ಅಯೋಧ್ಯಾ ರಾಮಮಂದಿರ ವಿವಾದಕ್ಕೆ ಇಂದಾದರೂ ಬೀಳುತ್ತಾ ತೆರೆ?

ನವದೆಹಲಿ: ಅಯೋಧ್ಯಾ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನ ಸಂವಿಧಾನ ಪೀಠದಲ್ಲಿ ಇಂದು ಕೊನೆಯ ದಿನದ ವಿಚಾರಣೆ ನಡೆದಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ರಾಮ ಜನ್ಮಭೂಮಿ-ಬಾಬರಿ ಮಸೀದಿ ಮೊಕದ್ದಮೆಯ ವಿಚಾರಣೆ 39 ದಿನಗಳಿಂದ ನಡೆಸುತ್ತಿದೆ. ಈ ಮೊದಲು ಅಕ್ಟೋಬರ್ 18 ರಂದು ವಾದ-ಪ್ರತಿವಾದ ಮುಗಿಸಲು ಗಡುವನ್ನು ನಿಗದಿಪಡಿಸಿತ್ತು. ನಂತರ ಅದನ್ನು ಅಕ್ಟೋಬರ್ 17 ಕ್ಕೆ ತರಲಾಯಿತು, ಆದರೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ […]

ಅಯೋಧ್ಯಾ ರಾಮಮಂದಿರ ವಿವಾದಕ್ಕೆ ಇಂದಾದರೂ ಬೀಳುತ್ತಾ ತೆರೆ?
ಸಾಧು ಶ್ರೀನಾಥ್​

Updated on: Oct 16, 2019 | 3:26 PM

ನವದೆಹಲಿ: ಅಯೋಧ್ಯಾ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನ ಸಂವಿಧಾನ ಪೀಠದಲ್ಲಿ ಇಂದು ಕೊನೆಯ ದಿನದ ವಿಚಾರಣೆ ನಡೆದಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ರಾಮ ಜನ್ಮಭೂಮಿ-ಬಾಬರಿ ಮಸೀದಿ ಮೊಕದ್ದಮೆಯ ವಿಚಾರಣೆ 39 ದಿನಗಳಿಂದ ನಡೆಸುತ್ತಿದೆ. ಈ ಮೊದಲು ಅಕ್ಟೋಬರ್ 18 ರಂದು ವಾದ-ಪ್ರತಿವಾದ ಮುಗಿಸಲು ಗಡುವನ್ನು ನಿಗದಿಪಡಿಸಿತ್ತು. ನಂತರ ಅದನ್ನು ಅಕ್ಟೋಬರ್ 17 ಕ್ಕೆ ತರಲಾಯಿತು, ಆದರೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಇನ್ನೂ ಹೆಚ್ಚಿನ ಸಮಯವನ್ನು ನೀಡುವುದಿಲ್ಲ, ಇಂದು ಸಂಜೆ 5ರೊಳಗೆ ವಿಚಾರಣೆ ಪೂರ್ಣಗೊಳ್ಳಲಿದೆ.  ಎಲ್ಲಾ ವಾದಗಳನ್ನು ಮುಕ್ತಾಯಗೊಳಿಸಲೇಬೇಕು ಎಂದು ಖಡಕ್ಕಾಗಿ ಸೂಚಿಸಿದೆ.

ವಾದಗಳು ಮುಕ್ತಾಯವಾದರೆ ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸುತ್ತದೆ. ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್‌ಎ ನಜೀರ್ ಅವರನ್ನು ಒಳಗೊಂಡ ನ್ಯಾಯಪೀಠವು ನವೆಂಬರ್ 17 ರೊಳಗೆ ತೀರ್ಪನ್ನು ಪ್ರಕಟಿಸಬೇಕಾಗಿದೆ. ಏಕೆಂದರೆ ಆ ದಿನಾಂಕ ದಂದು ಸಿಜೆಐ ನಿವೃತ್ತಿ ಹೊಂದಲಿದ್ದಾರೆ. ಅವರ ನಿವೃತ್ತಿಯ ಮೊದಲು ತೀರ್ಪು ನೀಡದಿದ್ದರೆ, ಇಡೀ ವಿಷಯವನ್ನು ಹೊಸದಾಗಿ ಆಲಿಸಬೇಕಾಗುತ್ತದೆ. ಆದ್ದರಿಂದ ಇಂದೇ ವಾದ-ಪ್ರತಿವಾದ ಮುಗಿಯಬೇಕಿದೆ.

ಅಲಹಾಬಾದ್ ಹೈಕೋರ್ಟ್‌ನಲ್ಲಿ ಸೆಪ್ಟೆಂಬರ್ 2010 ರ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿ ಗೊಗೊಯ್ ನೇತೃತ್ವದ ಪಂಚ ಸದಸ್ಯರ ಪೀಠವು  ನಡೆಸುತ್ತಿದೆ. ಸದರಿ ಹೈಕೋರ್ಟ್‌ ಈ ಹಿಂದೆ, ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯನ್ನು ನಿರ್ಮೋಹಿ ಅಖರಾ, ಸುನ್ನಿ ವಕ್ಫ್​ ಬೋರ್ಡ್, ಯುಪಿ ಸರ್ಕಾರ ಮತ್ತು ರಾಮ್‌ಲಲ್ಲಾ ವಿರಾಜ್ಮಾನ್ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಆದೇಶಿಸಿದೆ. 16 ನೇ ಶತಮಾನದ ಬಾಬರಿ ಮಸೀದಿಯನ್ನು 1992 ರ ಡಿಸೆಂಬರ್ 6 ರಂದು ಕೆಡವಲಾಯಿತು.

Published On - 1:53 pm, Wed, 16 October 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us