ಕೃಷ್ಣ ಜನ್ಮಭೂಮಿ ಕೇಸ್ ಹಿಂಪಡೆಯುವಂತೆ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾಗೆ ಬೆದರಿಕೆ ಪತ್ರ

ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಅವರು ಜನವರಿ 30 ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಲು ಹೋಗಿದ್ದರು. ಜನವರಿ 31 ರಂದು ದೆಹಲಿಯಲ್ಲಿರುವ ತಮ್ಮ ಮನೆಗೆ ಹಿಂದಿರುಗಿದಾಗ, ಮನೆಯ ಗೇಟ್​​ನಲ್ಲಿ ಹಳದಿ ಲಕೋಟೆಯನ್ನು ನೇತುಹಾಕಿರುವುದು ಕಂಡುಬಂದಿದೆ ಎಂದು ಗುಪ್ತಾ ನ್ಯೂಸ್ 9 ಗೆ ತಿಳಿಸಿದರು.

ಕೃಷ್ಣ ಜನ್ಮಭೂಮಿ ಕೇಸ್ ಹಿಂಪಡೆಯುವಂತೆ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾಗೆ ಬೆದರಿಕೆ ಪತ್ರ
ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಪ್ರಕರಣ
Follow us
| Updated By: Digi Tech Desk

Updated on:Feb 02, 2024 | 12:03 PM

ದೆಹಲಿ ಫೆಬ್ರುವರಿ 01: ಅಲಹಾಬಾದ್ ಹೈಕೋರ್ಟ್‌ನಲ್ಲಿ (Allahabad High Court) ದಾಖಲಾಗಿರುವ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಪ್ರಕರಣ (Krishna Janmabhoomi-Shahi Idgah case) ಹಿಂಪಡೆಯುವಂತೆ ಹಿಂದೂ ಸೇನಾ (Hindu Sena) ಮುಖ್ಯಸ್ಥ ವಿಷ್ಣು ಗುಪ್ತಾ ಅವರಿಗೆ ಬೆದರಿಕೆ ಪತ್ರವೊಂದು ಬಂದಿದೆ. ಗುಪ್ತಾ ದೂರಿನ ಮೇರೆಗೆ ಈ ಪತ್ರ ಕಳುಹಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ದೆಹಲಿ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು (FIR) ದಾಖಲಿಸಿದ್ದಾರೆ. ಈ ಪ್ರಕರಣದಿಂದ ಹಿಂದೆ ಸರಿಯದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ಮೂರು ಲೈವ್ ಗುಂಡುಗಳ ಜತೆ ಗುಪ್ತಾ ಅವರಿಗೆ ಈ ಪತ್ರ ಬಂದಿದೆ.

ಗುಪ್ತಾ ಅವರು ಜನವರಿ 30 ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಲು ಹೋಗಿದ್ದರು. ಜನವರಿ 31 ರಂದು ದೆಹಲಿಯಲ್ಲಿರುವ ತಮ್ಮ ಮನೆಗೆ ಹಿಂದಿರುಗಿದಾಗ  ಮನೆಯ ಗೇಟ್​​ನಲ್ಲಿ ಹಳದಿ ಲಕೋಟೆಯನ್ನು ನೇತುಹಾಕಿರುವುದು ಕಂಡುಬಂದಿದೆ ಎಂದು ಗುಪ್ತಾ ನ್ಯೂಸ್ 9 ಗೆ ತಿಳಿಸಿದರು.

ಹಳದಿ ಲಕೋಟೆಯಲ್ಲಿ, ಮೂರು ಲೈವ್ ಗುಂಡುಗಳು ಮತ್ತು ಬಿಳಿ ಹಾಳೆಯ ಮೇಲೆ ಕೈಯಿಂದ ಬರೆದ ಪತ್ರ ಸಿಕ್ಕಿದೆ. ಈ ಪತ್ರದಲ್ಲಿ ಬಾಬರಿ ಮಸೀದಿ ಧ್ವಂಸವಾಗಿದೆ. ಆದರೆ ನಾವು ಯಾವುದೇ ಮಸೀದಿಯನ್ನು ಇಲ್ಲದಾಗಲು ಬಿಡುವುದಿಲ್ಲ. ಪ್ರಕರಣ ಹಿಂದಕ್ಕೆ ತೆಗೆದುಕೊಳ್ಳುವಂತೆ ಪತ್ರದಲ್ಲಿ ನನಗೆ ಬೆದರಿಕೆ ಹಾಕಲಾಗಿದೆ. ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ನಾನು ಹಾಗೆ ಮಾಡದಿದ್ದರೆ ನನ್ನನ್ನು ಕೊಲ್ಲಲಾಗುವುದು. ಈ ಮೂರು ಗುಂಡುಗಳು ನಿಮ್ಮನ್ನು ತಲುಪಿದಾಗ, ನಾಲ್ಕನೇ ಗುಂಡು ನಿಮ್ಮ ತಲೆಗೆ ಹೊಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿಗೆ ಎಂದು ಗುಪ್ತಾ ನ್ಯೂಸ್ 9 ಗೆ ತಿಳಿಸಿದರು.

ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಬೆದರಿಕೆ ಪತ್ರ ಮತ್ತು ಲೈವ್ ಕಾಟ್ರಿಡ್ಜ್‌ಗಳನ್ನು ಕಳುಹಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕಾಟ್ರಿಡ್ಜ್‌ಗಳು ಮತ್ತು ಪತ್ರವನ್ನು ಅವರಿಗೆ ಹಸ್ತಾಂತರಿಸಿದ್ದೇನೆ ಎಂದು ಗುಪ್ತಾ ಹೇಳಿದರು.

ಗುಪ್ತಾ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲು

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 506 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ರಾಷ್ಟ್ರ ರಾಜಧಾನಿಯ ಪೂರ್ವ ದೆಹಲಿ ಜಿಲ್ಲೆಯ ಮಧು ವಿಹಾರ್ ಪೊಲೀಸ್ ಠಾಣೆಯಿಂದ ಎಫ್‌ಐಆರ್ ದಾಖಲಿಸಲಾಗಿದೆ.

ನಾವು ಹೆದರುವುದಿಲ್ಲ. ಶ್ರೀಕೃಷ್ಣ ಜನ್ಮಭೂಮಿ ಪ್ರಕರಣವನ್ನು ನಾವು ಪೂರ್ಣ ಶಕ್ತಿಯಿಂದ ಹೋರಾಡುತ್ತೇವೆ. ನ್ಯಾಯಾಲಯಗಳಲ್ಲಿ ಸುದೀರ್ಘ ಕಾನೂನು ಹೋರಾಟದ ನಂತರ ಶ್ರೀರಾಮ ಮಂದಿರವನ್ನು ನಿರ್ಮಿಸಲಾಗುತ್ತಿದz.ವಾರಣಾಸಿ ಯ ಜ್ಞಾನವಾಪಿ ಪ್ರಕರಣದಲ್ಲಿ ಅದೇ ಸಂಭವಿಸುತ್ತದೆ. ಮಥುರಾದಲ್ಲಿರುವ ಶಾಹಿ ಈದ್ಗಾವನ್ನು ತೆಗೆದು ಶ್ರೀ ಕೃಷ್ಣ ಜನ್ಮಭೂಮಿ ಮಂದಿರವನ್ನು ನಿರ್ಮಿಸಲಾಗುವುದು ಎಂದು ಗುಪ್ತಾ ಹೇಳಿದರು.

ಇದನ್ನೂ ಓದಿ: ಶ್ರೀಕೃಷ್ಣ ಜನ್ಮಭೂಮಿ ವಿವಾದ: ಮಸೀದಿ ಸಮೀಕ್ಷೆ ತಡೆಯಾಜ್ಞೆ ಆದೇಶ ವಿಸ್ತರಿಸಿದ ಸುಪ್ರೀಂ

ಮಥುರಾದಲ್ಲಿರುವ ಶಾಹಿ ಈದ್ಗಾ ಸಮೀಕ್ಷೆ ಮಾಡುವಂತೆ ಅರ್ಜಿ

ಗುಪ್ತಾ ಅವರು ಮಥುರಾದ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾದ ಅಧಿಕೃತ ಸಮೀಕ್ಷೆಯನ್ನು ಕೋರಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗುಪ್ತಾ ಅವರ ಮನವಿಯ ಜೊತೆಗೆ, ವಿವಿಧ ಹಿಂದೂ ಸಂಘಟನೆಗಳು ಕೂಡಾ ವಿವಿಧ ಅರ್ಜಿಗಳನ್ನು ಸಲ್ಲಿಸಿವೆ ಭಗವಾನ್ ಕೃಷ್ಣನ ಜನ್ಮಸ್ಥಳವು ಶಾಹಿ ಈದ್ಗಾದ ಕೆಳಗೆ ಇದೆ ಎಂದು ಹಿಂದೂ ಸಂಘಟನೆಗಳು ಹೇಳಿಕೊಂಡಿವೆ. ಮಸೀದಿಯ ಕಂಬದ ಬುಡದಲ್ಲಿ ಗೋಚರಿಸುವ ವಿವಿಧ ಹಿಂದೂ ಧಾರ್ಮಿಕ ಚಿಹ್ನೆಗಳು ಮತ್ತು ಕೆತ್ತನೆಗಳು ಶಾಹಿ ಈದ್ಗಾವು ಹಿಂದೂ ದೇವಾಲಯವಾಗಿತ್ತು ಎಂಬುದರ ಪುರಾವೆ ಆಗಿದೆ.

ಸರ್ವೇ ಮಾಡಲು ಅನುಮತಿ ನೀಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ದೇವರು (ಭಗವಾನ್ ಶ್ರೀಕೃಷ್ಣ ವಿರಾಜಮಾನ) ಮತ್ತು ಇತರ ಏಳು ಮಂದಿ ಸಲ್ಲಿಸಿದ ಮನವಿಯನ್ನು ಆಲಿಸಿದ ಹೈಕೋರ್ಟ್, ಕಳೆದ ವರ್ಷ ಡಿಸೆಂಬರ್ 14 ರಂದು ಶಾಹಿ ಈದ್ಗಾ ಸಂಕೀರ್ಣದ ನ್ಯಾಯಾಲಯದ ಮೇಲ್ವಿಚಾರಣೆಯ ಸಮೀಕ್ಷೆಗೆ ಅನುಮತಿ ನೀಡಿದ್ದು ವಕೀಲ ಕಮಿಷನರ್ ನೇಮಕಕ್ಕೆ ಒಪ್ಪಿಗೆ ನೀಡಿತ್ತು. ಶಾಹಿ ಮಸೀದಿ ಸಮಿತಿಯು ಸುಪ್ರೀಂಕೋರ್ಟ್‌ನಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ ನಂತರ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಯಿತು. ಈ ಹಿಂದೆ, ಮಥುರಾ ನ್ಯಾಯಾಲಯದಲ್ಲಿ ಬಾಕಿ ಇರುವ ಶ್ರೀ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಮೊಕದ್ದಮೆಗಳನ್ನು ಹೈಕೋರ್ಟ್ ಸ್ವತಃ ವರ್ಗಾಯಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Thu, 1 February 24