Hemant Soren: ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೆನ್ಗೆ ನ್ಯಾಯಾಂಗ ಬಂಧನ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಯಲ್ಲಿದ್ದ ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಇಂದು ರಾಂಚಿಯ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೀಗ ಅವರನ್ನು ಒಂದು ದಿನದ ಮಟ್ಟಿಗೆ ನ್ಯಾಯಂಗ ಬಂಧನದಲ್ಲಿ ಇರಿಸುವಂತೆ ಆದೇಶ ನೀಡಿದೆ.
ರಾಂಚಿ, ಫೆ.1: ಜಾರ್ಖಂಡ್‌ನ (Jharkhand) ಮಾಜಿ ಸಿಎಂ ಹಾಗೂ ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ (Hemant Soren) ಅವರು ಇಂದು ರಾಂಚಿಯ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೀಗ ಅವರನ್ನು ಸದ್ಯಕ್ಕೆ ಒಂದು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗುವುದು ಎಂದು ನ್ಯಾಯಾಲಯ ಆದೇಶ ನೀಡಿದೆ.ಹೇಮಂತ್ ಸೊರೆನ್ ಅವರನ್ನು 10 ದಿನಗಳ ಕಾಲ ನ್ಯಾಯಂಗ ಬಂಧನದಲ್ಲಿ ಇಡಬೇಕು ಎಂದು ಇಡಿಯು ನ್ಯಾಯಾಲಯಕ್ಕೆ ಮನವಿಯನ್ನು ಮಾಡಿತ್ತು. ಆದರೆ ಈ ಆದೇಶವನ್ನು ಕಾಯ್ದಿರಿಸಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಹೇಮಂತ್ ಸೊರೆನ್ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬುಧವಾರ ರಾತ್ರಿ ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯನ್ನು ತೋರೆದಿದ್ದಾರೆ, ಇದೇ ಸಮಯದಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಅವರನ್ನು ಬಂಧಿಸಿದೆ.
ಹೇಮಂತ್ ಸೊರೆನ್ ಅವರ ಮೇಲೆ ಭೂ- ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಬಗ್ಗೆ ನಮ್ಮಲ್ಲಿ ಸಾಕ್ಷಿಗಳು ಇದೆ, ನಾವು ಅದನ್ನು ಕೋರ್ಟ್ಗೆ ಹಾಜರುಪಡಿಸುತ್ತೇವೆ ಎಂದು ಇಡಿ ಹೇಳಿದ. ಇನ್ನು ಇಡಿ ಪ್ರಕಾರ ಮುಖ್ಯಮಂತ್ರಿ ಕಚೇರಿಯಲ್ಲಿ ದಲ್ಲಾಳಿಗಳು ಮತ್ತು ಉದ್ಯಮಿಗಳು ಅಕ್ರಮವಾಗಿ ನಕಲಿ ದಾಖಲೆಗಳನ್ನು ಮಾಡುವುದು ಹಾಗೂ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಹಲವು ಸರ್ಕಾರಿ ಭೂಮಿಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಹೇಳಿತ್ತು. ಇದೀಗ ಈ ವಿಚಾರವಾಗಿ ಇಡಿ ತನಿಖೆ ನಡೆಸುತ್ತಿದೆ. ಇದಕ್ಕಾಗಿ ಹೇಮಂತ್ ಸೊರೆನ್ ಅವರಿಗೆ 10 ದಿನಗಳ ಕಾಲ ನ್ಯಾಯಂಗ ಬಂಧನ ವಿಧಿಸಬೇಕು ಎಂದು ಹೇಳಿದೆ.
ಎಎನ್ಐ ವಿಡಿಯೋ ಇಲ್ಲಿದೆ
#WATCH | Former Jharkhand CM and JMM executive president Hemant Soren leaves from PMLA Court in Ranchi.
Hemant Soren has been sent to judicial custody for one day. pic.twitter.com/jMz4yAveLm
— ANI (@ANI) February 1, 2024
ಹೇಮಂತ್ ಸೊರೆನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜೆಎಂಎಂ ಪಕ್ಷದ ನಾಯಕ ಚಂಪೈ ಸೊರೆನ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಇಂದು ಸಂಜೆ 5.30ಕ್ಕೆ ಚಂಪೈ ಸೊರೆನ್ ಅವರನ್ನು ರಾಜಭವನಕ್ಕೆ ಆಹ್ವಾನಿಸಿದ್ದಾರೆ.
ಇದನ್ನೂ ಓದಿ: 23 ವರ್ಷಗಳಲ್ಲಿ 12 ಮುಖ್ಯಮಂತ್ರಿಗಳನ್ನು ಕಂಡ ಹೊಸ ರಾಜ್ಯ ಜಾರ್ಖಂಡ್
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಸೊರೆನ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಪಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇಡಿ ನನ್ನ ಮೇಲೆ ಭೂ ಹಗರಣದ ಆರೋಪ ಮಾಡುತ್ತಿದೆ. ಆದರೆ ಆ ಭೂಮಿ ಎಂದಿಗೂ ಮಾರಾಟವಾಗುವುದಿಲ್ಲ. ನನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಡಿಗೆ ಸಿಗಲಿಲ್ಲ. ದೆಹಲಿಯಲ್ಲಿಯೂ ದಾಳಿ ಮಾಡಿ ಏನೂ ಸಿಗಲಿಲ್ಲ. ಇಡಿ ಈಗಾಗಲೇ ನನ್ನನ್ನು ತನಿಖೆ ಮಾಡಿದೆ. ಅವರ ಎಲ್ಲ ಪ್ರಶ್ನೆಗೂ ನಾನು ಉತ್ತರಿಸಿದ್ದೇನೆ ಎಂದು ಹೇಳಿದ್ದಾರೆ. ಇಂದು ಸಂಜೆ ನನ್ನನ್ನೂ ಬಂಧಿಸುತ್ತಾರೆ. ಆದರೆ ನನಗೆ ಯಾವುದೇ ಭಯವಿಲ್ಲ, ನಾನು ಶಿಬು ಸೋರೆನ್ ಅವರ ಮಗ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Thu, 1 February 24