಕೋರ್ಟ್‌ಗೆ ಹೋಗಿ ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ. ಹೇಮಂತ್ ಸೋರೆನ್ ಅವರನ್ನು ಬುಧವಾರ ತಡರಾತ್ರಿ ಬಂಧಿಸಲಾಗಿದೆ.

“ಅರ್ಜಿದಾರರು ಈಗಾಗಲೇ ಜಾರ್ಖಂಡ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಗೆ ಆದ್ಯತೆ ನೀಡಿದ್ದಾರೆ ಎಂದು ನಮಗೆ ತಿಳಿಸಲಾಗಿದೆ, ಅದು ಇನ್ನೂ ಬಾಕಿ ಉಳಿದಿದೆ. ಪ್ರಕರಣದ ತ್ವರಿತ ವಿಚಾರಣೆ ಮತ್ತು ವಿಲೇವಾರಿಗಾಗಿ ಕೇಳಲು ಇದು ಅವರಿಗೆ ಮುಕ್ತವಾಗಿರುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಡಿ ನೀಡಿದ ಸಮನ್ಸ್‌ಗಳನ್ನು ಪ್ರಶ್ನಿಸಿ ಸೊರೆನ್ ಈ ಹಿಂದೆ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್  ಸೊರೆನ್  ಅರ್ಜಿಯನ್ನು ವಜಾಗೊಳಿಸಿದ ನಂತರ ನ್ಯಾಯಾಲಯ ಅವರ ಕಸ್ಟಡಿಯನ್ನು ಐದು ದಿನಗಳವರೆಗೆ ವಿಸ್ತರಿಸಿದೆ.

ತನ್ನ ಅರ್ಜಿಯಲ್ಲಿ, ಹೇಮಂತ್ ಸೊರೆನ್ ಅವರು ಸುಪ್ರೀಂಕೋರ್ಟ್‌ನಲ್ಲಿ “ಸಂಸ್ಥೆಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ರಾಜ್ಯ ಸರ್ಕಾರವನ್ನು ಬೀಳಿಸಲು ದುರುಪಯೋಗಪಡಿಸಿಕೊಂಡಿದೆ ಎಂದು ವಾದಿಸಿದ್ದಾರೆ.

“ನ್ಯಾಯಾಲಯಗಳು ಎಲ್ಲರಿಗೂ ಇರುವಂಥದ್ದು. ಉಚ್ಚ ನ್ಯಾಯಾಲಯಗಳು ಸಾಂವಿಧಾನಿಕ ನ್ಯಾಯಾಲಯಗಳು. ನಾವು ಒಬ್ಬ ವ್ಯಕ್ತಿಗೆ ಅನುಮತಿ ನೀಡಿದರೆ, ನಾವು ಎಲ್ಲರಿಗೂ ಅನುಮತಿ ನೀಡಬೇಕು” ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ತನಿಖಾ ಸಂಸ್ಥೆ ನೀಡಿರುವ ಸಮನ್ಸ್‌ಗಳನ್ನು ರದ್ದುಪಡಿಸುವಂತೆ ಮತ್ತು ಬಂಧನವನ್ನು ಅಕ್ರಮ ಎಂದು ಘೋಷಿಸುವಂತೆ ಕೋರಿ ಹೇಮಂತ್ ಸೊರೆನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸೊರರೆನ್ ತಮ್ಮ ಬಂಧನವನ್ನು “ಕಾನೂನುಬಾಹಿರ ಮತ್ತು ನ್ಯಾಯವ್ಯಾಪ್ತಿಯಿಂದ ಹೊರಗಿನದ್ದು ಎಂದು ಹೇಳಿದ್ದಾರೆ. “ಇಡಿ ಕೇಂದ್ರ ಸರ್ಕಾರದ (ಆದೇಶ) ಅಡಿಯಲ್ಲಿ ನಿರ್ಲಜ್ಜವಾಗಿ ವರ್ತಿಸುತ್ತಿದೆ ಮತ್ತು ಅರ್ಜಿದಾರರ ನೇತೃತ್ವದ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಅರ್ಜಿದಾರರನ್ನು ಬೇಟೆಯಾಡುತ್ತಿದೆ” ಎಂದು ಹೇಳಿದ್ದಾರೆ.

₹ 600 ಕೋಟಿ ಭೂ ಹಗರಣ ಮತ್ತು ಅದರ ಮನಿ ಲಾಂಡರಿಂಗ್‌ನಲ್ಲಿ ಹೇಮಂತ್ ಸೊರೆನ್ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಏತನ್ಮಧ್ಯೆ, ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕ ಚಂಪೈ ಸೊರೆನ್ ಇಂದು ಜಾರ್ಖಂಡ್‌ನ ಮುಂದಿನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ:  Hemant Soren: ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೆನ್​​​ಗೆ ನ್ಯಾಯಾಂಗ ಬಂಧನ

ಚಂಪೈ ಸೊರೆನ್ ನಿನ್ನೆ ರಾಂಚಿಯಲ್ಲಿ ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ಮುಂದಿನ ರಾಜ್ಯ ಸರ್ಕಾರ ರಚಿಸಲು ಆಹ್ವಾನಿಸುವಂತೆ ಒತ್ತಾಯಿಸಿದರು. “ನಾವು 43 ಶಾಸಕರ ಬೆಂಬಲದೊಂದಿಗೆ ವರದಿಯನ್ನು ಸಲ್ಲಿಸಿದ್ದೇವೆ. ಈ ಸಂಖ್ಯೆ 46-47 ತಲುಪುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ನಮ್ಮ ‘ಘಟಬಂಧನ್’ ಅಥವಾ ಮೈತ್ರಿ ತುಂಬಾ ಪ್ರಬಲವಾಗಿದೆ,” ಎಂದು ರಾಜ್ಯಪಾಲರನ್ನು ಭೇಟಿಯಾದ ನಂತರ ಚಂಪೈ ಸೊರೆನ್ ಹೇಳಿದರು.

ಜೆಎಂಎಂನ ಹಿರಿಯ ಸದಸ್ಯ ಮತ್ತು ಏಳು ಬಾರಿ ಶಾಸಕರಾಗಿರುವ ಸೊರೆನ್ ಅವರನ್ನು ಎಲ್ಲಾ ಶಾಸಕರು ಬೆಂಬಲಿಸುವ 49 ಸೆಕೆಂಡುಗಳ ವಿಡಿಯೊವನ್ನು ರಾಜ್ಯಪಾಲರಿಗೆ ತೋರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:13 pm, Fri, 2 February 24