ಉತ್ತರ ಪ್ರದೇಶ: ಆನ್ಲೈನ್ನಲ್ಲಿ ಎಮ್ಮೆ ಆರ್ಡರ್ ಮಾಡಲು ಹೋಗಿ ಮೋಸದ ಜಾಲಕ್ಕೆ ಬಿದ್ದ ವ್ಯಾಪಾರಿ
ಸುನಿಲ್ ಕುಮಾರ್ ವಿಡಿಯೊದಲ್ಲಿ ಉಲ್ಲೇಖಿಸಲಾದ ದೂರವಾಣಿ ಸಂಖ್ಯೆಗೆ ಕಿಸಾನ್ ಭಯ್ಯಾ ಡೈರಿ ಫಾರ್ಮ್ ಅನ್ನು ಸಂಪರ್ಕಿಸಿದ್ದು ಜೈಪುರ ಮೂಲದ ಉದ್ಯಮಿ ಶುಭಂ ಅವರೊಂದಿಗೆ ಮಾತನಾಡಿದ್ದಾರೆ. ಅವರು ಎಮ್ಮೆ ಉತ್ತಮ ತಳಿಯದ್ದು, ಪ್ರತಿದಿನ 18 ಲೀಟರ್ ಹಾಲು ಕೊಡುತ್ತದೆ ಎಂದು ಭರವಸೆ ನೀಡಿದರು.

ಲಕ್ನೋ ಫೆಬ್ರುವರಿ 01: ನಿಮ್ಮ ಆನ್‌ಲೈನ್ ಆರ್ಡರ್‌ಗಳು ಸಮಯಕ್ಕೆ ಸರಿಯಾಗಿ ಬರದಿದ್ದರೆ ಏನು ಮಾಡುತ್ತೀರಿ? ಅಂತಹ ಸನ್ನಿವೇಶದಲ್ಲಿ ಗ್ರಾಹಕರ ಸಹಾಯವಾಣಿಯನ್ನು ಸಂಪರ್ಕಿಸುವುದು ಬಹುಶಃ ಏಕೈಕ ಆಯ್ಕೆಯಾಗಿದೆ. ಆದರೆ ಉತ್ತರಪ್ರದೇಶದಲ್ಲಿ (Uttar Pradesh) ಎಮ್ಮೆ (Buffalo) ಖರೀದಿ ಮಾಡಲು ಆನ್ ಲೈನ್ನಲ್ಲಿ ಆರ್ಡರ್ ಮಾಡಿದ ಹಾಲಿನ ವ್ಯಾಪಾರಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಯ್ ಬರೇಲಿಯ (Rae Bareli) ಹೈನುಗಾರ ಸುನಿಲ್ ಕುಮಾರ್ ಯೂಟ್ಯೂಬ್ ನಲ್ಲಿ ಎಮ್ಮೆಯ ವಿಡಿಯೊ ನೋಡಿ ಆರ್ಡರ್ ಮಾಡಿದ್ದರು.
ವಿಡಿಯೊದಲ್ಲಿ ಉಲ್ಲೇಖಿಸಲಾದ ದೂರವಾಣಿ ಸಂಖ್ಯೆಗೆ ಕಿಸಾನ್ ಭಯ್ಯಾ ಡೈರಿ ಫಾರ್ಮ್ ಅನ್ನು ಸಂಪರ್ಕಿಸಿದ ಅವರು ಜೈಪುರ ಮೂಲದ ಉದ್ಯಮಿ ಶುಭಂ ಅವರೊಂದಿಗೆ ಮಾತನಾಡಿದ್ದಾರೆ. ಅವರು ಎಮ್ಮೆ ಉತ್ತಮ ತಳಿಯದ್ದು, ಪ್ರತಿದಿನ 18 ಲೀಟರ್ ಹಾಲು ಕೊಡುತ್ತದೆ ಎಂದು ಭರವಸೆ ನೀಡಿದರು.
ಶುಭಂ, ಕುಮಾರ್ ಅವರಿಗೆ ಎಮ್ಮೆಯ ವಿಡಿಯೊವನ್ನು ಕಳುಹಿಸಿದ್ದು, ಅದರ ಬೆಲೆ ₹ 55,000 ಎಂದು ತಿಳಿಸಿದ್ದಾರೆ. ಖರೀದಿಗೆ ಮುನ್ನ ₹ 10,000 ಮುಂಗಡ ಹಣ ನೀಡುವಂತೆ ಹೇಳಿದ್ದಾರೆ. ಎಮ್ಮೆ ಖರೀದಿಸಲು ನಿರ್ಧರಿಸಿದ ಹಾಲಿನ ವ್ಯಾಪಾರಿ ತಕ್ಷಣ ಹಣ ವರ್ಗಾಯಿಸಿದರು. ಮರುದಿನ ಎಮ್ಮೆ ತಲುಪಿಸುವುದಾಗಿ ಹೇಳಿದ್ದರು. ಆದರೆ ಅದು ಬರದೇ ಇದ್ದಾಗ ಕುಮಾರ್ ಮಾರಾಟಗಾರನಿಗೆ ಮತ್ತೊಮ್ಮೆ ಕರೆ ಮಾಡಿದ್ದಾರೆ. ಆಗ ₹ 25,000 ವರ್ಗಾಯಿಸಲು ಕೇಳಲಾಯಿತು.+
ಇದನ್ನೂ ಓದಿ:ಉತ್ತರ ಪ್ರದೇಶ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಅಯೋಧ್ಯೆ ರಾಮಮಂದಿರ, ಹೆಚ್ಚಲಿದೆ ಆದಾಯ
“ಆದರೆ ನಾನು ಯಾವುದೇ ಹೆಚ್ಚಿನ ಹಣ ಪಾವತಿಯನ್ನು ಮಾಡಲಿಲ್ಲ. ನಾನು ವಂಚನೆಗೆ ಬಲಿಯಾಗಿದ್ದೇನೆ ಎಂದು ಗೊತ್ತಾಯ್ತು. ಅವರು ಈಗ ನನ್ನ ಸಂಖ್ಯೆಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದಾರೆ” ಎಂದು ಹಾಲಿನ ವ್ಯಾಪಾರಿ ಸುದ್ದಿಗಾರರಿಗೆ ತಿಳಿಸಿದರು. ಈ ಸಂಬಂಧ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



